ಗೃಹರಕ್ಷಕರಿಗೆ ನಗದು ಪುರಸ್ಕಾರ

0
377

 
ಮ0ಗಳೂರು ಪ್ರತಿನಿಧಿ ವರದಿ
ಉಳ್ಳಾಲ ಸಮುದ್ರತೀರದ ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಏಳು ವರ್ಷದ ಬಾಲಕಿಯನ್ನು ಪ್ರಾಣಾಪಾಯದಿಂದ ಪಾರುಮಾಡಿದ ಗೃಹರಕ್ಷಕ ರಾಘವೇಂದ್ರ ಇವರ ಉತ್ತಮ ಸೇವೆಯನ್ನು ಗುರುತಿಸಿ ಇವರಿಗೆ ಆರಕ್ಷಕ ಮಹಾನಿರ್ದೇಶಕರು, ಗೃಹರಕ್ಷಕದಳದ ಮಹಾಸಮಾದೇಷ್ಟರು ಮತ್ತು ನಿರ್ದೇಶಕರು , ಪೌರರಕ್ಷಣೆ ಇವರು ನಗದು ಪುರಸ್ಕಾರ ಮಂಜೂರು ಮಾಡಿರುತ್ತಾರೆ.
 
 
ರಾಘವೇಂದ್ರ ಇವರು ಪ್ರವಾಸಿ ಮಿತ್ರ ಯೋಜನೆಯಡಿ ಉಳ್ಳಾಲ ಬೀಚ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಮೇ 11ರಂದು ತಮಿಳುನಾಡು ರಾಜ್ಯದ ಅನಂತಪುರದ 15 ಜನರ ತಂಡದಲ್ಲಿದ್ದ 7 ವರ್ಷದ ಬಾಲಕಿ ಮಸ್ಕನ್ ಎಂಬವರು ಸಮುದ್ರದ ಸೆಳೆತಕ್ಕೆ ಸಿಲುಕಿದ್ದಾಗ ಸಮುದ್ರಕ್ಕೆ ಹಾರಿ ಈಜಿ ಬಾಲಕಿಯನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಜಿಲ್ಲಾ ಕಮಾಂಡೆಂಟ್ ರವರ ಶಿಪಾರಸ್ಸಿನಂತೆ ನಗದು ಪುರಸ್ಕಾರ ಪಡೆದ ರಾಘವೇಂದ್ರ ಇವರ ಕಾರ್ಯದಕ್ಷತೆ ಇತರ ಗೃಹರಕ್ಷಕರಿಗೆ ಮಾದರಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here