ಗೂಢಚಾರಿಕೆ ಮಾಡುತ್ತಿದ್ದ ವ್ಯಕ್ತಿ ಬಂಧನ

0
277

ರಾಷ್ಟ್ರೀಯ ಪ್ರತಿನಿಧಿ ವರದಿ
ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ. ಈತ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಪರ ಗೂಢಚಾರಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
 
 
ಕಣಿವೆ ರಾಜ್ಯ ಸಾಂಬಾ ಸೆಕ್ಟರ್ ನಲ್ಲಿ ನಿನ್ನೆ ತಡರಾತ್ರಿಯಲ್ಲಿ ಬೋಧ್ ರಾಜ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ಭಾರತೀಯ ಗಡಿಯಲ್ಲಿ ಗೂಢಚಾರಿಕೆ ಮಾಡುತ್ತಿರುವ ಕುರಿತು ಸೇನಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
 
 
ಬಂಧಿತನಿಂದ ಪಾಕಿಸ್ತಾನದ 2 ಸಿಮ್ ಕಾರ್ಡ್ ಗಳು ಹಾಗೂ ಭಾರತೀಯ ಸೇನಾ ಪೋಸ್ಟ್ ಗಳ ಮ್ಯಾಪ್ ಪತ್ತೆಯಾಗಿದೆ.

LEAVE A REPLY

Please enter your comment!
Please enter your name here