ಗೃಹರಕ್ಷಕರು ಸಮಾಜದ ಅವಿಬಾಜ್ಯ ಅಂಗ

0
276

ಮ0ಗಳೂರು ಪ್ರತಿನಿಧಿ ವರದಿ
ಅಕ್ಟೋಬರ್ 6 ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ತಿಂಗಳ ಗೃಹರಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಅಬ್ದುಲ್ ರೌಪ್ ಅವರನ್ನು ಸನ್ಮಾನಿಸಲಾಯಿತು.
 
 
 
ಕಳೆದ ಹಲವಾರು ವರ್ಷಗಳಂದ ಸಾರಿಗೆ ಸಂಚಾರ ನಿಯಂತ್ರಣ ವಿಭಾಗದಲ್ಲಿ ಕೆಲಸ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಜನರ ಮತ್ತು ಜನ ಪ್ರತಿನಿಧಿಗಳಿಂದ ಪ್ರಶಂಸಿಸಲ್ಪಟ್ಟ ಉತ್ಸಾಹಿ ಗೃಹರಕ್ಷಕ ಅಬ್ದುಲ್ ರೌಫ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಡಾ|| ಮುರಲೀ ಮೋಹನ ಚೂಂತಾರು ಅವರು ಹೂ, ಹಣ್ಣು , ಹಾರ, ಪದಕ ನೀಡಿ ಸನ್ಮಾನ ಮಾಡಿದರು. ಅಬ್ದುಲ್ ರೌಪ್ ಅವರು ಬಹಳ ಹುಮ್ಮಸ್ಸಿನಿಂದ ಇತರ ಗೃಹರಕ್ಷಕರಿಗೆ ಮಾದರಿಯಾಗುವಂತೆ ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ.
 
 
 
ಅವರಂತಹ ಗೃಹರಕ್ಷಕರು ಇರುವುದು ನಮ್ಮ ಗೃಹರಕ್ಷಕದಳಕ್ಕೆ ಹೆಮ್ಮೆಯ ವಿಚಾರ ಎಂದರು. ಇತ್ತೀಚಿನ ದಿನಗಳಲ್ಲಿ ಗೃಹರಕ್ಷಕರು ಕಾನೂನು ಸುವ್ಯವಸ್ಥೆ ಪಾಲನೆ, ಸಾರಿಗೆ ನಿಯಂತ್ರಣ, ದೇಶ ರಕ್ಷಣೆ, ಪುರಾತನ ಸ್ಮಾರಕಗಳ ರಕ್ಷಣೆ, ಬಂಧಿಖಾನೆಯ ಕೈದಿಗಳ ಕಾವಲು ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡು, ಸಮಾಜದ ಅವಿಭಾಜ್ಯ ಅಂಗವಾಗಿ ಬೆಳೆಯುತ್ತಿದ್ದಾರೆ ಎಂದು ಪ್ರಶಂಸಿದರು.
ಗೃಹರಕ್ಷಕರನ್ನು ಹುರಿದುಂಬಿಸುವ ಸಲುವಾಗಿ ಕಳೆದ 6 ತಿಂಗಳುಗಳಿಂದ ಪ್ರತಿ ತಿಂಗಳು ಒಬ್ಬ ಗೃಹರಕ್ಷಕರನ್ನು ಗುರುತಿಸಿ, ತಿಂಗಳ ಗೃಹರಕ್ಷಕ ಎಂದು ಸನ್ಮಾನ ಮಾಡುವ ಪರಿಪಾಠವನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಡಾ|| ಮುರಲೀ ಮೋಹನ ಚೂಂತಾರು ಇವರ ನೇತೃತ್ವದಲ್ಲಿ ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗೃಹರಕ್ಷಕರುಗಳನ್ನು ಗುರುತಿಸಿ ಸನ್ಮಾನಿಸಿ ಗೃಹರಕ್ಷಕರನ್ನು ಇನ್ನಷ್ಟು ಹುರಿದುಂಬಿಸಲಾಗುವುದು ಎಂದು ಅವರು ತಿಳಿಸಿದರು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here