ಗೋಯಾತ್ರೆ ಮಹಾಮಂಗಲಕ್ಕೆ ಬರದ ಸಿದ್ಧತೆ

0
570

 
ನಮ್ಮ ಪ್ರತಿನಿಧಿ ವರದಿ
ಮಂಗಲ ಗೋಯಾತ್ರೆಯ ಮಹಾಮಂಗಲದ ಐತಿಹಾಸಿಕ ಕಾರ್ಯಕ್ರಮಕ್ಕೆ ಮಂಗಳೂರಿನ ಮಂಗಲಭೂಮಿ ಸಜ್ಜಾಗುತ್ತಿದೆ. ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.
 
mng_goyatra
 
ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳಿಂದ ಆಗಮಿಸಿದ್ದ ಸಹಸ್ರಾರು ಕಾರ್ಯಕರ್ತರು ಮಂಗಲಭೂಮಿಗೆ ತಳಿರು ತೋರಣಗಳಿಂದ ಶೃಂಗರಿಸಿ, ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಬೃಹತ್ ಯಾಗ ಶಾಲೆಗೆ ಸೆಗಣಿ ಸಾರಿಸುವ ಮೂಲಕ ಸಾಂಪ್ರದಾಯಿಕ ಕಳೆ ಮೂಡಿಸಿದ್ದಾರೆ.
 
 
mng_goyatra1
ನಗರದ ಬೀದಿ ಬೀದಿಗಳಲ್ಲಿ ಗೋಧ್ವಜ ಕಂಗೊಳಿಸುತ್ತಿದ್ದು, ಮಹಾಮಂಗಲಕ್ಕೆ ಪೂರ್ವಭಾವಿಯಾಗಿ ಮಂಗಳೂರು ಹವ್ಯಕ ಮಹಾಸಭಾ ನೇತೃತ್ವದಲ್ಲಿ ನೂರಾರು ಸ್ವಯಂಸೇವಕರು ಪಡೀಲಿನಿಂದ ಮಂಗಲಭೂಮಿವರೆಗಿನ ಸುಮಾಥು ಏಳು ಕಿಲೋಮೀಟರ್ ಪ್ರದೇಶವನ್ನು ಪ್ಲಾಸ್ಟಿಕ್‍ಮುಕ್ತವಾಗಿಸಿ, ಅಮೃತಪಥ ನಿರ್ಮಿಸಿ ಮಾದರಿಯಾದರು.
 
mng_goyatra2
 
ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸಿರುವ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಕಾರ್ಯಕ್ರಮಕ್ಕೆ ಸಮರೋಪಾದಿ ಸಿದ್ಧತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತದ ವಿವಿಧೆಡೆಗಳಿಂದ ಸಹಸ್ರಾರು ಸಂತರು ಮಂಗಲಭೂಮಿಯತ್ತ ಮುಖಮಾಡಿದ್ದು, ಬಹಳಷ್ಟು ಮಂದಿ ಇಂದು ಮಂಗಳೂರಿಗೆ ಬರುವ ನಿರೀಕ್ಷೆ ಇದೆ.
 
mng_goyatra3
 
ಮಂಗಳೂರಿಗೆ ಗೋಯಾತ್ರೆ ಮಧ್ಯಾಹ್ನ 4ಕ್ಕೆ ಪಡೀಲಿಗೆ ಆಗಮಿಸಲಿದ್ದು, ಅಲ್ಲಿ ಭವ್ಯವಾಗಿ ಸ್ವಾಗತಿಸಿ ನಗರದಲ್ಲಿ ಭವ್ಯ ಶೋಭಾಯಾತ್ರೆ ನಡೆಯಲಿದೆ. ಸಂಜೆ ಗೋಧೂಳಿ ಲಗ್ನದಲ್ಲಿ ಯಾತ್ರೆ ಮಂಗಲಭೂಮಿಗೆ ಆಗಮಿಸಲಿದೆ.
 
mng_goyatra5
 
ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಹಸಿರು ಕಾಣಿಕೆ ಸಂಗ್ರಹವಾಗುತ್ತಿದ್ದು, ಗೋಯಾತ್ರೆ ಶೋಭಾಯಾತ್ರೆ ವೇಳೆ, ವಿವಿಧ ತಾಲೂಕುಗಳಿಂದ ಆಗಮಿಸುವ ಸುವಸ್ತುಗಳನ್ನು ಒಳಗೊಂಡ ವಾಹನಗಳು ಕೂಡಾ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ.
 
 
 
ಕಾಮಧೇನು ಹವನ, ಗೋವರ್ಧನ ಪೂಜೆ, ಗೋಪೂಜೆ, ಗೋದಾನ, ಗೋ ತುಲಾಭಾರ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳಿಗೆ ಮಂಗಲಭೂಮಿ ಸಜ್ಜುಗೊಂಡಿದೆ. ವಿವಿಧೆಡೆ ದೇಸಿ ಗೋತಳಿಗಳ ಸೆಗಣಿಯಿಂದ ತಯಾರಿಸಿದ ಬೆರಣಿ ವಿಶೇಷ ಗೋವರ್ಧನ ಪರ್ವತ ನಿರ್ಮಾಣಕ್ಕಾಗಿ ಮಂಗಲಭೂಮಿಗೆ ಬಂದಿದೆ. ಗೋವರ್ಧನ ಪರ್ವತದಲ್ಲಿ ವಿಶೇಷ ಗೋವರ್ಧನ ಪೂಜೆ ನಡೆಯಲಿದೆ.
 
 
 
ಅತ್ಯಾಕರ್ಷಕ ಪ್ರದರ್ಶಿನಿಗೆ ಮಳಿಗೆಗಳು ಸಿದ್ಧಗೊಂಡಿದ್ದು, ಮುಖ್ಯವೇದಿಕೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಎರಡು ಸಾವಿರ ಸಂತರಿಗೆ ಸುಮಾರು ಮೂರು ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. 80 ಎಕರೆ ಪ್ರದೇಶದಲ್ಲಿ ಮಂಗಲಭೂಮಿ ಸಜ್ಜಗೊಂಡಿಧ್ದು, ಲಕ್ಷಾಂತರ ಗೋಪ್ರೇಮಿಗಳಿಗೆ ಪ್ರಸಾದ ಭೋಜನ ಉಣಬಡಿಸಲು ಬೃಹತ್ ಪಾಕಶಾಲೆ ನಿರ್ಮಾಣವಾಗಿದೆ.
 
 
ವಿಶೇಷ ಗೋಜ್ಯೊತಿ
ದೇಶಿ ಗೋವಿನ ಸೆಗಣಿಯಿಂದ ಉತ್ಪಾದಿಸಿದ ಗೋಬರ್ ಗ್ಯಾಸ್‍ನಿಂದ ಪ್ರಜ್ವಲಿಸುವ ವಿಶೇಷ ಗೋಜ್ಯೋತಿ ಸಿದ್ಧಪಡಿಸಲಾಗಿದೆ. 24 ಗಂಟೆಗಳ ಕಾಲ ನಿರಂತರವಾಗಿ ಒಲಿಂಪಿಕ್ ಜ್ಯೋತಿ ಮಾದರಿಯಲ್ಲಿ ಈ ಜ್ಯೋತಿ ಉರಿಯುವುದು ವಿಶೇಷ ಆಕರ್ಷಣೆಯಾಗಲಿದೆ. ಕಿನ್ನಿಗೋಳಿ ಯಳತ್ತೂರಿನ ಶಕ್ತಿದರ್ಶನ ಯೋಗಾಶ್ರಮ ಇದಕ್ಕಾಗಿ ದೇಸಿ ಹಸುಗಳ ಸೆಗಣಿಯನ್ನು ಪೂರೈಸಿದೆ.
ನಗರದಾದ್ಯಂತ ಬುಧವಾರ ಗೋಯಾತ್ರಾ ಪ್ರಚಾರರಥ ಸಂಚರಿಸಿದ್ದು, ಜನ ಉತ್ಸಾಹದ ಪ್ರತಿಕ್ರಿಯೆ ತೋರಿದರು.
 
 
 
ಚಪಾತಿ ತಯಾರಿ
ಹವ್ಯಕ ಮಹಾಮಂಡಲ ವತಿಯಿಂದ ಸಾವಿರಾರು ಮಹಿಳೆಯರು ಒಂದು ಲಕ್ಷಕ್ಕೂ ಹೆಚ್ಚು ಚಪಾತಿ ತಯಾರಿಸಿ ಮಹಾಮಂಗಲಕ್ಕೆ ಆಗಮಿಸುವ ಭಕ್ತಸ್ತೋಮಕ್ಕೆ ಉಣಬಡಿಸುವರು.

LEAVE A REPLY

Please enter your comment!
Please enter your name here