ಗುರುಮೂರ್ತಿಯ ಭವ್ಯ ಶೋಭಾಯಾತ್ರೆ

0
409

ಮೂಡುಬಿದಿರೆ: ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘ (ರಿ.) ಇರುವೈಲು-ಪುಚ್ಚಮೊಗರು ಇದರ ವತಿಯಿಂದ ಇರುವೈಲಿನಲ್ಲಿ ನಿರ್ಮಾಣ ಗೊಂಡಿರುವ ಬ್ರಹ್ಮಶ್ರೀ ನಜಾರಾಯಣ ಗುರುಮಂದಿರದಲ್ಲಿ ಪ್ರತಿಷ್ಠಾಪನೆ ಗೊಂಡಿರುವ ಶ್ರೀ ನಾರಾಯಣ ಗುರುಸ್ವಾಮಿಗಳ ಗುರುಮೂರ್ತಿಯ ಭವ್ಯ ಶೋಭಾಯಾತ್ರೆಯು ಫೆ. 13ರಂದು ಮೂಡುಬಿದಿರೆಯ ಬ್ರಹ್ಮಶ್ರೀ ನಾರಾಯಣ ಗುರುಮಂದಿರದಿಂದ ಪ್ರಾರಂಭಗೊಂಡಿತು.

ಸಂಘದ ಅಧ್ಯಕ್ಷ ಕುಮಾರ ಪೂಜಾರಿ ಇರುವೈಲು, ಕಟ್ಟಡ ಸಮಿತಿ ಅಧ್ಯಕ್ಷ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಮಹಿಳಾ ಘಟಕದ ಅಧ್ಯಕ್ಷೆ ದೀಪಾ ದಿನೇಶ್, ಮೂಡುಬಿದಿರೆ ಸಂಘದ ಅಧ್ಯಕ್ಷ ಪಿ.ಕೆ.ರಾಜುಪೂಜಾರಿ ಮತ್ತಿತರರ ಉಪಸ್ಥಿತಿಯಲ್ಲಿ ಮೂಡುಬಿದಿರೆ ಮುಖ್ಯರಸ್ತೆಯಲ್ಲಿ ಪಾದಯಾತ್ರೆಯ ಮುಖಾಂತರ ಸಾಗಿಬಂದ ಶೋಭಾಯಾತ್ರೆಯು ಹನುಮಾನ್ ದೇವಸ್ಥಾನ, ಪೊನ್ನೆಚಾರಿ ದೇವಸ್ಥಾನಗಳ ಮುಂಭಾಗದಿಂದ ಸಾಗಿ ಮಾಸ್ತಿಕಟ್ಟೆಯಲ್ಲಿ ಕೊನೆಗೊಂಡಿತು. ಇಲ್ಲಿಂದ ಈ ಶ್ವೇತ ಶಿಲಾ ವಿಗ್ರಹವನ್ನು ವಾಹನ ಯಾತ್ರೆಯ ಮೂಲಕ ಇರುವೈಲು ಗುರುಮಂದಿರಕ್ಕೆ ತರಲಾಯಿತು.


ಗುಜರಾತಿನ ಹೋಟೆಲ್ ಉದ್ಯಮಿ ಇರುವೈಲು ತ್ಯಾಂಪೆಟ್ಟು ವೆಂಕಟೇಶ್ ಕರ್ಕೇರಾ ಅವರು ಕೊಡುಗೆಯಾಗಿ ನೀಡಿದ್ದ ಸಮವಸ್ತ್ರಧಾರಿಗಳಾಗಿ ಸಾಗಿದ ಮುನ್ನೂರಕ್ಕೂ ಹೆಚ್ಚು ಮಹಿಳೆಯರು ಈ ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿದರು. ಸಂಜೆ ವಾಸ್ತುಹೋಮ, ರಾಕ್ಷೋಘ್ನ ಹೋಮ, ವಾಸ್ತು ಬಲಿ, ಪುಣ್ಯಾಹ, ಪ್ರಾಸಾದ ಶುದ್ಧಿ, ಬಿಂಬಶುದ್ದೀ ಮತ್ತಿತರ ಧಾರ್ಮಿಕ ವಿಧಿವಿಧಾನಗಳು ಜರಗಿದವು.

Advertisement


ಫೆ. 14ರಂದು ಪೂರ್ವಾಹ್ನ ನೂತನ ನಿರ್ಮಿತ ಇರುವೈಲು ಗುರುಮಂದಿರದಲ್ಲಿ ಈ ಶಿಲಾ ಮೂರ್ತಿಯ ಪ್ರತಿಷ್ಠಾಪನೆಯನ್ನು ಮೂಡುಬಿದಿರೆ ಶಿವಾನಂದ ಶಾಂತಿಯವರು ನೆರವೇರಿಸಿದರು. ತದಂಗವಾಗಿ ಅಂದು ಸಂಜೆ ದುರ್ಗಾ ನಮಸ್ಕಾರ ಪೂಜೆ, ಬೆಳಿಗ್ಗೆ ಮತ್ತು ಸಂಜೆ ಭಜನಾ ಕಾರ್ಯಕ್ರಮಗಳು ಜರಗಿದವು.

LEAVE A REPLY

Please enter your comment!
Please enter your name here