ಗೃಹವಿಜ್ಞಾನ ವಿಭಾಗದಲ್ಲಿ ವಿಶ್ವ ಮಹಿಳಾ ದಿನಾಚರಣೆ

0
538

ಉಜಿರೆ ಪ್ರತಿನಿಧಿ ವರದಿ
ಶ್ರೀ. ಧ.ಮಂ.ಪದವಿ ಕಾಲೇಜಿನಲ್ಲಿ ಗೃಹವಿಜ್ಞಾನ ವಿಭಾಗವು ಮಹಿಳಾ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿನಿಯರಿಗೆ ಅವರತಿಳುವಳಿಕೆ ಹೆಚ್ಚಿಸಲು ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಭಾಷಣಗಾರರಾಗಿ ಬೆಳ್ತಂಗಡಿಯ ನ್ಯಾಯವಾದಿ ಸುಭಾಷಿಣಿಯವರು ಪ್ರಸಕ್ತ ಮಹಿಳೆ ಮತ್ತು ಕಾನೂನು ಬಗ್ಗೆ ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸಿದರು.
 
 
 
ಅವರ ವಿಶೇಷ ಭಾಷಣದಲ್ಲಿ ಹೆಣ್ಣುಮಕ್ಕಳು ಅಥವಾ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾದಲ್ಲಿ ಅದನ್ನು ಮುಚ್ಚು ಮರೆ ಮಾಡದೆ ಹಾಗು ಮರ್ಯಾದೆ ಪ್ರಶ್ನೆಯನ್ನು ಬಿಟ್ಟು ಬಿಟ್ಟು ನೇರವಾಗಿ ಅವರ ತಂದೆತಾಯಿ ಅಥವಾ ಪೋಷಕರು ಅಥವಾ ಆಸುಪಾಸಿನವರೊಂದಿಗೆ ಸಹಾಯ ಪಡೆದು ಅತೀ ತುರ್ತಾಗಿ ಕಾನೂನಿಗೆ ಚಾಲನೆ ನೀಡುವಂತೆ ಕರೆಕೊಟ್ಟರು. ಕೆಲವು ಸಂಗತಿಗಳನ್ನು ಗುಟ್ಟಾಗಿ ಇಟ್ಟುಕೊಂಡಲ್ಲಿ ಕಾನೂನಿನ ತೊಡಕು ಮತ್ತು ಘಟನೆಯ ಮೇಲೆ ಸಂಶಯ ಹುಟ್ಟಿಕೊಳ್ಳುವುದಾಗಿ ಖೇದ ವ್ಯಕ್ತಪಡಿಸಿದರು.
 
 
 
ಘಟನೆಗಳು ನಡೆದ ತಕ್ಷಣ ತುರ್ತು ಕಾರ್ಯಚರಣೆಯಿಂದ ಆರೋಪಿಗಳಿಗೆ ಎಚ್ಚರಿಕೆ ನೀಡಿದಂತಾಗಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಗೆ ಅನುಕೂಲವಾಗಬಹುದೆಂದು ಅಭಿಪ್ರಾಯಪಟ್ಟರು. ನ್ಯಾಯವಾದಿ ಮಮತಾಜ್ ಬೇಗಂ, ವಿಭಾಗ ಮುಖ್ಯಸ್ಥೆ ಅಲ್ಫೋನ್ಸಮ್ಮ ಉಪಸ್ಥಿತರಿದ್ದರು. ಶೋಭಾ ಸ್ವಾಗತಿಸಿ, ಕೀರ್ತಿಶ್ರೀ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here