ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಯದುವೀರ್-ತ್ರಿಷಿಕಾ

0
295

 
ಮೈಸೂರು ಪ್ರತಿನಿಧಿ ವರದಿ
ಮೈಸೂರು ಅರಮನೆಯ ಮಯೂರ ಮಂಟಪದಲ್ಲಿ ಮೈಸೂರು ಮಹಾರಾಜ ಯದುವೀರ್ ಮತ್ತು ರಾಜಸ್ತಾನದ ಡುಂಗುರಪುರ ಮನೆತನದ ತ್ರಿಶಿಕಾ ಸಿಂಗ್ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
 
yaduveer marg-today
 
ಇಂದು ಬೆಳಗ್ಗೆ ಕಟಕ ಲಗ್ನದಲ್ಲಿ 10.22ಕ್ಕೆ ಮಾಂಗಲ್ಯಧಾರಣೆಯಾಗಿದೆ. ಮಾಂಗಲ್ಯಧಾರಣೆ ಮೊದಲು ವಧು-ವರರು ಹಾರ ಬದಲಾಯಿಸಿಕೊಂಡಿದ್ದಾರೆ. ರಾಣಿ ಚಿನ್ನ ಲೇಪಿನ ಪಿಂಕ್ ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಯದುವೀರ ರಾಜಪಪೋಷಾಕಿಯಲ್ಲಿ ಮಿಂಚುತ್ತಿದ್ದಾರೆ.
 
 
 
ರಾಜಸ್ಥಾನ ಡುಂಗುರಪುರ ಮನೆತನದ ರಾಜ ಕುಮಾರಿ ಮೈಸೂರು ಮಹಾರಾಜರನ್ನು ಕೈಹಿಡಿದಿದ್ದಾರೆ. ಈಗ ತ್ರಿಷಿಕಾ ಅವರು ಮೈಸೂರು ರಾಜಮನೆತನದ ಸೊಸೆಯಾಗಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ನೆರೆದಿದ್ದ ಹಿರಿಯರು ನವವಧುವರರಿಗೆ ಆಶೀರ್ವಾದವನ್ನು ನೀಡಿದ್ದಾರೆ.
 
 
ಮೈಸೂರು ರಾಜಮಾತೆ ಪ್ರಮೋದಾ  ದೇವಿ, ಯದುವಂಶದ ಕುಟುಂಬಸ್ಥರು ಹಾಗೂ ರಾಜಸ್ಥಾನ ಡುಂಗುರಪುರ ಮನೆತನದ ವಂಶಸ್ಥರು ಭಾಗಿಯಾಗಿದ್ದಾರೆ.

LEAVE A REPLY

Please enter your comment!
Please enter your name here