ಗೃಹರಕ್ಷಕರಿಂದ ಸ್ವಚ್ಛತಾ ಆಂದೋಲನ

0
601

ಮ0ಗಳೂರು ಪ್ರತಿನಿಧಿ ವರದಿ
2015-16 ನೇ ಸಾಲಿನಲ್ಲಿ ಆಯ್ಕೆಯಾದ ಗೃಹರಕ್ಷಕರಿಗೆ 10 ದಿನಗಳ ತರಬೇತಿ ಶಿಬಿರ ಅಕ್ಟೋಬರ್ 14 ನೇ ಶುಕ್ರವಾರದಂದು ಆರಂಭಗೊಂಡಿದ್ದು ಕೊನೆಯ ದಿನವಾದ ಅಕ್ಟೋಬರ್ 23 ರಂದು ಪೂರ್ವಾಹ್ನ ”ಸ್ವಚ್ಚ ಭಾರತ ಸ್ವಸ್ಥ ಭಾರತ ಆಂದೋಲನದ ಅಂಗವಾಗಿ ಇನ್ಫೆಂಟ್ ಜೀಸಸ್ ಹಿರಿಯ ಪ್ರಾಥಮಿಕ ಶಾಲೆ ಮೇರಿಹಿಲ್ ಇದರ ವಠಾರಾದಲ್ಲಿ ಶಿಬಿರಾರ್ಥಿಗಳಿಂದ ಸ್ವಚ್ಚತಾ ಆಂದೋಲನ ನಡೆಯಿತು.
 
 
ಈ ಕಾರ್ಯಕ್ರಮದಲ್ಲಿ ಶಾಲಾ ಪರಿಸರವನ್ನು ಸ್ವಚ್ಚಗೊಳಿಸುವುದರೊಂದಿಗೆ ನೀರಿನ ಟ್ಯಾಂಕ್ ಗಳನ್ನು ಸ್ವಚ್ಚಗೊಳಿಸಲಾಯಿತು. ಗೃಹರಕ್ಷಕದಳದ ಕಮಾಂಡೆಂಟ್ ಡಾ|| ಮುರಲೀ ಮೋಹನ ಚೂಂತಾರು ಕಾರ್ಯಕ್ರಮದ ನೇತೃತ್ವವನ್ನು ವಹಿಸಿದರು. ಕಾರ್ಯಕ್ರಮದಲ್ಲಿ ಕ್ಯಾಥೋಲಿಕ್ ಸಂಸ್ಥೆಯ ಸಿಸ್ಟರ್ ಸಿಂಧ್ಯಾ, ಗೃಹರಕ್ಷಕದಳದ ಉಪ ಸಮಾದೇಷ್ಟರಾದ ರಮೇಶ್ , ಗೃಹರಕ್ಷಕದಳದ ಅಧಿಕಾರಿಗಳಾದ ಉಷಾ, ಅಭಿಮನ್ಯು ರೈ, ವಸಂತ್ ಕುಮಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುತ್ತಾರೆ. ಸುಮಾರು 100 ಗೃಹರಕ್ಷಕರು ಸ್ವಚ್ಚತಾ ಆಂದೋಲನದಲ್ಲಿ ಭಾಗವಹಿಸಿದ್ದಾರೆ.

LEAVE A REPLY

Please enter your comment!
Please enter your name here