ಗೃಹರಕ್ಷಕರ ದಿನಾಚರಣೆ

0
343

ಮ0ಗಳೂರು ಪ್ರತಿನಿಧಿ ವರದಿ
ಅಖಿಲ ಭಾರತ ಗೃಹರಕ್ಷಕರ ದಿನಾಚರಣೆ 2016-17 ನ್ನು ಪೊಲೀಸ್ ಸಭಾ ಭವನ, ಮಂಗಳೂರುನಲ್ಲಿ ಕಳೆದ ಶುಕ್ರವಾರ ಜೆ.ಆರ್.ಲೋಬೋ, ಶಾಸಕರು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ, ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
 
 
 
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಈಗಿನ ಪರಿಸ್ಥತಿಯಲ್ಲಿ ಗೃಹರಕ್ಷಕರ ಸೇವೆಯು ಅತೀ ಮುಖ್ಯವಾಗಿದೆ ಎಂದು ತಿಳಿಸಿದರು. ಗಡಿಯನ್ನು ಕಾಯುವ ಸೈನಿಕರು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಗೃಹರಕ್ಷಕರು. ಗೃಹರಕ್ಷಕರು ಶಿಸ್ತಿನ ಸಿಪಾಯಿಯಾಗಿದ್ದು ಇವರ ಶಿಸ್ತು ಮನೆಯ ಇತರ ಸದಸ್ಯರಿಗೂ ಹಾಗೂ ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.
 
ಶಾಸಕರು ಗೃಹರಕ್ಷಕರಿಗೆ ನೀಡುವ ಸವಲತ್ತು ಹೆಚ್ಚಾಗಬೇಕು ಹಾಗೂ ಗೃಹರಕ್ಷಕಿಯರಿಗೆ ನೀಡುವ ಭತ್ಯೆಯೂ ತುಂಬಾ ಕಡಿಮೆಯಾಗಿದ್ದು ಇದನ್ನು ಹೆಚ್ಚಿಸುವ ಸಲುವಾಗಿ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಸುಧೀರ್ ಕುಮಾರ್, ನಿರ್ದೇಶಕರು ಕೆಎಸ್ಆರ್ಟಿಸಿ, ಮಂಗಳೂರು ಇವರು ಗೃಹರಕ್ಷಕರ ಸೇವೆಯು ನಿಷ್ಕಾಮ ಸೇವೆಯಾಗಿದ್ದು, ಸಮಾಜದಲ್ಲಿ ಇವರು ಮಾಡುವ ಸೇವೆಗೆ ಸಿಗುವ ಗೌರವಧನ ಅತೀ ಕಡಿಮೆಯಾಗಿದ್ದು, ಇದನ್ನು ಹೆಚ್ಚಿಸುವ ಸಲುವಾಗಿ ಮಾನ್ಯ ಶಾಸಕರ ಮೇಲೆ ಒತ್ತಡ ತರಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಮಾದೇಷ್ಟರಾದ ಡಾ: ಮುರಲೀ ಮೋಹನ ಚೂಂತಾರ್ ಅವರು ಸ್ವಾತಂತ್ರ್ಯ ನಂತರ ಗೃಹರಕ್ಷಕದಳ ಇಲಾಖೆಯು ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪೊಲೀಸ್ ಇಲಾಖೆಗೆ ಪರ್ಯಾಯವಾಗಿ ಕರ್ತವ್ಯ ನಿರ್ವಹಿಸುತ್ತಿದೆ.
 
 
 
 
ಇವರ ಸೇವೆಯು ಶ್ಲಾಘನೀಯವಾಗಿದೆ. ಗೃಹರಕ್ಷಕ ದಳ ದಿನಾಚರಣೆ ಸಂದರ್ಭದಲ್ಲಿ ಹುತಾತ್ಮರಾದ ಗೃಹರಕ್ಷಕರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕ ದಳಕ್ಕೆ ಸೇರಿ ದೇಶಸೇವೆಯಲ್ಲಿ ಭಾಗವಹಿಸಿ ಎಂದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ರಮೇಶ್ ದೆಪ್ಯುಟಿ ಕಮಾಂಡೆಂಟ್ ಇವರು ಸ್ವಾಗತ ಭಾಷಣ ಮಾಡಿದರು ಉಷಾ ಸ್ಟಾಫ್ ಆಫೀಸರ್ ಇವರು ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ನೆರೆವೆರಿಸಿದರು. ಈ ಸಮಾರಂಭದಲ್ಲಿ ವಿಜೇತರಾದ ಮನ್ಸೂರ್ ಅಹಮದ್, ಘಟಕಾಧಿಕಾರಿ ಮುಲ್ಕಿ ಘಟಕ ಇವರು ಮುಖ್ಯಮಂತ್ರಿ ಬೆಳ್ಳಿ ಪದಕ ಪಡೆದುದಕ್ಕಾಗಿ ಭೋಜ, ನಿವೃತ್ತ ಘಟಕಾಧಿಕಾರಿ, ಬಂಟ್ವಾಳ ಘಟಕ ಇವರ ಧೀರ್ಘ ಕಾಲದ ಸೇವೆಗೆ ಹಾಗೂ ಗೃಹರಕ್ಷಕ ಹೂವಪ್ಪ, ಬೆಳ್ಳಾರೆ ಘಟಕ ಇವರು ಸಮಾಜದಲ್ಲಿ ಮಾಡುತ್ತಿರುವ ಉತ್ತಮ ಸೇವೆಗಾಗಿ ಸನ್ಮಾನಿಸಲಾಯಿತು.
 
 
ಮಹಿಳಾ ಗೃಹರಕ್ಷಕಿಯರಾದ ಪ್ರಭಾ ರೈ ಇವರು ತರಬೇತಿ ಅಕಾಡೆಮಿಯಲ್ಲಿ ನಡೆದ ನಿಸ್ತಂತು ಚಾಲನಾ ತರಬೇತಿಯಲ್ಲಿ ಚಿನ್ನದ ಪದಕ ಪಡೆದುದಕ್ಕಾಗಿ ಹಾಗೂ ಉತ್ತಮ ಕರ್ತವ್ಯ ನಿರ್ವಹಿಸಿದ ರೇವತಿ ದಿನೇಶ್ ಹಾಗೂ ಗೃಹರಕ್ಷಕ ಜಯಗಣೇಶ್ ಇವರನ್ನು ಸನ್ಮಾನಿಸಲಾಯಿತು, ಕಾರ್ಯಕ್ರಮದ ವಂದನಾರ್ಪಣೆಯನ್ನು ಮುಲ್ಕಿ ಘಟಕಾಧಿಕಾರಿ ಮನ್ಸೂರ್ ಅಹಮದ್ ಅವರು ನಿರ್ವಹಿಸಿದರು ಈ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಗೃಹರಕ್ಷಕರು ಭಾಗವಹಿಸಿದರು.

LEAVE A REPLY

Please enter your comment!
Please enter your name here