ಗೀತಂ ವಿವಿ ಸಂಶೋಧನಾ ವೇದಿಕೆಯ ಉದ್ಘಾಟನೆ

0
356

ಬೆಂಗಳೂರು ಪ್ರತಿನಿಧಿ ವರದಿ
ಗೀತಂ ವಿಶ್ವವಿದ್ಯಾಲಯ ಬೆಂಗಳೂರು ಕ್ಯಾಂಪಸ್ ನಲ್ಲಿ ಪ್ರಸಕ್ತ ವರ್ಷ 2016- 17 ರ ಸಂಶೋಧನಾ ವೇದಿಕೆಯ ಉದ್ಘಾಟನಾ ಸಮಾರಂಭ ನಡೆಯಿತು.
 
 
ಗೀತಂ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಎಂ ಎಸ್ ಪ್ರಸಾದ್ ರಾವ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗೀತಂ ವಿಶ್ವ ವಿದ್ಯಾಲಯವು ಸಂಶೋಧನೆಗೆ ಹೆಚ್ಚಿನ ಒತ್ತನ್ನು ನೀಡುತ್ತದೆ.
 
 
ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕ ವರ್ಗದವರಿಗೆ ಇದರಿಂದ ಅನುಕೂಲವಾಗುತ್ತಿದೆ. ಬೇರೆ ಬೋಧಕ ವೃಂದದವರೊಂದಿಗೂ ಕಲೆತು ಸಂಶೋಧನೆಗೆ ಪೂರಕವಾಗುವಂತೆ ಪ್ರೇರೇಪಿಸಲಾಗುವುದು ಎಂದರು.
 
 
ಎಂಬಿಎ ನಿರ್ದೇಶಕರಾದ ಪ್ರೊ. ಎಂ ವಿ ರಾಮ್ ಪ್ರಸಾದ್, ಬಿಎಸ್ ಎಂ ಎಸ್ ನ ಪ್ರಸಕ್ತ ಸಂಶೋಧನಾ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ಗೀತಂ ವಿವಿ ಬೆಂಗಳೂರು ಕ್ಯಾಂಪಸ್ ನ ಸಂಶೋಧನಾ ಸಂಯೋಜಕರಾದ ಡಾ ಆರ್ ವೆಂಕಟನಾಥ್, ಜಿ ಎಸ್ ಟಿ ಯ ಪ್ರಸಕ್ತ ಸಂಶೋಧನಾ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ‘ಅ ಪ್ರೊಮಿಸಿಂಗ್ ಗ್ರೀನ್ ಟೆಕ್ನೊಲಜಿ ಎಪ್ರೋಚ್’ ಕುರಿತಂತೆ ಸಹಾಯಕ ಪ್ರಾಧ್ಯಾಪಕ ಡಾ. ಹೆಚ್ ಮಂಜುನಾಥ್ ಮಾತನಾಡಿದರು.
ಗೀತಂ ವಿವಿ ಬೆಂಗಳೂರು ಕ್ಯಾಂಪಸ್ ನ ಸ್ಕೂಲ್ ಆಫ್ ಟೆಕ್ನೋಲಜಿಯ ನಿರ್ದೇಶಕರಾದ ಪ್ರೊ. ಕೆ ವಿಜಯ ಭಾಸ್ಕರ್ ರಾಜು, ಸಹ ಪ್ರಾಧ್ಯಾಪಕರಾದ ಡಾ. ಕೃಷ್ಣಪ್ರಸಾದ್, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here