ಗೋವು ರಾಷ್ಟ್ರಮಾತೆಯಾಗಲಿ : ಬಂಡಾರಕೇರಿ ಶ್ರೀ

0
289

 
ನಮ್ಮ ಪ್ರತಿನಿಧಿ ವರದಿ
ಭಗವಂತನ ಮುಂದೆ ಬಾಗಿದವನು ಭಗವಂತನೇ ಆಗುವನು : ರಾಘವೇಶ್ವರಶ್ರೀ
ಭಗವಂತನ ಮುಂದೆ ಬಾಗಿದವನು ಭಗವಂತನೇ ಆಗುವನು. ಹನುಮಂತ ರಾಮಚರಣದೆಡೆಗೆ ಬಾಗಿ ರಾಮಸೇವಕ ರೂಪದಲ್ಲಿ ಸ್ವಾಮಿಯಾದನು ಎಂದು ‘ಒಡಲು’ ಸಭಾಂಗಣದ ‘ಮಡಿಲು’ ವೇದಿಕೆಯಲ್ಲಿ ಸಾನ್ನಿಧ್ಯ ವಹಿಸಿದ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ತಮ್ಮ ಗೋಚಾತುರ್ಮಾಸ್ಯ ಸಂದೇಶದಲ್ಲಿ ಹೇಳಿದರು.
 
 
 
ಶ್ರೀರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠದಲ್ಲಿ ಗೋಕರ್ಣ ಉಪಾಧಿವಂತರುಗಳ ಸರ್ವಸೇವೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು, ಗೋವುಗಳ ಬಣ್ಣ ಹಲವು ಆದರೆ ಹಾಲಿನ ಬಣ್ಣ ಸ್ವಚ್ಚ ಬಿಳಿ, ಹಾಗೆಯೇ ಸಂತ ಪರಂಪರೆ ಬೇರೆಬೇರೆಯಾದರೂ ಸಂತರು ನೀಡುವ ಉಪದೇಶ ಒಂದೇ. ಅದರಲ್ಲಿ ಭಿನ್ನತೆಯಿರದೇ ಜೀವಹಿತಕರವಾದ ಸಂದೇಶವಿರುತ್ತದೆ. ಗೋಮಾತೆಯ ಮೂಕಸೇವೆ ಮನುಕುಲಕ್ಕೆ ಜೀವಾಮೃತವಾಗಿದೆ. ಹಾಗೆಯೇ ಸದ್ದಿಲ್ಲದೆ ಗೋಸೇವಕರು ಮಾಡುವ ಸೇವೆಯನ್ನು ಸಮಾಜ ಗುರುತಿಸಬೇಕು. ಒಳಿತಿನ ಆಸೆ ಸಾಧನೆಗೆ ಪೂರಕವಾಗಿರುತ್ತದೆ. ಅಂತಹ ಆಸೆಯನ್ನು ಮಾಡಿ ಸಾಧಕರಾಗೋಣ ಎಂದು ಆಶೀರ್ವದಿಸಿದರು.
 
 
 
ಭಂಡಾರಕೇರಿ ಮಠದ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರು ಸಂತಸಂದೇಶ ನೀಡಿ, ಗೋವು ಕೇವಲ ರಾಷ್ಟ್ರಪ್ರಾಣಿ ಅಲ್ಲ, ರಾಷ್ಟ್ರ ಮಾತೆಯಾಗಬೇಕು. ಗೋವು ಜಗತ್ತಿನ ಆಧಾರಸ್ತಂಭಗಳಲ್ಲೊಂದು. ಭಾರತೀಯ ಗೋವಂಶ ಬಹಳ ಪಾವಿತ್ರ್ಯತೆಯಿಂದ ಕೂಡಿದೆ ಎಂದರು.
 
 
 
ಪದ್ಮಪುರಾಣದ ಆಯ್ದ ಶ್ಲೋಕವನ್ನು ಸಭೆಗೆ ಉಪದೇಶಿಸಿದ ಭಂಡಾರಕೇರಿಶ್ರೀಗಳು ಗೋಸಂರಕ್ಷಣೆ ಅಭಯಪ್ರದ, ಗೋಮಾರಾಟ ಮಹಾಪಾಪ. ಪರಿಸರ ರಕ್ಷಣೆ, ರೋಗರುಜಿನಗಳನ್ನು ಕಡಿಮೆ ಮಾಡುವ ಗೋವುಗಳ ಮಧ್ಯೆ ಬದುಕುವುದರಿಂದ ಬದುಕು ಬಂಗಾರವಾಗುತ್ತದೆ. ಭಾರತದ ಎಲ್ಲಾ ತಳಿಗಳನ್ನು ಸಂರಕ್ಷಿಸುತ್ತಿರುವ ಶ್ರೀರಾಮಚಂದ್ರಾಪುರಮಠದ ಶ್ರೀಗಳು ‘ಗೋಪಾಲೇಶ್ವರ’ರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
 
 
 
ಗೋಸೇವಕ ಪುರಸ್ಕಾರ ಸ್ವೀಕರಿಸಿದ ಡಾ. ಸುಬ್ಬಯ್ಯ, ಕೊಟ್ಟಿಗೆ ಗೊಬ್ಬರ ತಯಾರಿಕೆಯ ಬಗ್ಗೆ ಮಾಹಿತಿ ನೀಡಿದರು. ಇನ್ನೊರ್ವ ಗೋಸೇವಾ ಪುರಸ್ಕೃತ ಶ್ರೀಕಾಂತ ಬೆಟಗೇರಿ, ತಮ್ಮ ಟ್ರಸ್ಟ್ ಮೂಲಕ ಬುದ್ದಿಮಾಂದ್ಯ ಮಕ್ಕಳು ಗೋಶಾಲೆ ನಿರ್ವಹಿಸುತ್ತಿರುವ ಬಗ್ಗೆ ವಿವರಿಸಿದರು. ಶ್ರೀಭಾರತೀಪ್ರಕಾಶನವು ಹೊರತಂದ ಕೃಷ್ಣಾನಂದ ಶರ್ಮಾ ಬರೆದ ಹನುಮದ್ವಿಕಾಸ ಎಂಬ ಪುಸ್ತಕ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ಧ್ವನಿಮುದ್ರಿಕೆಯನ್ನು ರಾಘವೇಶ್ವರಶ್ರೀಗಳು ಲೋಕಾರ್ಪಣೆ ಮಾಡಿದರು.
 
 
 
ಸಮ್ಮುಖ ಸರ್ವಾಧಿಕಾರಿ ಟಿ. ಮಡಿಯಾಲ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಜಿ. ಭಟ್, ಶ್ರೀಸಂಸ್ಥಾನದವರ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
 
 
ಇಂದಿನ ಕಾರ್ಯಕ್ರಮ (22-07-2016):
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಬೆಳಗ್ಗೆ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ
ಅಪರಾಹ್ನ 3.00 :
ಗೋಸಂದೇಶ : ಗವ್ಯ ಮಾರುಕಟ್ಟೆ
ಲೋಕಾರ್ಪಣೆ : ನಿತ್ಯೋಪಾಸನಾ – ಪುಸ್ತಕ, ಸಾಧನಾಪಂಚಕ ಪ್ರವಚನಮಾಲಿಕೆ – ಧ್ವನಿಮುದ್ರಿಕೆ
ಗೋಸೇವಕ ಪುರಸ್ಕಾರ : ಭಾಜನರು – ಶ್ರೀನಿವಾಸ ರೆಡ್ಡಿ
ಸಂತ ಸಂದೇಶ : ಶ್ರೀ ಶ್ರೀ ಕೇಶವನಿಧಿತೀರ್ಥರು, ಶ್ರೀಶ್ರೀವಾದಿರಾಜಮಠ (ಮುಳಬಾಗಿಲುಮಠ).
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ 5.00 : ಕಲಾರಾಮ – ಯೋಗ ಪ್ರದರ್ಶನ
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ

LEAVE A REPLY

Please enter your comment!
Please enter your name here