ಗೋಡಂಬಿ ಐಸ್ ಕ್ರೀಂ

0
302

 
ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು:
15-20 ಗೊಡಂಬಿಗಳು, 1 ಕಪ್ ಹಾಲು 2 ದೊಡ್ಡ ಚಮಚ ಸಕ್ಕರೆ, ಸ್ವಲ್ಪ ಬಣ್ಣ.
 
 
 
ತಯಾರಿಸುವ ವಿಧಾನ:
ಸ್ವಲ್ಪ ಹಾಲಿಗೆ 15-20 ಗೋಡಂಬಿಗಳನ್ನು ಹಾಕಿ ಹತ್ತು ನಿಮಿಷ ನೆನೆಸಿಡಿರಿ. ಬಳಿಕ ಮಿಕ್ಷಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಒಂದು ಕಾವಲಿಯಲ್ಲಿ ಉಳಿದ ಹಾಲು ಹಾಕಿ ಕಾಯಿಸಿಕೊಳ್ಳಿ.ಬಳಿಕ ರುಬ್ಬಿದ ಮಿಶ್ರಣವನ್ನು ನಿಧಾನವಾಗಿ ಹಾಕಿ ಸಣ್ಣ ಉರಿಯಲ್ಲಿ ತಳ ಹಿಡಿಯದಂತೆ ಕಲಕುತ್ತಿರಿ. ಒಂದೆರಡು ಕುದಿ ಬಂದ ನಂತರ ಎರಡು ಚೆಮಚ ಸಕ್ಕರೆ,ಬಣ್ಣ ಹಾಕಿ ಸ್ವಲ್ಪ ಕಲಕಿರಿ. ಕಾವಲಿಯನ್ನು ಕೆಳಗಿಳಿಸಿ ಅರಲು ಬಿಡಿ. ಬಳಿಕ ಒಂದು ಅಲುಮಿನಿಯಮ್ ಡಬ್ಬಿಗೆ ಮಿಶ್ರಣವನ್ನು ಹಾಕಿ ಒಂದು ತಾಸು ಡೀಪ್  ಫ್ರಿಜ್ ರನಲ್ಲಿಡಿ. ಈಗ ಡಬ್ಬಿಯನ್ನು ತೆಗೆದು ಮಿಶ್ರಣವನ್ನು ಚಾಕುವಿನಿಂದ ತುಂಡು ಮಾಡಿ ಮಿಕ್ಷಿಗೆ ಹಾಕಿ ಸ್ವಲ್ಪ  ತಿರುಗಿಸಿಕೊಳ್ಳಿ. ತಿರುಗಿ ಅಲುಮಿನಿಯಮ್ ಡಬ್ಬಿಗೆ ಮಿಶ್ರಣವನ್ನು ಹಾಕಿ ಒಂದು ತಾಸು ಡೀಪ್  ಫ್ರಿಜ್ ರನಲ್ಲಿಡಿ. ಗೋಡಂಬಿ ಐಸ್ ಕ್ರೀಂ ತಯಾರಾಗಿದೆ.
 
 

LEAVE A REPLY

Please enter your comment!
Please enter your name here