ಗೋಕಿಂಕರ ಯಾತ್ರೆ ಬದಿಯಡ್ಕ ವಿದ್ಯಾಪೀಠಕ್ಕೆ

0
291

ವರದಿ: ಶ್ಯಾಮ್ ಪ್ರಸಾದ್, ಬದಿಯಡ್ಕ
ಗೋಕಿಂಕರ ಯಾತ್ರೆಯು ಶುಕ್ರವಾರ ಸಂಜೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ ತಲುಪಿತು. ನವಂಬರ 8ರಿಂದ ಜ. 26ರ ತನಕ ನಡೆಯಲಿರುವ ಮಂಗಲ ಗೋಯಾತ್ರೆಯ ಆಮಂತ್ರಣ ಪತ್ರಿಕೆಯನ್ನು ವಿತರಿಸುವ ಮೂಲಕ ಸಾವಯವ ಕೃಷಿಕ, ದೇಶೀ ಗೋತಳಿಯನ್ನೇ ಸಾಕಿ ಸಲಹುವ ರಘುರಾಮ ನೆಕ್ರಾಜೆ ಅವರು ಉದ್ಘಾಟಿಸಿದರು.
 
 
ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ, ನಿವೃತ್ತ ಅಧ್ಯಾಪಕ ಬೇಸೀ ಗೋಪಾಲಕೃಷ್ಣ ಭಟ್, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಈಶ್ವರ ಭಟ್ ಪೆರ್ಮುಖ, ಶಂಕರ ಭಟ್ ಗೋಕುಲ, ಗೋವಿಂದ ಬಳ್ಳಮೂಲೆ, ಚಂದ್ರಶೇಖರ ಪಳ್ಳತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here