ಗೋಯಾತ್ರಾ ಮಹಾ ಮಂಗಲ ಸಿದ್ಧತಾ ಸಭೆ

0
250

ವರದಿ: ಗೋವಿಂದ ಬಿಜಿ
ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಫವೇಶ್ವರ ಭಾರತೀ ಸ್ವಾಮಿಗಳವರ ಪರಿಕಲ್ಪನೆಯ ಮಂಗಲ ಗೋಯಾತ್ರೆಯ ಕುಂಬಳೆ ಪಂಚಾಯತು ಮಟ್ಟದ ಪೂರ್ವಭಾವಿ ಸಿದ್ಧತಾ ಸಭೆಯು ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ನ ಸಭಾಂಗಣದಲ್ಲಿ ಕುಂಬಳೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಪುಂಡರೀಕಾಕ್ಷರವರ ಅಧ್ಯಕ್ಷತೆಯಲ್ಲಿಜರಗಿತು.
 
 
 
ಮುಳ್ಳೇರಿಯ ಹವ್ಯಕ ಮಂಡಲದ ಕಾರ್ಯದರ್ಶಿ ಶ್ರೀಬಾಲಸುಬ್ರಹ್ಮಣ್ಯ ರವರು ಮಂಗಲ ಗೋಯಾತ್ರೆಯು ಜನವರಿ 24,25. 26 ರಂದು ಕಾಸರಗೋಡು, ಮಂಜೇಶ್ವರ ತಾಲೂಕುಗಳ ಮೂಲಕ ಸಂಚರಿಸುವ ಮಾಹಿತಿಯನ್ನು ತನ್ನ ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದರು.
 
 
ಸಭೆಯಲ್ಲಿ ಯಾತ್ರೆಯ ಯಶಸ್ವಿಗಾಗಿ ಕುಂಬಳೆ ಪಂಚಾಯತು ಮಟ್ಟದ ಸಮಿತಿಯನ್ನು ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷರಾದ ಪುಂಡರೀಕಾಕ್ಷ, ಉಪಾಧ್ಯಕ್ಷರಾಗಿ ಮಂಜುನಾಥ ಆಳ್ವ , ಉಮೇಶ್ ಪೈ, ಕಾರ್ಯದರ್ಶಿಯಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ರಮೇಶ್ ಭಟ್, ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಇವರನ್ನು ಆಯ್ಕೆ ಮಾಡಲಾಯಿತು.
 
 
 
 
ಸಭೆಯಲ್ಲಿ ಕುಂಬಳೆ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಗೀತಾ ಲೋಕನಾಥ ಶೆಟ್ಟಿ, ಗ್ರಾಮ ಪಂಚಾಯತು ಸದಸ್ಯರಾದ ಸುಜಿತ್ ಶೆಟ್ಟಿ, ಸುಧಾಕರ್ ಕಾಮತ್, ಪುಷ್ಪಲತಾ ಎನ್ ಹಾಗೂ ಇತರ ಸಮಾಜ ಸೇವಕರಾದ ಸುರೇಶ್ ಕುಮಾರ್ ಶೆಟ್ಟಿ, ಲೋಕನಾಥ ಶೆಟ್ಟಿ, ಶಂಕರ್ ಆಳ್ವ(ಅಧ್ಯಕ್ಷರು-ಕುಂಬಳೆ ಸೇವಾ ಸಹಕಾರಿ ಬ್ಯಾಂಕ್), ಬಾಲಕೃಷ್ಣ ಶರ್ಮ(ಕುಂಬಳೆ ವಲಯ ಅಧ್ಯಕ್ಷರು) ಹಾಗೂ ಇತರ ಅನೇಕರು ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿದರು.
 
 
ಮಂಜೇಶ್ವರ ಬ್ಲೋಕ್ ಪಂಚಾಯತು ಸದಸ್ಯರೂ ಮುಳ್ಳೇರಿಯ ಹವ್ಯಕ ಮಂಡಲದ ಜೀವಿಕಾ ವಿಭಾಗದ ಸತ್ಯಶಂಕರ ಭಟ್ ಹಿಳ್ಳೆಮನೆ ಇವರು ಸ್ವಾಗತಿಸಿ ನಿರೂಪಿಸಿದರು. ಗ್ರಾಮ ಪಂಚಾಯತು ಸದಸ್ಯರಾದ ಮುರಳೀದರ್ ಯಾದವ್ ರವರು ವಂದಿಸಿದರು.

LEAVE A REPLY

Please enter your comment!
Please enter your name here