ಗುಡ್‌ … ಇದು ಪ್ರಶಂಸನೀಯ

0
250

ಎಚ್.ಕೆ.ಆದೂರು
ಮೂಡುಬಿದಿರೆ: ಸಾಂಕ್ರಾಮಿಕ ರೋಗ ಭೀತಿಯ ಸಂದರ್ಭದಲ್ಲೂ ಸಮಾಜಕ್ಕಾಗಿ , ಮಿಡಿಯುವ ಮನವೆಂದರೆ ನಿಜಕ್ಕೂ ಶ್ಲಾಘನಾರ್ಹ. ಮೂಡುಬಿದಿರೆಯ ಪ್ರತಿಷ್ಟಿತ ಜವನೆರ್‌ ಬೆದ್ರ ಸಂಘಟನೆಯ ಸಂಸ್ಥಾಪಕ ಅಮರ್‌ ಕೋಟೆ ಇದೀಗ ಮತ್ತೊಂದು ಕಾರ್ಯ ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜನರ ನೋವಿಗೆ ದನಿಯಾಗಲು ಮುಂದಡಿಯಿಟ್ಟಿದ್ದಾರೆ. ಇದೀಗ ಜೆ.ಬಿ. ಎಮರ್ಜೆನ್ಸಿ ಟೀಂ ಎಂಬ ವಾಟ್ಸ್‌ ಆಪ್‌ ಟೀಂ ಒಂದನ್ನು ರಚಿಸಿ, ತನ್ಮೂಲಕ ಜನರ ಸಮಸ್ಯೆಗೆ ಸ್ಪಂದಿಸಲು ಮುಂದಡಿಯಿಟ್ಟಿದ್ದಾರೆ. ಇವರ ಈ ಸಮಾಜ ಸೇವೆಗೆ ಮೂಡುಬಿದಿರೆಯ ಪೊಲೀಸ್‌ ನಿರೀಕ್ಷಕ ದಿನೇಶ್‌ ಕುಮಾರ್‌ ಬೆನ್ತಟ್ಟಿ ಪ್ರೋತ್ಸಾಹಿಸಿದ್ದಾರೆ. ಮೂಡುಬಿದಿರೆಯ ಪೊಲೀಸ್‌ ಇಲಾಖೆಯು ಈಗಾಗಲೇ ಜನತೆಯಲ್ಲಿ ಜಾಗೃತಿ ಮೂಡಿಸುವುದರೊಂದಿಗೆ, ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡಿದೆ. ಇವರ ಕೆಲಸಕ್ಕೆ ಪೂರಕ ಸಹಕಾರವನ್ನು ಇದೇ ಟೀಂ ನೀಡಿದೆ.
ಜೆ.ಬಿ ಎಮರ್ಜೆನ್ಸಿ ಟೀಂ ಏನು ಹೇಳಿದೆ ಗೊತ್ತೇ…? : ಮೂಡುಬಿದ್ರೆಯ ನಾಗರಿಕ ಬಂಧುಗಳೇ , ಪ್ರಸ್ತುತ ಲಾಕ್ ಡೌನ್ ಸಂದರ್ಭದಲ್ಲಿ ತುರ್ತು ಸೇವೆಯ ಉದ್ದೇಶದಿಂದ ಈ ಗುಂಪನ್ನು ರಚಿಸಿದ್ದೇವೆ

ಸೋಶಿಯಲ್ ಡಿಸ್ಟೆನ್ಸ್ ಸಿಂಗ್ , ಕೂರೊಣಾ ಅವೇರ್ನೆಸ್ , ಇನ್ನು ಇತರ ತುರ್ತು ಸೇವೆ ಯಾವುದೇ ಸಮಯದಲ್ಲಿ ಬರಬಹುದು , ಈ ಗುಂಪನ್ನು ಈ ವಿಚಾರದಲ್ಲಿ ಮಾತ್ರ ಉಪಯೋಗಿಸಬೇಕು ಎಂದು ಮನವಿ ಮಾಡಿದೆ.
ಇಷ್ಟೇ ಅಲ್ಲ…ಗುರುವಾರದ ವರ್ಕ್‌ ಚಾರ್ಟ್‌ ಹೀಗೆ ಮಾಡಿಕೊಂಡಿದೆ…
ನಾಳೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರ ವರೆಗೆ ಈ ಬಳಗ ಮತ್ತೆ ಕಾರ್ಯೋನ್ಮುಖವಾಗಲಿದೆ. ಬಳಗದ ಸದಸ್ಯರೆಲ್ಲರ ಒಗ್ಗೂಡುವಿಕೆಯಿಂದ ನಾವು ಬಹಳಷ್ಟನ್ನು ಸಾಧಿಸಬೇಕಿದೆ.. ಕೊರೋನದ ವಿರುದ್ಧ ಹೋರಾಡಬೇಕಿದೆ. ನಮ್ಮವರನ್ನು ನಾವು ರಕ್ಷಿಸಬೇಕಿದೆ.

ನಾಳೆಯ ದಿನ ಮೂಡುಬಿದಿರೆಯ ಪ್ರದೇಶಗಳಲ್ಲಿ ಜನರ ಅಗತ್ಯಕ್ಕೆ ತಕ್ಕಂತೆ ಅವಶ್ಯಕ ವಸ್ತುಗಳ ಪೂರೈಕೆಗೆ ನಾವೆಲ್ಲ ಸಿದ್ಧರಾಗಬೇಕಾಗುತ್ತದೆ… ಪ್ರತಿ ಭಾಗಗಳಿಗೂ ಸ್ವಯಂಸೇವಕರ ಅನಿವಾರ್ಯತೆ ಇರುತ್ತದೆ.

ದಿನಸಿ ಸಾಮಾಗ್ರಿಗಳ ಪಟ್ಟಿಯೊಂದಿಗೆ ಮನೆಯ ವಿಳಾಸ ಹಾಗೂ ಅವರ ಮೊಬೈಲ್ ನಂಬರ್ ನಿಮಗೆ ನೀಡಲಾಗುತ್ತದೆ.
ನಾವು ಕಳಿಸುವ ದಿನಸಿ ಸಾಮಾಗ್ರಿಗಳ ಪಟ್ಟಿಯನ್ನು ಕೊಂಡು ಹೋಗಿ ಅಂಗಡಿಗಳಲ್ಲಿ ಖರೀದಿಸಿ ಖರೀದಿಸಿದ ಬಿಲ್‌ನೊಂದಿಗೆ ಆಯಾ ವಿಳಾಸಕ್ಕೆ ತಮ್ಮ ವಾಹನಗಳಲ್ಲಿ ತಲುಪಿಸಿ ಬಿಲ್ ಮೊತ್ತವನ್ನು ಮಾತ್ರ ಪಡೆದುಕೊಳ್ಳುವುದು. ಗೂಗಲ್ ಪೇ ಅಥವಾ ಯಾವುದಾದರೂ ದಿಜಿಟಲ್ ವಿನಿಮಯ ಮಾಡಿಕೊಂಡರೆ ಅತ್ಯುತ್ತಮ. ಉತ್ತಮ ಗುಣಮಟ್ಟದ ತರಕಾರಿ, ಆಹಾರ ಧಾನ್ಯಗಳನ್ನೇ ಜನರಿಗೆ ಒದಗಿಸಿ.

ಮೂಡುಬಿದಿರೆ ಪೇಟೆಯಿಂದ ಎಲ್ಲಾ ಮುಖ್ಯ ರಸ್ತೆಗಳಲ್ಲಿ ಸ್ವಯಂಸೇವಕರ ತಂಡ ರಚಿಸಬೇಕಿದೆ. ಬಳಗದ ಎಲ್ಲ ಸದಸ್ಯರಲ್ಲಿ ವಿಜ್ಞಾಪನೆ.. ಈ ಕೆಳಗಿನ ಪ್ರದೇಶಗಳಲ್ಲಿ ನಿಮಗೆ ಕೆಲಸ ನಿರ್ವಹಿಸಲು ಅನುಕೂಲವಾಗುವ ಪ್ರದೇಶಗಳನ್ನು ತಿಳಿಸಿ👍

Advertisement

▪ಜೈನ್ ಪೇಟೆ, ಕೋಟೆಬಾಗಿಲು
▪ಅಲಂಗಾರ್ ಬನ್ನಡ್ಕ
▪ಪಾಲಡ್ಕ- ಕೊಡ್ಯಡ್ಕ
▪ರಿಂಗ್ ರೋಡ್-ಒಂಟಿಕಟ್ಟೆ
▪ಗಾಂಧಿನಗರ-ಹಂಡೇಲು
▪ಮಾಸ್ತಿಕಟ್ಟೆ
▪ಪ್ರಾಂತ್ಯ-ಪೇಪರ್‌ಮಿಲ್
▪ಮಹಾವೀರ ಕಾಲೇಜು ರಸ್ತೆ
▪ಮೂಡುಬಿದಿರೆ ಪೇಟೆ

ನೀವು ಸುರಕ್ಷಿತವಾಗಿರಿ. ಮಾಸ್ಕ್ ಧರಿಸಿ ಇತರರ ಸುರಕ್ಷತೆಗೂ ಪ್ರೇರೇಪಿಸಿ, ಅಂತರ ಕಾಯ್ದುಕೊಳ್ಳಿ.

ಮಾಹಿತಿಗಳಿಗಾಗಿ ಕರೆ ಮಾಡಿ 9844498098

ಏನೇ ಹೇಳಿ ಇಂತಹ ಸಂಘಟನೆಯ ಬೆನ್ನುತಟ್ಟಿ ಪ್ರೋತ್ಸಾಹಿಸುವ ಕಾರ್ಯ ಪ್ರತಿಯೊಬ್ಬರೂ ಮಾಡಬೇಕು. ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟಿ ನಾವೆಲ್ಲ ನಿಲ್ಲಬೇಕಾಗಿದೆ. ಭೇಷ್‌ ಜವನೆರ್‌ ಬೆದ್ರ ಟೀಂ.

LEAVE A REPLY

Please enter your comment!
Please enter your name here