ಗುಜರಾತ್ ಸಿಎಂ ರಾಜೀನಾಮೆ

0
242

 
ವರದಿ: ಲೇಖಾ
ಗುಜರಾತ್ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಉಕ್ಕಿನ ಮಹಿಳೆ ಖ್ಯಾತಿಯ ಆನಂದಿ ಬೆನ್ ಪಟೇಲ್ ಅವಧಿ ಪೂರ್ಣಗೊಳ್ಳುವ ಮುನ್ನವೇ ಸ್ಥಾನ ತ್ಯಜಿಸಿದ್ದಾರೆ.
 
 
 
ನವೆಂಬರ್ ತಿಂಗಳಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ತೆರವುಗೊಳಿಸಿ ಎಂದು ಆನಂದಿಬೆನ್ ಪಕ್ಷದ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ.
 
 
 
1998ರಲ್ಲಿ ಸಚಿವೆಯಾದ ದಿನದಿಂದಲೂ ಹಂತಹಂತವಾಗಿ ಮೇಲಕ್ಕೇರಿದ್ದ ಆನಂದಿಬೆನ್, 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ, ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಪಕ್ಷ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಅವಧಿಗೂ ಮುನ್ನ ಸ್ಥಾನ ತ್ಯಜಿಸುವ ನಿರ್ಧಾರ ಪ್ರಕಟಿಸಿದ್ದಾರೆ ಎನ್ನಲಾಗಿದೆ.
 
 
 
ನ.21ರಂದು ಪಟೇಲ್ 75ನೇ ವರ್ಷಕ್ಕೆ ಕಾಲಿಡಲಿದ್ದು, ಹೊಸ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆನಂದಿ ಬೆನ್ ಅವರು ರಾಜೀನಾಮೆ ನೀಡಲು ಪಟೇಲ್ ಮೀಸಲಾತಿ ಹೋರಾಟ ಹತೋಟಿಗೆ ವಿಫಲ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷಕ್ಕೆ ಮುಖಭಂಗ,ದಲಿತರ ಮೇಲೆ ಹಲ್ಲೆಯಿಂದ ಪಕ್ಷದ ಇಮೇಜ್​ಗೆ ಹಾನಿ ಹಾಗೂ 2017ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ತಯಾರಿ ಮೊದಲಾದ ಅಂಶಗಳು ಕಾರಣ ಎನ್ನಲಾಗಿದೆ.
 
 
ಆನಂದಿಬೆನ್ ಪಟೇಲ್ ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇವೆ. ಮುಂದೆ ನಡೆಯಲಿರುವ ಸಂಸದೀಯ ಮಂಡಳಿ ಸಭೆಯಲ್ಲಿ ಮುಂದಿನ ಸಿಎಂ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here