ಗೋವಾಕ್ಕೆ ಪ್ರಯಾಣ ಬೆಳೆಸಿದ ಯಶ್ ಕುಟುಂಬ

0
134

ಸಿನಿ ಪ್ರತಿನಿಧಿ ವರದಿ
ನಾಳೆ ನಟ ಯಶ್, ನಟಿ ರಾಧಿಕಾ ಪಂಡಿತ್ ನಿಶ್ಚಿತಾರ್ಥ ಹಿನ್ನೆಲೆಯಲ್ಲಿ ಯಶ್ ತಾಯಿ ಪುಷ್ಟ, ತಂದೆ ಅರುಣ್ ಕುಮಾರ್, ತಂಗಿ ನಂದಿನಿ, ಕ್ರೇಜಿಸ್ಟಾರ್ ರವಿಚಂದ್ರನ್, ನಿರ್ದೇಶಕರಾದ ಮಹೇಶ್ ರಾವ್, ನಿರ್ಮಾಪಕ ಕೆ.ಮಂಜು, ಅನಿಲ್ ಸೇರಿದಂತೆ ಇತರರು ಗೋವಾಗೆ ಪ್ರಯಾಣ ಬೆಳೆಸಿದ್ದಾರೆ.
 
 
ಇಂದು ಯಶ್ ಏನೇ ಆಗಿದ್ದರೂ ಅದು ಅಭಿಮಾನಿಗಳಿಂದ. ಯಶ್ ಮದುವೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಇಂದು ರಾಧಿಕಾ ಪಂಡಿತ್ ಮನೆಯವರ ಜತೆ ಮಾತುಕತೆ ನಡೆಸಿ ತಿಳಿಸುತ್ತೇವೆ ಎಂದು ಬೆಂಗಳೂರಿನಿಂದ ಗೋವಾಗೆ ತೆರಳುವ ಮುನ್ನ ಎಂದು ಕೆಐಎಲ್ ನಲ್ಲಿ ಯಶ್ ತಾಯಿ ಪುಷ್ಪಾ ಹೇಳಿದ್ದಾರೆ.
 
ಗೋವಾದ ಅಜ್ಞಾತಸ್ಥಳದಲ್ಲಿ ನಾಳೆ ಎಂಗೇಜ್ ಮೆಂಟ್ ನಡೆಯಲಿದೆ. ನಾಳೆ ಬೆಳಗ್ಗೆ 11ಕ್ಕೆ ಯಶ್-ರಾಧಿಕಾ ನಿಶ್ಚತಾರ್ಥ ನಡೆಯಲಿದೆ. ಗೋವಾದ ಐ ಲ್ಯಾಂಡ್ ನಲ್ಲಿ ಅದ್ದೂರಿಯಾಗಿ ಸೆಟ್ ಹಾಕಿದ್ದಾರೆ. ಆ ಸೆಟ್ ನಲ್ಲಿ ಯಶ್ -ರಾಧಿಕಾ ನಿಶ್ಚಿತಾರ್ಥ ನಡೆಯುವ ಸಾಧ್ಯತೆ ಇದೆ. ಅಲ್ಲದೆ ಗೋವಾದಲ್ಲಿ ‘ಸಂತು ಸ್ಟ್ರೇಟ್ ಫಾರ್ವರ್ಟ್’ ಚಿತ್ರೀಕರಣವಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here