ಗುಂಪೆ ವಲಯ ಸಭೆ

0
546

 
ವರದಿ-ಚಿತ್ರ: ಗೋವಿಂದ ಬಿ ಜಿ
ಮುಳ್ಳೇರಿಯಾ ಹವ್ಯಕ ಮಂಡಲ ಗುಂಪೆ ವಲಯ ಸಭೆಯು ಚೆಕ್ಕೆ ಮನೆ ಸುಬ್ರಹ್ಮಣ್ಯ ಭಟ್ಟರ ಮನೆಯಲ್ಲಿ ಜರಗಿತು. ಶಂಖ ನಾದ ಗುರು ವಂದನೆಯೊಂದಿಗೆ ಸಭೆ ಆರಂಭವಾಯಿತು.
 
 
 
ಸಭೆಯ ಅಧ್ಯಕ್ಷತೆಯನ್ನು ಅಮ್ಮಂಕಲ್ಲು ರಾಮಭಟ್ ವಹಿಸಿದರು. ಗತ ಸಭೆಯ ವರದಿಯನ್ನು ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ನೀಡಿದರು. ಕೋಶಾಧಿಕಾರಿ ಜಯರಾಮ ಚೆಕ್ಕೆಮನೆ ಇವರು ಲೆಕ್ಕ ಪತ್ರ ನೀಡಿದರು. ಮುಳ್ಳೇರಿಯಾ ಮಂಡಲ ವತಿಯಿಂದ ನಡೆದ ಯಶಸ್ವಿ ಮಹಾಅಭಿಯಾನ ಬಗ್ಗೆ ಸಂತಸ ವ್ಯಕ್ತಪಡಿಸಲಾಯಿತು. ಹಾಗೂ ಅಭಿಯಾನದಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಯಿತು. ಬೆಳೆಸಮರ್ಪಣೆಗೆ ಶ್ರೀರಾಮ ನೈವೇದ್ಯಕ್ಕೆ ಬೇಕಾದ ಭತ್ತ ಬೆಳೆಸುವುದರ ಬಗ್ಗೆ ಚರ್ಚಿಸಲಾಯಿತು.
 
 
ಪ್ರತಿಭಾವಂತ ವಿದ್ಯಾರ್ಥಿ ಎಡಕ್ಕಾನ ಗೋವಿಂದ ಭಟ್ಟರ ಮಗ ಆದರ್ಶ ಇ. ಯಚ್. ಪಿಯುಸಿ ಯಲ್ಲಿ 97% ಹಾಗೂ ಸಿ.ಇ.ಟಿ ಯಲ್ಲಿ 183 ನೇ ಸ್ಥಾನ ಪಡೆದಿರುವನು. ಅವನನ್ನು ಸಭೆಯಲ್ಲಿ ಗೌರವಿಸಲಾಯಿತು.
 
ಗ್ರಾಮಿಣಿ ಎಡಕ್ಕಾನ ಸುಬ್ಬಾ ಭಟ್, ಎಡಕ್ಕಾನ ಗಣಪತಿ ಭಟ್, ಶ್ರಾವಣಗೆರೆ ಶಂಭು ಹೆಬ್ಬಾರ್, ನೆರಿಯ ಲಕ್ಮೀನಾರಾಯಣ ಭಟ್, ಉರ್ಮಿ ಗೋಪಾಲಕೃಷ್ಣ. ಭಟ್, ಪದಾಧಿಕಾರಿಗಳು, ಶ್ರೀಕಾರ್ಯಕರ್ತರು ಉಪಸ್ಥಿತರಿದ್ದರು. ರಾಮತಾರಕ ಜಪ, ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here