ಗೆಣಸು ಪಾಲಾಕ್ ಫ್ರೈ

0
217

 
ವಾರ್ತೆ ರೆಸಿಪಿ:
ಬೇಕಾಗುವ ಸಾಮಾಗ್ರಿಗಳು:
2-3 ಸಿಹಿ ಗೆಣಸು (ಸ್ವಲ್ಪವೇ ಬೇಯಿಸಿ ಕತ್ತರಿಸಿರಬೇಕು),  1 ಬಟ್ಟಲು ಕತ್ತರಿಸಿದ ಪಾಲಾಕ್ ,  2-3 ಹಸಿರು ಮೆಣಸಿನಕಾಯಿ, 1/2 ಚಮಚ ಗರಂ ಮಸಾಲ ಪುಡಿ, 1/2 ಚಮಚ ಕೆಂಪು ಮೆಣಸಿನ ಪುಡಿ, 1/4 ಚಮಚ ಆಮ್ ಚೂರ್ ಪುಡಿ, ರುಚಿಗೆ ತಕ್ಕಷ್ಟು ಉಪ್ಪು,  1 ಚಮಚ ಸಾಸಿವೆ,  1 ಚಮಚ ಬೆಣ್ಣೆ.
 
 
ತಯಾರಿಸುವ ವಿಧಾನ:
ಸ್ವಲ್ಪ ಬೆಣ್ಣೆಯೊಂದಿಗೆ ಪಾಲಾಕ್ ಸೊಪ್ಪನ್ನು ಹುರಿದುಕೊಳ್ಳಬೇಕು. ಇದಕ್ಕೆ ಬೇಯಿಸಿದ ಸಿಹಿ ಗೆಣಸನ್ನು ಬೆರೆಸಿ ಚೆನ್ನಾಗಿ ತಿರುಗಿಸಬೇಕು. ಪಾಲಾಕ್ ಸೊಪ್ಪಿನ ಬಣ್ಣ ಬದಲಾಗುವವರೆಗೂ ಸ್ವಲ್ಪ ನೀರಿನೊಂದಿಗೆ ಬೇಯಿಸಬೇಕು. ಇದಕ್ಕೆ ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ, ಆಮ್ ಚೂರ್ ಪೌಡರ್ ಮತ್ತು ಉಪ್ಪನ್ನು ಬೆರೆಸಿ ಚೆನ್ನಾಗಿ ತಿರುಗಿಸಬೇಕು. ಪ್ರತ್ಯೇಕ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಸಾಸಿವೆ ಒಗ್ಗರಣೆ ಹಾಕಬೇಕು. ಒಗ್ಗರಣೆಯನ್ನು ಗೆಣಸಿನ ಮಿಶ್ರಣಕ್ಕೆ ಬೆರೆಸಿದರೆ ಸಿಹಿ ಗೆಣಸು ಪಾಲಾಕ್ ಫ್ರೈ ತಿನ್ನಲು ರೆಡಿ.

LEAVE A REPLY

Please enter your comment!
Please enter your name here