'ಗಾಟ್ 2016' ಪ್ರವೇಶಾತಿ ಕೌಂಸಿಲಿಂಗ್ ಪ್ರಾರಂಭ

0
374

 
ಬೆಂಗಳೂರು ಪ್ರತಿನಿಧಿ ವರದಿ
ಗೀತಂ ವಿಶ್ವವಿದ್ಯಾಲಯದ ವಿಶಾಖಪಟ್ಟಣಂ,ಹೈದರಾಬಾದ್ ಹಾಗೂ ಬೆಂಗಳೂರು ಕ್ಯಾಂಪಸ್ ಗಳ ಬಿ ಟೆಕ್, ಬಿ ಫಾರ್ಮ್ ಹಾಗೂ ಬಿ ಆಕ್ರ್ ಪ್ರವೇಶಾತಿ ಸಂಬಂಧ ನಡೆಸಿರುವ ‘ಗಾಟ್ 2016’ ಪರೀಕ್ಷೆಯ ಫಲಿತಾಂಶ ಈಗಾಗಲೇ ಬಂದಿದ್ದು, ಇದೀಗ ಬೆಂಗಳೂರು ಕ್ಯಾಂಪಸ್ ಗೆ ಕೌಂಸಿಲಿಂಗ್ ಪ್ರಕ್ರಿಯೆ ಮೇ 21 ಹಾಗೂ 22 ರಂದು ಗೀತಂ ಬೆಂಗಳೂರು ಕ್ಯಾಂಪಸ್ ನಲ್ಲಿ ನಡೆಯುತ್ತಿದೆ. ಮೇ 26ರಿಂದ 29ರವರೆಗೆ ಮೂರೂ ಕ್ಯಾಂಪಸ್ ಗಳಿಗೆ ಪ್ರವೇಶಾತಿ ಸಂಬಂಧಿಸಿದಂತೆ ಆರು ಕಡೆ ಕೌಂಸಿಲಿಂಗ್ ನಡೆಯಲಿದೆ.
 
ಮೊದಲ ದಿನದ ಪ್ರವೇಶಾತಿ ಕೌಂಸಿಲಿಂಗ್ ನಲ್ಲಿ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಬೆಂಗಳೂರು ಕ್ಯಾಂಪಸ್ ನಲ್ಲಿರುವ ಬಿ ಟೆಕ್ ನ ವಿವಿಧ ಕೋರ್ಸ್ ಗಳಿಗೆ ಸೇರಿದ್ದಾರೆ. ತಿರುಪತಿಯ ಸಾಯಿ ಕುಮಾರ್ ಈ ವರ್ಷ ಸೇರಿರುವ ಪ್ರಥಮ ವಿದ್ಯಾರ್ಥಿಯಾಗಿದ್ದಾನೆ. ಈತ ಬಿ ಟೆಕ್ ಮೆಕಾನಿಕಲ್ ಆಯ್ಕೆ ಮಾಡಿರುವನು.
ದೇಶದ ವಿವಿದೆಡೆಯಿಂದ ಸುಮಾರು 50,000 ಹೆಚ್ಚಿನ ವಿದ್ಯಾರ್ಥಿಗಳು ಈ ಬಾರಿ ಗೀತಂ ವಿಶ್ವವಿದ್ಯಾಲಯ ಸೇರುವ ಸಲುವಾಗಿ ಗಾಟ್-2016 ಪರೀಕ್ಷೆ ಬರೆದಿದ್ದಾರೆ. ಅಂತೆಯೇ ಕೌಂಸಿಲಿಂಗ್ ಪ್ರಕ್ರಿಯೆ ಪ್ರಾರಂಭವಾಗಿದೆ.
 
ಗೀತಂ ವಿವಿ ಬೆಂಗಳೂರು ಕ್ಯಾಂಪಸ್ ನಲ್ಲಿ ಪ್ರಾರಂಭವಾದ ಕೌಂಸಿಲಿಂಗ್ ಸಂದರ್ಭದಲ್ಲಿ ಗೀತಂ ವಿವಿ ಬೆಂಗಳೂರು ಕ್ಯಾಂಪಸ್ ನ ಸ್ಕೂಲ್ ಆಫ್ ಟೆಕ್ನಲಜಿಯ ನಿರ್ದೇಶಕರಾದ ಪ್ರೊ ವಿಜಯ ಭಾಸ್ಕರ್ ರಾಜು, ಅಡ್ಮಿಶನ್ ಡೈರೆಕ್ಟರ್ ಪ್ರೊ ಕೆ ನರೇಂದ್ರ , ಬೆಂಗಳೂರು ಕ್ಯಾಂಪಸ್ ನ ಅಡ್ಮಿಶನ್ ಆಂಡ್ ಅಡಮಿನಿಸ್ಟ್ರೇಟಿವ್ ಡೈರೆಕ್ಟರ್ ವಂಶಿ ಡಾಟ್ಲಾ ಹಾಗೂ ಸಹಾಯಕ ಪ್ರಾಂಶುಪಾಲರಾದ ಡಾ. ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.
 

LEAVE A REPLY

Please enter your comment!
Please enter your name here