ಗೋಪಾಲಕೃಷ್ಣ ಕಲ್ಪೋಕ್ತ ಪೂಜೆ

0
311

 
ವರದಿ-ಚಿತ್ರ: ಗೋವಿಂದ ಬಿಜಿ
ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ನಿರ್ದೇಶನದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲ ಸಭೆ ಪೆರ್ಲ ಬಜಕುಡ್ಳು ಅಮೃತಧಾರಾ ಗೋಶಾಲೆಯ ಸಭಾಭವನದಲ್ಲಿ ಜರಗಿತು.
 
 
 
ಬೆಳಗ್ಗೆ ಗೋಶಾಲೆಯಲ್ಲಿ ಶಿವಪ್ರಸಾದ ವರ್ಮುಡಿ ಅವರು ಗೋಪೂಜೆ ನೆರವೇರಿಸಿದರು. ಧ್ವಜಾರೋಹಣವಾಗಿ ಶಂಖಧ್ವನಿ, ಗುರುವಂದನೆಯೊಂದಿಗೆ ಸಭೆ ಆರಂಭವಾಯಿತು. ಬಿ. ಜಿ. ರಾಮ ಭಟ್ ಅಧ್ಯಕ್ಷಸ್ಥಾನ ವಹಿಸಿದರು. ಮಂಡಲ ಕಾರ್ಯದರ್ಶಿ ಸತ್ಯನಾರಾಯಣ ಭಟ್ಟ ಮೊಗ್ರ ಅವರು ಗತ ಸಭೆಯ ವರದಿ ನೀಡಿ ಸಭಾ ಸಂಯೋಜನೆ ಮಾಡಿದರು.
 
 
 
ಮಂಡಲ ಕೊಶಾಧಿಕಾರಿಗಳಾಗಿರುವ ಶ್ರೀ ಕುಮಾರ್ ಪೈಸಾರಿ ಅವರು ಲೆಕ್ಕಪತ್ರ ಮಂಡನೆಗೊಳಿಸಿದರು. ಮಹಾಮಂಡಲ ನಿರ್ದೇಶಕರಾದ ಡಾ. ವೈ. ವಿ. ಕೃಷ್ಣಮೂರ್ತಿ ಅವರು ಶ್ರೀ ಸಂಕಲ್ಪದ “ರಾಮರಾಜ್ಯ ” ನೂತನ ಶಾಸನತಂತ್ರ ವ್ಯವಸ್ಥೆಯ ಪ್ರಸ್ತುತಿ ರಚನೆಯ ಕುರಿತಾಗಿ ಸಮಗ್ರ ಮಾಹಿತಿಗಳನ್ನಿತ್ತರು. ಮಹಾ ಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು ಅವರು ಸಂಘಟನೆಯ ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿವರಣೆಗಳನ್ನಿತ್ತರು.
 
 
ವಿಭಾಗ ಪ್ರಮುಖರು, ವಲಯ ಪದಾಧಿಕಾರಿಗಳು ವರದಿಗಳನ್ನಿತ್ತರು. ಬಳಿಕ ಧರ್ಮ ಪ್ರಧಾನ ವೇ. ಮೂ. ಕೇಶವ ಪ್ರಸಾದ ಕೂಟೇಲು ಅವರ ವೈದಿಕತ್ವದಲ್ಲಿ ಗೋಪಾಲಕೃಷ್ಣ ಕಲ್ಪೋಕ್ತ ಪೂಜೆ ಜರಗಿತು. ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಯುಕ್ತ ರಾಮತಾರಕ ಜಪ, ಶಾಂತಿಮಂತ್ರ, ಧ್ವಜಾವರೋಹಣ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here