ಗಾಳಿಪಟ: ‘ಚೈನೀಸ್ ದಾರ್’ ಕ್ಕೆ ನಿಷೇಧ

0
154

ವರದಿ: ಲೇಖಾ
ಕರ್ನಾಟಕ ಸರ್ಕಾರವು ಗಾಳಿಪಟ ಹಾರಿಸಲು ಬಳಸುವ ನೈಲಾನ್ ದಾರ, ಸಾಮಾನ್ಯವಾಗಿ ಕರೆಯಲ್ಪಡುವ “ಚ್ಯನೀಸ್ ದಾರ್” ಅಥವಾ “ಚೈನೀಸ್ ಮಂಜ” ಅಥವಾ ಗಾಜು ಇಲ್ಲವೆ ಇತರ ಕೃತಕ ಜೈವಿಕವಲ್ಲದ ಹಾನಿಕಾರಕ ವಸ್ತುಗಳಿಂದ ತಯಾರಿಸಿದ ದಾರದ ಬಳಕೆಯನ್ನು ನಿಷೇಧಿಸಿದೆ.
 
 
ಇಂತಹ ಹಾನಿಕಾರಕ ವಸ್ತುಗಳಿಂದ ಪಕ್ಷಿ ಪ್ರಾಣಿ ಹಾಗೂ ಮಾನವನಿಗೆ ತೀವ್ರತರವಾದ ಗಾಯಗಳಾಗುವ ಸಾಧ್ಯತೆಗಳಿರುವುತ್ತವೆ. ಇಂತಹ ದಾರಗಳು ಮಣ್ಣು, ನೀರು ಹಾಗೂ ಜಾನುವಾರುಗಳ ಮೇಲೆ ಪ್ರತಿಕೂಲ ಪರಿಣಾವನ್ನುಂಟುಮಾಡುತ್ತವೆ. ಅಲ್ಲದೇ ಪರಿಸರಕ್ಕೆ ಧಕ್ಕೆಯನ್ನುಂಟುಮಾಡುವ ಕಾರಣ, ಸಾರ್ವಜನಿಕ ಹಿತಾಸಕ್ತಿಯಲ್ಲಿ ಇಂತಹವುಗಳನ್ನು ಸಂಪಾದಿಸುವುದು, ಸಂಗ್ರಹಿಸುವುದು, ಮಾರಾಟ ಮಾಡುವುದು ಹಾಗೂ ಬಳಕೆ ಮಾಡುವುದನ್ನು ಕೂಡ ನಿಷೇಧಿಸಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸರ್ಕಾರ ಹಾಗೂ ಜಾರಿ ನಿರ್ದೇಶನಾಲಯದ ಅದಿಕಾರಿಗಳೊಂದಿಗೆ ಸಹಕರಿಸಲು ಅರಣ್ಯ ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here