ಗುರುಗಳ ಆದೇಶ ಮೀರಿದ್ದೇ ತೊಂದರೆಯಾಯಿತು!

0
180

ನಿತ್ಯ ಅಂಕಣ: ೧೪

ಗುರುದೇವರ ಪರಮಭಕ್ತರಾದ ಶ್ರೀ ಪಿ.ಕೆ. ನಾಯರ್ ಎನ್ನುವರು ಕೇರಳ ಮೂಲದವರು. ಬಹಳ ವರ್ಷಗಳಿಂದ ಮುಂಬೈಯಲ್ಲಿ ವಾಸಿಸುತಿದ್ದರು. ಬಿಡುವು ಮಾಡಿಕೊಂಡು ಪ್ರತಿ ಗುರುವಾರ ಗಣೇಶಪುರಿಗೆ ತೆರಳುತ್ತಿದ್ದರು. ಸದ್ಗುರು ನಿತ್ಯಾನಂದ ಸ್ವಾಮಿಗಳ ದರ್ಶನ ಮಾಡುತ್ತಿದ್ದರು. ನಾಯರ್ ಅವರಿಗೆ ನಿತ್ಯಾನಂದ ಸ್ವಾಮಿಗಳೇ ದೇವರು. ಗುರುದೇವರ ಆರಾಧನೆ, ನಾಮಸ್ಮರಣೆ ಮಾಡಿಕೊಂಡಿದ್ದರು. ಗುರುದೇವರೊಂದಿಗೆ ಹತ್ತಿರದ ಒಡನಾಟ ಆಧ್ಯಾತ್ಮ ಸಾಂಗತ್ಯವು ನಾಯರ್ ಅವರಿಗಿತ್ತು. ಗುರುದೇವರು ನೀಡಿದ ಸಲಹೆಗಳನ್ನು ಸ್ವಿಕರಿಸುತ್ತಿದ್ದರು ಮತ್ತು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಗುರು ಆರಾಧನೆಯಿಂದ ನಾಯರ್ ಅವರು ಜೀವನದಲ್ಲಿ ಸುಖಾನೂಭೂತಿ ಪಡೆದು ಧನ್ಯರಾಗಿದ್ದರು.

ಚಿತ್ರ ಕೃಪೆ: ಅಂತರ್ಜಾಲ

ವಾಡಿಕೆಯಂತೆ ನಾಯರ್ ಆವರು ತಮ್ಮ ಮುಂಬೈಯ ನಿವಾಸದಿಂದ, ಒಂದು ಗುರುವಾರದ ದಿನದಂದು, ಗುರುದೇವರ ದರ್ಶನ ಪಡೆಯಲು ಗಣೇಶಪುರಿಗೆ ಹೋದರು. ಅಲ್ಲಿ ಗುರುದೇವರ ದರ್ಶನವನ್ನು ಪಡೆದರು. ಭಕ್ತ ನಾಯರ್ ಅವರನ್ನು ಕಂಡೊಡನೇ ನಿತ್ಯಾನಂದರು… “ನಾಡಿದು ಶನಿವಾರದ ದಿನ ಮನೆಯಿಂದ ಏಲ್ಲಿಗೂ ಹೊರಗೆ ಹೋಗಬೇಡ..!” ಎಂದು ಕಾಲಜ್ಞಾನದಿಂದ ಸೂಚನೆಯನ್ನು ನೀಡುತ್ತಾರೆ. ಅಂದು ಶನಿವಾರ ದಿನದಂದು ನಾಯರ್ ಅವರು ಗುರು ಆಜ್ಞೆಯ ಪಾಲನೆಯಲ್ಲಿ ನಿರತರಾಗುತ್ತಾರೆ. ಬೆಳಗ್ಗಿನಿಂದ ಸಂಜೆಯ ವರೆಗೂ ಮನೆ ಬಿಟ್ಟು ಎತ್ತಲೂ ಕದಲುದಿಲ್ಲ. ಪಡುವಣ ದಿಗಂತದ ಕಡಲಗರ್ಭದೊಳಗೆ ಭಾಸ್ಕರ ಸೇರುವ ಶುಭ ಘಳಿಗೆಯಲ್ಲಿಯೇ, ನಾಯರ್ ಅವರಿಗೆ ಆತ್ಮಿಯ ಮಿತ್ರಕೂಟದಿಂದ ಸಂಜೆಯ ಔತಣಕೂಟಕ್ಕೆ ತಪ್ಪದೆ ಬರಬೇಕೆಂದು ಆಮಂತ್ರಣ ಬರುತ್ತದೆ. ಸಂಜೆಯವರಿಗೂ ಗುರುವಾಣಿಯನ್ನು ಪರಿಪಾಲನೆ ಮಾಡಿದ ನಾಯರ್ ಅವರಿಗೆ ವಿಧಿ ಮಾತ್ರ ಬೀಡಲಿಲ್ಲ. ಅಕ್ಕರೆಯ ಕರೆಗೆ ಒಗೂಟ್ಟು ಮನೆಯಿಂದ ಔತಣ ಕಾರ್ಯಕ್ರಮಕ್ಕೆ ತೆರಳಿದರು. ಹೋಗುವ ಮುನ್ನ ಇದುವರೆಗೆ ‘ಗುರುವಾಕ್ಯ’ವನ್ನು ಗೌರವಿಸಿದೆ, ಮನೆಯಿಂದ ಹೊರಗೆ ತೆರಳಲೇ ಬೇಕಾದ, ಅನಿವಾರ್ಯ ಪರಿಸ್ಥಿತಿ ನನಗೆ ಎದುರಾಗಿದೆ, ಸದ್ಗುರುವೇ..! ತಾವೇ ಮುಂದೆ ಕೃಪೆ ತೋರಬೇಕೆಂದು ಮನದೊಳಗೆನೇ ಪ್ರಾರ್ಥಿಸುತ್ತಾರೆ.

ಪಿ.ಕೆ. ನಾಯರ್ ಅವರು ನಗರದ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಭಾರತೀಯ ಸೇನಾದಳದ ಟ್ರಕ್ಕೊಂದು ಹಿಂದಿನಿಂದ ಡಿಕ್ಕಿ ಹೊಡೆಯುತ್ತದೆ. ನಾಯರ್ ಅವರು ಉರುಳಿ ರಸ್ತೆಗೆ ಬಿಳುತ್ತಾರೆ. ಅವರಿಗೆ ಪ್ರಜ್ಞೆಯು ತಪ್ಪುತ್ತದೆ. ತಕ್ಷಣ ಸೇನೆಯ ಅಧಿಕಾರಿಗಳು ಸನಿಹದ ಆಸ್ಪತ್ರೆಗೆ ನಾಯರ್ ಅವರನ್ನು ದಾಖಲುಪಡಿಸುತ್ತಾರೆ. ನಾಯರ್ ಅವರ ಆಪ್ತ ವಲಯದವರಿಗೆ, ಮನೆ ಮಂದಿಗೆ ನಡೆದಿರುವ ದುರಂತದ ವಿಚಾರ ತಿಳಿದು ಬರುವುದಿಲ್ಲ. ಆದರೆ ನಿತ್ಯಾನಂದರಿಗೆ ಮಾತ್ರ ಎಲ್ಲ ವಿದ್ಯಾಮಾನಗಳು ತಿಳಿದು ಬರುತ್ತದೆ. ತನ್ನ ಭಕ್ತನ ಅಸಹಾಯಕ ಪರಿಸ್ಥಿತಿಯು ಅರ್ಥವಾಗುತ್ತದೆ. ತನ್ನ ಬಳಿ ಇರುವ ಭಕ್ತನ ಬಳಿ ನಡೆದಿರುವ ವಿಚಾರವನ್ನು ಹೇಳುತ್ತಾರಂತೆ. ಆತನನ್ನು ನಾಯರ್ ಅವರ ನೆರವಿಗೆ ಆಸ್ಪತ್ರೆಗೂ ಕಳಿಸುತ್ತಾರೆ. ಇದೇ ನೋಡಿ ಕರುಣಾಸಿಂಧು ಗುರುದೇವರು ಭಕ್ತರ ಮೇಲೆ ತೋರಿಸುವ ಕರುಣೆ.

ತಾರಾನಾಥ್‌ ಮೇಸ್ತ, ಶಿರೂರು

Advertisement

LEAVE A REPLY

Please enter your comment!
Please enter your name here