ಗೀತಂ ವಿವಿಯಲ್ಲಿ ಕಾಫಿ ವಿತ್ ಸಿಇಒ

0
243

 
ಬೆಂಗಳೂರು ಪ್ರತಿನಿಧಿ ವರದಿ
ಪ್ರತಿಷ್ಠಿತ ಗೀತಂ ವಿಶ್ವವಿದ್ಯಾಲಯದ ಬೆಂಗಳೂರು ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ಮಹತ್ವಾಕಾಂಕ್ಷೆಯ ಕಾಫಿ ವಿತ್ ಸಿಇಒ ಕಾರ್ಯಕ್ರಮದಲ್ಲಿ ಚಾಂಪಿಯನ್ ಗ್ರೂಪ್ ಲಿಮಿಟೆಡ್ ನ ಲೆಫ್ಟಿನೆಂಟ್ ಕರ್ನಲ್ ಗೋವಿಂದ್ ರಾಜುಲು ವಿ ಅವರು ಎಂಬಿಎ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.
 
 
 
ಗೀತಂ ವಿವಿಯ ಬಿಎಸ್ಎಂಎಸ್ ನಿರ್ದೇಶಕರಾದ ಪ್ರೊ. ಎಂ. ವಿ. ರಾಮ ಪ್ರಸಾದ್ , ಗೋವಿಂದ ರಾಜುಲು ಅವರನ್ನು ಪರಿಚಯಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿ ಮತ್ತು ಉದ್ಯೋಗ ಭವಿಷ್ಯದ ಯಶಸ್ಸಿಗಾಗಿ ಅವರು ಮಾಡಬೇಕಾದ ಕೆಲಸಗಳ ಕುರಿತು ಸುದೀರ್ಘ ಮಾಹಿತಿ ನೀಡಿದರು.
 
 
ಪ್ರತಿಯೊಬ್ಬ ವಿದ್ಯಾರ್ಥಿಯು ಬೆಳೆಸಿಕೊಳ್ಳಬೇಕಾದ ಐದು ಪ್ರಮುಖ ಕೌಶಲ್ಯಗಳನ್ನು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು. ಬದ್ಧತೆ, ಕಲಿಕೆ, ಸಕಾರಾತ್ಮಕ ಯೋಜನೆ, ಪ್ರಾಮಾಣಿಕತೆ ಮತ್ತು ನಾನಾ ಕೆಲಸ ಮಾಡುವ ಸಾಮರ್ಥ್ಯ ಹೀಗೆ ಐದು ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದರು. ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸೇರಿದ್ದು ಈ ಸಲಹೆ ಅತ್ಯಂತ ಉಪಯುಕ್ತವಾಗಿದ್ದವು. ಇದರಿಂದ ಮುಂದಿನ ಜೀವನದ ಹಾದಿಯ ಕುರಿತು ಅವರಲ್ಲಿ ಮೂಡಿದ್ದ ಅಸ್ಪಷ್ಟತೆ ನಿವಾರಣೆಯಾಯಿತು. ವಿದ್ಯಾರ್ಥಿ ಮತ್ತು ಬೋಧಕ ವೃಂದ ಇಬ್ಬರಿಗೂ ಈ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿ ಆಗಿತ್ತು.

LEAVE A REPLY

Please enter your comment!
Please enter your name here