ಗೋಕಿಂಕರ ಯಾತ್ರೆಗೆ ಮಧೂರಿನಿಂದ ಚಾಲನೆ

0
373

ಶ್ಯಾಮ್ ಪ್ರಸಾದ್, ಬದಿಯಡ್ಕ
ಶ್ರೀರಾಮಚಂದ್ರಾಪುರ ಮಠ ಹೊಸನಗರದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಪರಿಕಲ್ಪನೆಯಲ್ಲಿ ನವಂಬರ 8ರಿಂದ ಜ. 26ರ ತನಕ ನಡೆಯಲಿರುವ ಮಂಗಲ ಗೋಯಾತ್ರೆಯ ಪ್ರಚಾರಣಾರ್ಥ ನಡೆಯುವ ಗೋಕಿಂಕರ ಯಾತ್ರೆಗೆ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಶುಕ್ರವಾರ ಮುಂಜಾನೆ ಚಾಲನೆಯನ್ನು ನೀಡಲಾಯಿತು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರಿಗೆ ದೇವಸ್ಥಾನದ ಅರ್ಚಕರು ಯಾತ್ರೆಯ ಯಶಸ್ಸಿಗೆ ಪ್ರಾರ್ಥನೆಯನ್ನು ನಡೆಸಿ ಪ್ರಸಾದವನ್ನು ನೀಡಿದರು.
 
 
ತಂತ್ರಿಗಳು ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಪೂರ್ವಕಾಲದಿಂದಲೇ ಇಲ್ಲಿಯ ಜನಜೀವನದ ಮೇಲೆ ಪ್ರಭಾವ ಬೀರಿರುವ ಗೋಸಂತತಿಯ ಬಗೆಗಿನ ಮರುಜಾಗೃತಿಗಾಗಿ ಕಾರ್ಯಪ್ರವೃತ್ತರಾಗಬೇಕಾದ ತುತರ್ು ಇದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡ ಯಾತ್ರೆಯು ಸಂದರ್ಭೋಚಿತವಾಗಿದೆ ಎಂದರು.
 
 
ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಹಾಗೂ ಪಶುಪಾಲಕ ರಾಮಯ್ಯ ನಾಯಕ್ ಮಧೂರು ಅವರು ದೀಪಬೆಳಗಿಸಿ ಉದ್ಘಾಟಿಸಿದರು. ಗೋವಿಂದ ಬಳ್ಳಮೂಲೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಜಕೂಡ್ಲು ಅಮೃತಧಾರಾ ಗೋಶಾಲೆಯ ಅಧ್ಯಕ್ಷ ಜಗದೀಶ ಗೋಳಿತ್ತಡ್ಕ ಮಾತನಾಡಿದರು. ಮಾಜಿ ಪಂ. ಅಧ್ಯಕ್ಷ ಮಹಾಲಿಂಗಯ್ಯ, ಬ್ಲಾಕ್ ಪಂ.ಸದಸ್ಯ ಭವಾನಿಶಂಕರ, ಪಂ. ಸದಸ್ಯ ಯೋಗೀಶ್ ಆಚಾರ್ಯ, ಶಂಕರನಾರಾಯಣ ಭಟ್ಟ ಅಳಕ್ಕೆ, ಚಂದ್ರಶೇಖರ ಪಳ್ಳತ್ತಡ್ಕ, ಮುರಳೀಕೃಷ್ಣ ಹಸಂತಡ್ಕ, ಕೆ.ಎನ್. ವೆಂಕಟ್ರಮಣ ಹೊಳ್ಳ, ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here