ಗೀತಂ ವಿವಿಯಿಂದ ಫೈನಾನ್ಸ್ ತಂತ್ರಜ್ಞಾನ ಶಿಕ್ಷಣ

0
599

 
ಬೆಂಗಳೂರು ಪ್ರತಿನಿಧಿ ವರದಿ
ಹಣಕಾಸು ವಲಯದಲ್ಲಿ ತಾಂತ್ರಿಕವಾಗಿ ನಿಪುಣರಾದ ತಜ್ಞರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೀತಂ ವಿಶ್ವವಿದ್ಯಾಲಯವು ಹೊಸದಾಗಿ ಗೀತಂ ಫೈನಾನ್ಶಿಯಲ್ ಟೆಕ್ನಾಲಜಿ (Fin Tech) ಶಿಕ್ಷಣವನ್ನು ಈ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಯೋಜನೆ ರೂಪಿಸಿದೆ. ಉಪ ಕುಲಪತಿ ಪ್ರೊ. ಎಂ. ಎಸ್. ಪ್ರಸಾದ್ ರಾವ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಗೀತಂ ಕ್ಯಾಂಪಸ್ ನಲ್ಲಿ ಇಂತಹ FINTECH ಕೋರ್ಸ್ ಆರಂಭಿಸುವ ಕುರಿತ ಪ್ರಸ್ತಾವನೆಯನ್ನು ಪರಿಶೀಲನೆ ನಡೆಸಿದೆ.
 
ಸಮಿತಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಉಪ ಕುಲಪತಿ ಪ್ರೊ ಎಂ. ಎಸ್. ಪ್ರಸಾದ್ ರಾವ್, ಹಣಕಾಸು ತಂತ್ರಜ್ಞಾನ (Fin Tech)ವು ಹಣಕಾಸು ಸೇವಾ ಕ್ಷೇತ್ರವು ಅಪ್ಲಿಕೇಶನ್, ಪ್ರೋಸೆಸ್, ಪ್ರಾಡಕ್ಟ್ ಅಥವಾ ಉದ್ಯಮದ ಮಾದರಿ ಮುಂದೆ ಎದುರಾಗುತ್ತಿರುವ ಹೊಸ ಸವಾಲುಗಳಿಗೆ ಪರಿಹಾರ ಒದಗಿಸಲು ಶಕ್ತವಾಗಿದೆ ಎಂದು ಅಭಿಪ್ರಾಯ ಪಟ್ಟರು. ಫಿನ್ ಟೆಕ್ ನವೋದ್ಯಮ (ಸ್ಟಾರ್ಟ್-ಅಪ್) ಮೇಲಿನ ಹೂಡಿಕೆಯು ಕಳೆದ ಐದು ವರ್ಷಗಳಲ್ಲಿ ಅದರಲ್ಲೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶೇ. 600ಕ್ಕೂ ಹೆಚ್ಚಾಗಿದೆ. ಭವಿಷ್ಯದಲ್ಲಿ ತಂತ್ರಜ್ಞಾನ ಆವಿಷ್ಕಾರಕ್ಕಾಗಿ ಸುಮಾರು 20 ಶತ ಕೋಟಿ ಹೂಡಿಕೆ ಮಾಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಗೀತಂ ವಿಶ್ವವಿದ್ಯಾಲಯವು ಹಣಕಾಸು ತಂತ್ರತಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಕೋರ್ಸ್ ಗಳನ್ನು ಆಫರ್ ಮಾಡಲು ನಿರ್ಧರಿಸಿದೆ ಎಂದು ಹೇಳಿದರು. ಅದರಲ್ಲೂ ಮುಖ್ಯವಾಗಿ ಸರ್ಟಿಫಿಕೇಟ್ ಕೋರ್ಸ್ ಗಳಾದ ಕ್ರೌಡ್ ಫಂಡಿಂಗ್(Crowd Funding), ಕ್ರೈಪ್ಟೊ ಕರೆನ್ಸೀಸ್ (Crypto currencies), ಸೋಶಿಯಲ್ ಮೀಡಿಯಾ ಬ್ಯಾಂಕಿಂಗ್, ಡಿಜಿಟಲ್ ಫೈನಾನ್ಶಿಯಲ್ ಸರ್ವಿಸ್ ಮೊದಲಾದ ಕೋರ್ಸ್ ಗಳನ್ನು ಗೀತಂ ಫಿನ್ ಟೆಕ್ ಅಕಾಡೆಮಿ ಮೂಲಕ ನೀಡಲು ನಿರ್ಧರಿಸಿದೆ. ಜೊತೆಗೆ ಇದೇ ವಿಭಾಗದ ಮೂಲಕ ಎಕ್ಸಿಕ್ಯೂಟಿವ್ ಡೆವಲಪ್ ಮೆಂಟ್ ಪ್ರೋಗ್ರಾಂ ಗಳನ್ನು ಆರಂಭಿಸಲು ಕೂಡ ಸಂಸ್ಥೆ ಚಿಂತನೆ ನಡೆಸಿದೆ ಎಂದು ಉಪ ಕುಲಪತಿಗಳು ಹೇಳಿದರು.
 
 
ಪರಿಶೀಲನೆ ಸಭೆಯ ಸಂದರ್ಭದಲ್ಲಿ ತಜ್ಞರು,ಹಣಕಾಸು ತಂತ್ರಜ್ಞಾನದ ನವೋದ್ಯಮಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೊಸ ಕೋರ್ಸ್ ಗಳನ್ನು ಆರಂಭಿಸುವಂತೆ ಸಲಹೆ ನೀಡಿದರು. ಈ ನಿಟ್ಟಿನಲ್ಲಿ ಹಣಕಾಸು ಮತ್ತು ಪಾವತಿ, ಮಾರುಕಟ್ಟೆ ಪ್ರದೇಶ, ಇ-ಮಾರುಕಟ್ಟೆ, ಮೂಲ ಸೌಕರ್ಯ (ಗುರುತಿಸುವಿಕೆ, ಖಾಸಗಿತನ, ಭದ್ರತೆ) ಮತ್ತು ಡೇಟಾ ಎನಲೈಸಿಸ್ ಮೊದಲಾದ ಕ್ಷೇತ್ರಗಳಲ್ಲಿ ಹೊಸ ಸಂಶೋಧನೆ ನಡೆಸುವಂತೆ ಸಲಹೆ ಕೊಟ್ಟರು.
 
 
ಗೀತಂ ವಿಶ್ವವಿದ್ಯಾಲಯದ ಸಹಾಯಕ ಉಪ ಕುಲಪತಿಗಳಾದ ಪ್ರೊ ಕೆ. ಶಿವರಾಮ ಕೃಷ್ಣ, ರಿಜಿಸ್ಟ್ರಾರ್ ಪ್ರೊ ಎಂ. ಪೋತರಾಜು, ಐಕ್ಯೂಎಸಿ ನಿರ್ದೇಶಕರಾದ ಪ್ರೊ. ಕೆ. ತಮ್ಮಿರೆಡ್ಡಿ, ಐಟಿ ವಿಭಾಗದ ಮುಖ್ಯಸ್ಥರಾದ ಪ್ರೊ. ವೈ. ಶ್ರೀನಿವಾಸ್, ಜಿಎಸ್ ಐಬಿ ಹಿರಿಯ ಬೋಧಕರಾದ ಡಾ. ಎಂ. ಎಸ್. ಸುಬ್ರಹ್ಮಣ್ಯಂ ಸೇರಿದಂತೆ ಅನೇಕರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here