ಗಾರ್ಲಿಕ್ ಬ್ರೆಡ್ ವಿತ್ ಚೀಸ್

0
248

 
ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿ :
1 ಪ್ಯಾಕೆಟ್ ಸ್ಯಾಂಡ್ವಿಚ್ ಬ್ರೆಡ್, 1 ಕಪ್ ಬೇಸಿಲ್ ಎಲೆಗಳು, 2-4 ಎಸಳು ಬೆಳ್ಳುಳ್ಳಿ, 1/2 ಕಪ್ ಶೇಂಗಾಬೀಜ, 8-10 ಚಮಚ ಆಲಿವ್ ಎಣ್ಣೆ, 5-6 ಚೆರ್ರಿ  ಟೊಮೆಟೊ, 100 ಗ್ರಾ ಮೊಜರೀಲಾ ಚೀಸ್, 1/3 ಕಪ್ ಪೆರ್ಮೆನ್ಸನ್ ಚೀಸ್, ರುಚಿಗೆ ತಕ್ಕಷ್ಟು ಉಪ್ಪು.
 
 
 ತಯಾರಿಸುವ  ವಿಧಾನ:
ಸ್ಯಾಂಡ್ವಿಚ್ ಬ್ರೆಡ್ಡನ್ನು ಮೊದಲು ಕೆಂಪಗಾಗುವಂತೆ ಗ್ರಿಲ್ಡ್  ಮಾಡಿ, ಬೆಳ್ಳುಳ್ಳಿ ಮತ್ತು ಶೇಂಗಾಬೀಜವನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ. ಬೇಸಿಲ್ ಎಲೆಗಳನ್ನು ತೊಳೆದು ಒರೆಸಿ. ಉಪ್ಪು ಮತ್ತು 2 ಚಮಚ ಆಲಿವ್ ಎಣ್ಣೆ ಹಾಕಿ. ಅದಕ್ಕೆ ಪೆರ್ಮನ್ಸನ್ ಚೀಸ್ ಹಾಕಿ ಮಿಕ್ಸಿಯಲ್ಲಿ ರುಬ್ಬಿ. ಗ್ರಿಲ್ ಮಾಡಿದ ಬ್ರೇಡ್ ಮೇಲೆ ಆಲಿವ್ ಎಣ್ಣೆಯನ್ನು ಹರಡಿ ಅದರ ಮೇಲೆ ಶೇಂಗಾಬೀಜ ಮತ್ತು ಬೆಳ್ಳುಳ್ಳಿ ಪೇಸ್ಟ್ ಸವರಿ ಅದರ ಮೇಲೆ ಮೊಜರೀಲಾ ಚೀಸ್ನ್ನು ಹಾಳೆಯಂತೆ ಕತ್ತರಿಸಿ ಹಾಕಿ. ಅದರ ಮೇಲೆ ಸಣ್ಣ ಚೆರ್ರಿ ಟೊಮೆಟೊ ಇಟ್ಟು ಅದರ ಮೇಲೆ ಬೇಸಿಲ್ ಎಲೆಯ ಪೇಸ್ಟ್ ಹಾಕಿ ಎಲ್ಲೆಡೆ ಬರುವಂತೆ ಹರಡಿ. ತುಸು ಉಪ್ಪು ಮೆಣಸಿನ ಹುಡಿ ಹಾಕಿ ಮತ್ತಷ್ಟು ಆಲಿವ್ ಎಣ್ಣೆ ಹಾಕಿ ಓವನ್ನಲ್ಲಿ ಇಟ್ಟು ಗ್ರಿಲ್ ಮಾಡಿ. ಬಿಸಿ ಇರುವಾಗಲೇ ಸವಿಯಲು ಕೊಡಿ.

LEAVE A REPLY

Please enter your comment!
Please enter your name here