ಗೋಚಾತುರ್ಮಾಸ್ಯ

0
401

 
ಬೆಂಗಳೂರು ಪ್ರತಿನಿಧಿ ವರದಿ
ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಶುಭಸಂದರ್ಭದಲ್ಲಿ ಬೆಂಗಳೂರು ಮಂಡಲಾಂತರ್ಗತ ವಿಜಯನಗರ ಹಾಗೂ ಕೋರಮಂಗಲ ವಲಯಗಳಿಂದ ಸರ್ವಸೇವೆ ನಡೆಯಿತು. ಆರ್ಯ ಈಡಿಗ ರಾಘವೇಶ್ವರಭಾರತೀ ಮಹಾಸ್ವಾಮಿಜಿ ಅಭಿಮಾನಿ ಬಳಗ ಹಾಗೂ ನಾಡವ ಸಮಾಜದವರಿಂದ ಶ್ರೀಗುರುಪಾದುಕಾಪೂಜೆ ನೆರೆವೇರಿತು.
 
mata chaturumasay 132
ಶ್ರೀಭಾರತೀಪ್ರಕಾಶನ ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿ ಹಾಗೂ ‘ವಿಚಾರ ವಿಹಾರ’ ಪುಸ್ತಕವನ್ನು ಪೂಜ್ಯ ಶ್ರೀಗಳು ಲೋಕಾರ್ಪಣೆ ಮಾಡಿದರು. ಉತ್ತರಕನ್ನಡ ಜಿಲ್ಲಾಪಂಚಾಯತಿ ಸದಸ್ಯರಾದ ಪ್ರದೀಪ್ ಕುಮಾರ್ ನಾಯಕ, ಆರ್ಯ ಈಡಿಗ ರಾಘವೇಶ್ವರಭಾರತೀ ಮಹಾಸ್ವಾಮಿಜಿ ಅಭಿಮಾನಿ ಬಳಗದ ಸದಸ್ಯರು, ನಾಡವ ಸಮಾಜದ ಭಕ್ತರು, ನಾಡಿನ ನಾನಾ ಭಾಗಗಳ ಭಕ್ತರು ಉಪಸ್ಥಿತರಿದ್ದರು.
ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ನವಗ್ರಹ ಶಾಂತಿ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
 
 
· ಶ್ರೀಭಾರತೀಪ್ರಕಾಶನದ ” ವಿಚಾರ ವಿಹಾರ ” ಪುಸ್ತಕ ಲೋಕಾರ್ಪಣೆ
· ಆರ್ಯ ಈಡಿಗ ರಾಘವೇಶ್ವರಭಾರತೀ ಮಹಾಸ್ವಾಮಿಜಿ ಅಭಿಮಾನಿ ಬಳಗ ಹಾಗೂ ನಾಡವ ಸಮಾಜದವರಿಂದ ಶ್ರೀಗುರುಪಾದುಕಾಪೂಜೆ ನೆರೆವೇರಿತು.

LEAVE A REPLY

Please enter your comment!
Please enter your name here