ಗುಡಿಯೊಳಗಿಂದ ಒಮ್ಮೆಗೆ ಗಂಟೆಗಳು ಬಾರಿಸಿದಾಗ ಹೊರಡುವ ನಿನಾದವು ಕೇಳಿಬರುತ್ತವೆ!!!

0
858

ನಿತ್ಯ ಅಂಕಣ: 43 ತಮಿಳುನಾಡು ರಾಜ್ಯದ ಪಳಿನಿಯಲ್ಲಿ ಮುರುಗನ್ ದೇವಸ್ಥಾನ ಇದೆ. ಅಂದರೆ ಸುಬ್ರಹ್ಮಣ್ಯ ದೇವಸ್ಥಾನ. ಇದು ಪವಿತ್ರ ತೀರ್ಥ ಕ್ಷೇತ್ರ. ಪಳನಿ ಕ್ಷೇತ್ರದಲ್ಲಿ ಯುವ ನಿತ್ಯಾನಂದರು ಕೆಲವು ಸಮಯ ಮೊಕ್ಕಾಂ ಹೂಡಿದ್ದರು. ಒಂದು ದಿನ ಬೆಳಗ್ಗಿನ ಸಮಯದಲ್ಲಿ ನಿತ್ಯಾನಂದರು ಬೆಟ್ಟವನ್ನು ಹತ್ತಿ ಮೇಲೇರುತ್ತಿದ್ದರು. ಗುಡಿ ತಲುಪಲು ಕೆಲವು ದೂರ ಇರುವಾಗಲೇ ಬೆಳಗ್ಗಿನ ಜಾವದ ಪೂಜಾ ಕೈಂಕರ್ಯಗಳನ್ನು ಮುಗಿಸಿಕೊಂಡು ಕ್ಷೇತ್ರದ ಅರ್ಚಕರು ಕೆಳಗೆ ಇಳಿಯುತ್ತಿದ್ದರು. ಇಳಿದು ಬರುತ್ತಿದ್ದ ಅರ್ಚಕರಲ್ಲಿ ನಿತ್ಯಾನಂದರು ಮಾತಿಗಿಳಿದರು. ಪುನಃ ಗರ್ಭಗುಡಿಯ ಬಾಗಿಲು ತೆರೆದು ಸುಭ್ರಮಣ್ಯ ಸ್ವಾಮಿಗೆ ಆರತಿ ಬೆಳಗಲು ಹೇಳುತ್ತಾರೆ. ನಿತ್ಯಾನಂದರ ಆದೇಶ ಆಲಿಸಿದ ಅರ್ಚಕ, ಒಮ್ಮೆಗೆ ನಿತ್ಯಾನಂದರನ್ನು ವಕ್ರದೃಷ್ಠಿಯಿಂದ ನೋಡುತ್ತಾನೆ. ಆ ದೃಷ್ಠಿಯಲ್ಲಿ ಆಕ್ರೋಶ ಇತ್ತು. ಇಂದಿನ ಬೆಳಗ್ಗಿನ ‘ಪೂಜೆ ಮುಗಿದಿದೆ’ ಎಂದು ಏರು ಧ್ವನಿಯಲ್ಲಿ ಹೇಳಿ, ಮೆಟ್ಟಿಲು ಇಳಿದು ಕೆಳಗೆ ಹೋಗಲು ಮುಂದಾಗುತ್ತಾರೆ.

ನಿತ್ಯಾನಂದರು ಅರ್ಚಕನ ಮಾತು ಕೇಳಿದರೂ.. ಕೇಳದಂತೆ ಗುಡಿಯತ್ತ ಮುಂದುವರಿಯುತ್ತಾರೆ. ಅರ್ಚಕರು ಕೆಳೆಗೆ ಇಳಿಯುತ್ತ ನಡುದಾರಿ ಸನಿಹ ಬಂದಾಗ, ಗುಡಿಯೊಳಗಿಂದ ಒಮ್ಮೆಗೆ ಗಂಟೆಗಳು ಬಾರಿಸಿದಾಗ ಹೊರಡುವ ನಿನಾದವು ಕೇಳಿಬರುತ್ತವೆ. ಇದೇನು ವಿಚಿತ್ರ..! ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. ಒಳಗೆ ಯಾರೂ ಪ್ರವೇಶ ಮಾಡುವ ಹಾಗಿಲ್ಲ. ಅನಿರೀಕ್ಷಿತ ಹೊತ್ತಲ್ಲಿ ಗಂಟೆ ನಾದವು ಹೇಗೆ ಮೊಳಗಿತ್ತೆಂದು ಅರ್ಚಕರಿಗೆ ಪ್ರಶ್ನೆಯಾಗಿ ಕಾಡುತ್ತದೆ. ಸಾನಿಧ್ಯದಲ್ಲಿ ಏನೋ ಅಚ್ಚರಿ ನಡೆಯುತ್ತಿದೆ ಎಂದು ಮತ್ತೊಮ್ಮೆ ಗುಡಿಯತ್ತ ಮೇಲೆರುತ್ತಾರೆ. ಅಲ್ಲಿ ಅವರಿಗೆ ಎನಿಸಿದಂತೆ ಅಚ್ಚರಿ ಪಡಬೇಕಾಯಿತು. ಗರ್ಭಗುಡಿಯ ಬಾಗಿಲು ತೆರೆದಿರುವುದನ್ನು ಮೊದಲು ಕಂಡರು. ನಂತರ ತನ್ನಲ್ಲಿ ಪೂಜೆ ಮಾಡೆಂದು ಆದೇಶಿಸಿದ ಅಪರಿಚಿತ ವ್ಯಕ್ತಿ ಕಂಡು ಬಂದನು. ಅದು ಕೂಡ ಅವರು ಸುಬ್ರಹ್ಮಣ್ಯ ದೇವರ ಬಳಿ ಇದ್ದರು. ಅವರ ಕೈಗಳಿಂದ ಆರತಿಯು ದೇವರಿಗೆ ನಿಧಾನ ಗತಿಯಲ್ಲಿ ಬೆಳಗುತಿತ್ತು. ಕೆಲವು ಕ್ಷಣಗಳಲ್ಲಿ ಈ ಎಲ್ಲಾ ಅಚ್ಚರಿಯ ಬೆಳವಣಿಗೆಗಳು ಅರ್ಚಕರ ಕಣ್ಣಬಿಂಬದಲ್ಲಿ ಕ್ಷಣ ಹೊತ್ತಿನವರೆಗೆ ಕಂಡವು. ನಂತರ ಮಾಯವಾದವು. ಮತ್ತೆ ಅದೇ ವ್ಯಕ್ತಿ ಗರ್ಭಗುಡಿಯ ಹೊರ ಪಡಶಾಲೆಯಲ್ಲಿ ಕಂಡುಬಂದರು. ಅರ್ಚಕನು ಮೊದಲು ಆ ವ್ಯಕ್ತಿಯನ್ನು ಅಪರಿಚತನಂತೆ ಮೊದಲು ವಕ್ರ ದೃಷ್ಠಿಯಲ್ಲಿ ಕಂಡಿದ್ದರು..! ನಂತರದಲ್ಲಿ ನಡೆದದ್ದು ವಿಸ್ಮಯ ಪವಾಡ..! ಅದೇ ವ್ಯಕ್ತಿ ದಿವ್ಯಶಕ್ತಿಯಾಗಿ ಅರ್ಚಕರ ದಿವ್ಯದ್ರಷ್ಠಿಗೆ ಕಂಡು ಬಂದರು. ಆ ದಿವ್ಯ ಶಕ್ತಿಯೇ ಅವಧೂತ ನಿತ್ಯಾನಂದ ಸ್ವಾಮಿಗಳೆಂದು ನಂತರ ಅರ್ಚಕರಿಗೆ ತಿಳಿದುಬರುತ್ತದೆ.

ಹಾಗೆಯೇ ನಿತ್ಯಾನಂದರು ಬೆಟ್ಟದ ತಳಭಾಗದಲ್ಲಿ ನೆಲೆ ಕಂಡಿರುವ ಸಾಲಾಗಿ ಭಿಕ್ಷಾಪಾತ್ರೆ ಹಿಡಿದು ಕುಳಿತುಕೊಂಡಿರುವ ಸಾಧುಗಳಿಗೆ ಭಿಕ್ಷಾಪಾತ್ರೆಯಲ್ಲಿ ತಾವು ಉಟ್ಟ ಲಂಗೋಟಿಯಿಂದ ಹಣ ತೆಗುದು ಹಾಕುತ್ತಲೇ ಮುಂದೆ ಸಾಗುತ್ತಾರೆ. ಅಲ್ಲಿಯ ಸಾಧುಗಳು ಚಮತ್ಕಾರ ಕಂಡು ಅಚ್ಚರಿ ಪಡುವಂತಾಗುತ್ತಾರೆ. ಎಲ್ಲಾ ಸಾಧುಗಳು ನಿತ್ಯಾನಂದರನ್ನು ಈ ಮೊದಲು ಅಲೆಮಾರಿ ಎಂದು ತಿಳಿದಿದ್ದರು. ಅದ್ಭುತವಾದ ಪವಾಡ ಕಂಡಬಳಿಕ ಅವರಿಗೆ ಅವರು ಸಾಮಾನ್ಯ ವ್ಯಕ್ತಿಯಲ್ಲ..! ಅವಧೂತ ಶಕ್ತಿ..! ಎಂದು ತಿಳಿದುಕೊಂಡರು. ಒಂದಿಷ್ಟು ಹಣವನ್ನು ನಿತ್ಯಾನಂದರು ಅಲ್ಲಿರುವ ಸಾಧುಗಳ ಮುಖ್ಯ ಗುರುವಿಗೆ ನೀಡುತ್ತಾರೆ. ಬೆಳಗ್ಗಿನ ಜಾವದ ಒಂದು ಹೊತ್ತಿನ ಗಂಜಿಯನ್ನು ಹಸಿದವರಿಗೆ ವಿತರಿಸಲು ಗಂಜಿ ಕೇಂದ್ರ ತೆರೆಯುವಂತೆ ಸಲಹೆ ನೀಡುತ್ತಾರೆ. ಗುರುದೇವರ ಸಲಹೆಯಂತೆ ಸಾಧುಗಳ ಮುಖ್ಯಸ್ಥರು ಗಂಜಿ ಕುಟೀರ ಸ್ಥಾಪನೆ ಮಾಡಿ ಗಂಜಿ ಊಟ ಸಾಧುಗಳಿಗೆ ವಿತರಿಸುತ್ತಾರೆ. ನಿತ್ಯಾನಂದರಿಗೆ ಖಾಯಂ ಪಳನಿಯಲ್ಲಿ ನೆಲೆ ನಿಲ್ಲಲು ಭಕ್ತರು ಒತ್ತಾಯಿಸುತ್ತಾರೆ. ಆದರೆ ನಗುತ್ತಲೇ.. ನಿತ್ಯಾನಂದರು, “ಬಹುದಿನಗಳ ಪ್ರಯಾಣ ಇನ್ನೂ ಮುಂದೆ ಇದೆ. ತಲುಪ ಬೇಕಾದ ಪವಿತ್ರ ಸ್ಥಳವು ಇನ್ನೂ ದೂರ ಇದೆ” ಎಂದು ಹೇಳುತ್ತಾರೆ. ಹಾಗಾದರೆ ನಿತ್ಯಾನಂದರು ತಲುಪಲು ಇದ್ದ ಪವಿತ್ರ ಸ್ಥಳ ಗಣೇಶಪುರಿ ಎಂಬವುದಂತು ಸತ್ಯ ಎಂದು ಇಂದು ಸುಲಭವಾಗಿ ಹೇಳಬಹುದು.

-ತಾರಾನಾಥ್‌ ಮೇಸ್ತ,ಶಿರೂರು.

LEAVE A REPLY

Please enter your comment!
Please enter your name here