ಗೃಹರಕ್ಷಕರಿಂದ ಬೈಕ್ ರ್ಯಾಲಿ

0
172

 
ಮ0ಗಳೂರು ಪ್ರತಿನಿಧಿ ವರದಿ
ಗೃಹರಕ್ಷಕರ ದಿನಾಚರಣೆ ಅಂಗವಾಗಿ ಡಿ:8 ಗುರುವಾರದಂದು ಬೆಳಿಗ್ಗೆ ಗೃಹರಕ್ಷಕ ದಳ ದಕ್ಷಿಣ ಕನ್ನಡ ಜಿಲ್ಲೆ ಇದರ ಗೃಹರಕ್ಷಕರು ಮತ್ತು ಗೃಹರಕ್ಷಕಿಯರಿಂದ ಬೈಕ್ ರ್ಯಾಲಿ ನಡೆಯಿತು. ಗೃಹರಕ್ಷಕ ದಳ ಮತ್ತು ಗೃಹರಕ್ಷಕರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಬೈಕ್ ರ್ಯಾಲಿಯನ್ನು ಜಿಲ್ಲಾ ಗೃಹರಕ್ಷಕದಳ ಆಯೋಜಿಸಿತ್ತು.
 
 
 
ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ.ಮುರಲಿ ಮೋಹನ್ ಚೂಂತಾರು ಇವರು ಈ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಡಾ. ಚೂಂತಾರು ಅವರು ಮಾತನಾಡುತ್ತಾ 1962 ರ ಡಿಸೆಂಬರ್ 6 ರಂದು ನಿಷ್ಠಾಮ ದೇಶ ಸೇವೆ ಸಲ್ಲಿಸುವ ಸ್ವಯಂಸೇವಕರ ತಂಡಕ್ಕೆ ‘ಗೃಹರಕ್ಷಕ ದಳ ಎಂದು ನಾಮಕರಣ ಮಾಡಿ, ಖಾಕಿಯನ್ನು ಅಧಿಕೃತವಾಗಿ ಸಮವಸ್ತ್ರವಾಗಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
 
 
 
ಈ ಸಂದರ್ಭದಲ್ಲಿ ಉಪ ಸಮಾದೇಷ್ಟರಾದ ಶ್ರೀ ರಮೇಶ, ಘಟಕಾಧಿಕಾರಿಯಾದ ಶ್ರೀ ಅಬಿಮನ್ಯು ರೈ ಹಿರಿಯ ಗೃಹರಕ್ಷಕರಾದ ಸುರೇಶ್ ಶೇಟ್, ಭಾಸ್ಕರ್, ಅಶೋಕ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಸುಮಾರು 50 ಮಂದಿ ಗೃಹರಕ್ಷಕರು ಈ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದರು. ಪೊಲೀಸ್ ಪೆರೇಡ್ ಮೈದಾನದಿಂದ ಆರಂಭವಾದ ರ್ಯಾಲಿ ಲೈಟ್ ಹೌಸ್ ರಸ್ತೆ, ಬಾವುಟ ರಸ್ತೆ ಮಾರ್ಗವಾಗಿ, ಜ್ಯೋತಿ ಸರ್ಕಲ್ ನಿಂದ ರೂಪ ಹೋಟೆಲ್ ಮೂಖಾಂತರ ಪುನ: ಪೋಲಿಸ್ ಪೆರೇಡ್ ಮೈದಾನದವರೆಗೆ ನಡೆಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here