ಗೋಯಾತ್ರೆಗೆ ಸೋಲಿಲ್ಲ – ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು

0
249

 
ನಮ್ಮ ಪ್ರತಿನಿಧಿ ವರದಿ
ತುಂಗಾತೀರದ ಮಂತ್ರಾಲಯಕ್ಕೆ ಮಂಗಲಗೋಯಾತ್ರೆ ಬಂದಿರುವುದು ಕಾಮಧೇನುವು ಕಾಮಧೇನುವಿನ ಬಳಿ ಬಂದಂತಾಯಿತು ಎಂದು ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
 
 
 
ಮಂತ್ರಾಲಯದಲ್ಲಿ ದಿವ್ಯವೇದಿಕೆಯಲ್ಲಿ ನಡೆದ ಸುರಭಿಸಂತಸಂಗಮ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು, ಗೋಯಾತ್ರೆ ತುಂಗಾತೀರದ ಸನಿಹ ಬರುತ್ತಿದ್ದಂತೇ ಗೋವುಗಳು ಮುನ್ನೆಲೆಯಲ್ಲಿ ಬಂದು ಸ್ವಾಗತಿಸಿದ್ದು ಈ ಯಾತ್ರೆಗೆ ರಾಯರ ಹಾಗೂ ಗೋಮಾತೆಯ ಆಶೀರ್ವಾದವನ್ನು ಸೂಚಿಸುವಂತಿದೆ. ಇದು ಗೋಯಾತ್ರೆ ಮಂತ್ರಾಲಯಕ್ಕೆ ಬಂದ ಮೇಲೆ ಸೋಲಿಲ್ಲ ಎನ್ನುವುದನ್ನು ಖಾತ್ರಿಗೊಳಿಸಿದೆ ಎಂದು ಗೋಸಂದೇಶ ನೀಡಿದರು.
 
 
 
ಮಂತ್ರಾಲಯದ ಶ್ರೀಸುಬುಧೇಂದ್ರತೀರ್ಥ ಸ್ವಾಮಿಗಳು ಮಾತನಾಡಿ, “ಮಂಗಲಕರ ಮಂತ್ರಾಲಯವಾಸಂ” ಎಂದು ಹೇಳಲ್ಪಟ್ಟ ಮಂತ್ರಾಲಯ ಸನ್ನಿಧಿಗೆ ಮಂಗಲಗೋಯಾತ್ರೆ ಬಂದಿರುವುದು ಮತ್ತಷ್ಟು ಮಂಗಲಕರವಾಯಿತು. ಈ ಎರಡು ಕಾಮಧೇನುಗಳ ಸಮ್ಮಿಲನ ಉಂಟಾದ ಸಮಯ ಪುಣ್ಯಕರವಾದದ್ದು. ಸರ್ವ ಬಗೆಯ ಅಪವಿತ್ರತೆಯನ್ನು ನಿವಾರಿಸುವ, ಸರ್ವ ವಿಧದಲ್ಲಿ ನಮಗೆ ಸಹಕಾರಿಯಾಗುವ ಗೋವಿನ ಉಳಿವು ನಮಗೆ ಮುಖ್ಯವಲ್ಲ ಎಂಬ ಉದ್ಧಟತನವನ್ನು ಮಾನವ ಇಂದು ತೋರುತ್ತಿದ್ದಾನೆ. ಗೋವಧೆಗೆ ಭಾರತೀಯರೇ ಮುಂದಾಗುತ್ತಿದ್ದಾರೆ ಎನ್ನುವುದು ವಿಷಾದನೀಯ. ಹಾಗಾಗಿ ಪ್ರತಿಯೊಬ್ಬ ಮಾನವನೂ ಜಾತಿ, ಮತ, ಪಂಥಗಳೆಲ್ಲವನ್ನೂ ಮರೆತು ಗೋವನ್ನು ಉಳಿಸಲು ಮುಂದಾದಲ್ಲಿ ಮಾತ್ರ ಗೋಸಂತತಿ ಉಳಿಯಲು ಸಾಧ್ಯ. ಇದಕ್ಕಾಗಿ ಅಡ್ಡಿ ಆತಂಕಗಳನ್ನು ಲೆಕ್ಕಿಸದೇ ಗೋಸಂರಕ್ಷಣೆಗೆ ತೊಡಗಿರುವ ರಾಘವೇಶ್ವರ ಶ್ರೀಗಳ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಮಂತ್ರಾಲಯಕ್ಕೆ ಭೇಟಿ ನೀಡಿದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು, ರಾಘವೇಂದ್ರಸ್ವಾಮಿಗಳ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ದರು. ಈ ಸಂದರ್ಭದಲ್ಲಿ ಅನೇಕ ಗುರುಭಕ್ತರು, ಗೋಭಕ್ತರು ಉಪಸ್ಥಿತರಿದ್ದು ಗೋಸಂದೇಶ ವನ್ನು ಆಲಿಸಿ ಗೋ ಪ್ರತಿಜ್ಞೆ ಸ್ವೀಕರಿಸಿದರು.

LEAVE A REPLY

Please enter your comment!
Please enter your name here