ಗಾಂಧಿಯನ್ ಎಸ್-ಗಾರ್ಡಿಯನ್ ನಾಟ್!

0
392

ಮಸೂರ ಅಂಕಣ: ಆರ್ ಎಂ ಶರ್ಮ
ಭಾರತದಲ್ಲಿ ಸಂಕೀಣ೯ ಸಮಸ್ಯೆಗಳು ತಲೆಯೆತ್ತಿದಾಗಲೆಲ್ಲಾ ದೇಶದ ಏಕತೆ-ಸಂಪತ್ತು-ಸಹಿಷ್ಣುತೆ ಇತ್ಯಾದಿ ಸಂಗತಿಗಳು ಬಹು ಎತ್ತರದಲ್ಲಿ-ಎತ್ತಿದ ಧ್ವನಿಯಲ್ಲಿ ಆಕಾಶ ಕಳಚಿ ಭೂಮಿಗೆ ಬಿದ್ದಿದೆ ಎಂತ ರಂಪ-ರದ್ಧಾಂತ-ರಗಳೆ-ಜಗಳ-ಬೈಗುಳ ಇವೇ ಕಿವಿಗೆ ಸುಮಧುರ ಸಂಗೀತ.
ಇಲ್ಲಿ ಎಷ್ಟು ನಿಷ್ತೆ-ಶಿಸ್ತು ಸಾಂಪ್ರತ ಎಂಬುದು ನಗಣ್ಯ-ಕಾರಣ-ರಾಜಕೀಯವೇ ಪರಮ ಉಚ್ಚಗುಣ.
ರಾಜಕೀಯ ಎಂದಮೇಲೆ-ಸೂರ್ಯಕಾಂತಿ ಹೂವಿನಂತೆ-ಸೂಯ೯ನನ್ನೇ ಹಿಂಬಾಲಿಸುತ್ತ ಚಲನ ಚರಿತ್ರ ಸುಸ್ಪಷ್ಟ.
ಇದಕ್ಕೆ ಅನುಕೂಲ ಸಿಂಧು ಎಂತಾಗಲಿ-ಸಮಯಸಾಧಕತನ ಎಂತಾಗಲಿ-ಬೆಣ್ಣೆಯಲ್ಲಿ ಕೂದಲನ್ನು ತೆಗದಂತೆ ಇತ್ಯಾದಿ ಉಪಮಾನ-ಉಪಮೇಯಗಳನ್ನು ನೀಡುತ್ತಾ ನಿರಾಳವಾಗಿರಬಹುದು.
ನೈತಿಕತೆ,ನಿತ್ಯದಲ್ಲಿ,ಸತ್ಯದಲ್ಲಿ-ಅಭಾವ ವಿದ್ದರೂ ಮಳೆಗಾಲದಲ್ಲಿ ಆಗೊಮ್ಮೆ-ಈಗೊಮ್ಮೆ ಗೋಚರಿಸುವ ಸೂಯ೯ನ ಬೆಳಕಿನಂತೆ-ಮಿಂಚಿ-ನಂತರ ಮುಚ್ಚಿ ಮೆಚ್ಚಿ ಮೆತ್ತಗಾಗಬಹುದು.
ಯಾರಿಗೆ ಹಿತ ಏತಕ್ಕೆ ಹಿತ-ಏಕೆ ಸಮ್ಮತ-ಇವೆಲ್ಲಾ ಲಾಭಕ್ಕೇ ಸ್ವಾಗತ.
ಈಗ ನೋಡಿ-ಬಾಲಕ-ಬಾಲಕಿಯರ ವಿವಾಹ-ಬಾಲ್ಯ ವಿವಾಹ ಎಂತ ಗುಲ್ಲು-ತಪ್ಪಿಗೆ ಗಲ್ಲು-ಅಲ್ಲಿಗೆ -ಗೆಲ್ಲು-ಸಲ್ಲು ಎಲ್ಲಾ ಅಚ್ಚುಕಟ್ಟು.
ಬಾಲ್ಯ-ಸರಕಾರದ ಕಾನೂನು-ಅಪ್ರಾಪ್ತವಯಸ್ಸು-ತಿಳಿಯದ ಮನಸ್ಸು-ತಿಳಿಯಾಗದ ಹುಮ್ಮಸ್ಸು-ಭಂಗ-ಕೊನೆಗೆ ತಪ್ಪಿದವನು-ತಪ್ಪಿಸಿದವನು-ತೆಪ್ಪಗಿನವನು ಎಲ್ಲಾ ಮಂಗರೇ!
ಆದರೆ ಮಂಗ-ಕೋತಿ-ಕೋಟಿಪ್ರಾಯ-ಮುಖ್ಯಪ್ರ್‍ಅಣ-ಹನುಮಂತ-ಆಂಜನೇಯ-ಭಜರಂಗಬಲಿ.
ತ್ರೇತಯುಗದ ವೈಷಿಷ್ಟ್ಯ-ದ್ವಾಪರದಾಟಿ-ಕಲಿಗೂ ಸಾಗಿ-ಕಲಿಯಾಗಿ-ಕವಿಯಾಗಿ-ಸವಿಯಾಗಿ-ಸಹಯೋಗಿಯಾಗಿರುವುದೇ-ಕಪಿಶ್ರೇಷ್ಟತೆ.
ಅಲ್ಲಿಗೆ ಕಪಿಪುರಾನ ಬಿಡೋಣ.
ನಾವು ಜುಲೈ೧ ೨೦೧೬ ರ ದಿನಪತ್ರಿಕೆಯಲ್ಲ್ ಒದಿದೆವು ಭರತಾದ್ಯಂತ -“ವೈದ್ಯರ ದಿನ-ಡಾಕ್ಟರ್ಸ್ ಡೇ”- ಆಚರಿಸಲ್ಪಡುತ್ತಿರುವುದನ್ನು ಮತ್ತದರ ಘನತೆಯನ್ನು.
ಇಲ್ಲಿಯೇ ಒಂದು ಬಹಳ ಯೋಗ್ಯವಾದ-ಸಮಯೋಚಿತವಾದ ಸುದ್ದಿ-ಮಾಹಿತಿಯನ್ನು ಗಮನಿಸಿದೆವು.
ಅದರ ಜಾಡೆ ನಮ್ಮನ್ನು ಚಿಂತನಕ್ಕೂ-ಮಂಥನಕ್ಕೂ-ಅಣಿಗೊಳಿಸಿ-ಈ ಪ್ರಸ್ತುತಿಗೆ ಹರಿಕಾರವಾಯಿತು.
ಆ ಸುದ್ದಿಯ ತುಣುಕು-ಎಲ್ಲ ಹರುಕು-ಮುರುಕುಗಳನ್ನೂ ನುಂಗಿ-ನಿಬ್ಬೆರಗಾಗಿ ಮದೋರಿತು.
ಇಲ್ಲಿ ಭವ್ಯದಶ೯ನವಿದೆ-ದಿವ್ಯಸಂದೇಶವಿದೆ-ಸಂಭಾವ್ಯ-ದುವ್೯ವ್ಯಹಾರಗಳಿಗೂ ಪರಮೋತ್ತಮವಾದ ಸಮಾಧಾನವಿದೆ.
ಅಲ್ಲಗಳೆಯುವ ಗೆಳಯರಿಗೆ-ಕಣ್ಣು ತೆರೆಯಿಸುವ-ವಿಶ್ವದಶ೯ನವೂ ಸಾಂಪ್ರತವೇ.
ಮಹಾನ್ ಚೇತನ-ದಿವ್ಯ ಸ್ತ್ರೀ-ಶ್ರೀಮತಿ ಕಸ್ತುರ್ಬಾ ಗಾಂಧಿ(೧೮೬೯-೧೯೪೪ ಜೊಹ್ಹಾನ್ನೆಸ್ ಬಗ್೯ನಲ್ಲಿ ೧೯೦೪ ರಲ್ಲಿ ತಲೆದೋರಿದ ಭಯಾಮ್ಕರ ಸಾಂಕ್ರಾಮಿಕ ಬುಬೋನಿಕ್ ಪ್ಲೇಗ್ ನ ನಿವಾರಣೆಗೆ ತನ್ನ ಮನೆಯ ಉಗ್ರಾನವನ್ನೆ ಕಾಲ್ಲಿ ಇದ್ದಕಾರನ ಆಸ್ಪತ್ರೆಯಾಗಿ ಪರಿವತಿ೯ಸಿ ಸೇವೆ-ಶುಶ್ರೂಶೆ ಮಾದಿದರಂತೆ. ತದನಂತರ ಪ್ರಪಂಚದ ಮೊದಲ ಯುದ್ಧದ ಸಮಯದಲ್ಲಿ ಒಬ್ಬ ನುರಿತ ನಸ್೯ ಆಗಿ ಬಿಹಾರದ ಚಂಪಾರಣ್ ಜಿಲ್ಲೆಯಲ್ಲಿಯೇ ಸಂಪೂಣ೯ವಾಗಿ ಸ್ವಚ್ಛತಾ ಅಭಿಯಾನವನ್ನೇ ಹಮ್ಮಿಕೊಂಡು ಅದನ್ನು ಯಶಸ್ವಿಯಾಗಿ ಸಾಧಿಸಿದರಂತೆ. ಇದಕ್ಕೆಲ್ಲ ಮೂಲ ಕಾರಣ ಅವರ ಪರಮೋಚ್ಚ ಆದಶ೯-ನೊಂದವರಿಗೆ-ವಿಶೇಷವಾಗಿ ರೋಗಿಗಳಿಗೆ ಸೇವೆಯೇ ಅವರ ಜಿವನಾದಶ೯ ವಾಗಿದ್ದರಿಂದಲೇ ವೈದ್ಯ ಕ್ಷೇತ್ರಕ್ಕೂ ಅವರಿಗೂ ಬಿಡದ ನಂಟು ಇಲ್ಲಿ ಸ್ಮರಣಾಹ೯ ಅಷ್ಟೇ.)-ಮೊದಲು ಮೋಹನದಾಸ ಕರಮಚಂದ-ನಂತರ ರಾಷ್ಟ್ರಪಿತ-ಮಹಾತ್ಮಗಾಂಧಿ ಇವರ ಧಮಪತ್ನಿ ಮದುವೆಯದದ್ದು ತನ್ನ ೧೩ನೆ ವಯಸ್ಸಿನಲ್ಲಿ!
ಇವರ ಪ್ರಭಾವ ಗಾಂಧಿಯವರನ್ನು ಸ್ವಾತಂತ್ರ್ಯದ ಹೋರಾಟಕ್ಕೆ ಪಕ್ವವಾಗಿ ಅಣಿಗೊಳಿಸಿ-ಉದ್ದೇಶ ಕೈಗೂಡಲು ಪರಮೋಚ್ಚ ಭೂಮಿಕೆ-ಕಾಣಿಕೆ ಆಯಿತು ಎಂಬ ಸತ್ಯಾತ್ ಸತ್ಯವೇ-
ಇಲ್ಲಿ ನಮ್ಮ ಈ ಪ್ರಸ್ತುತಿಯ ಆತ್ಮ-ಆಸ್ತಿ-ಅಸ್ತಿ-ಅದೇಸ್ವಸ್ತಿ-ಅದೇ ಪ್ರಶಸ್ತಿ.
ಗಾಂಧಿ-ತತ್ವ-ಆದಶ೯-ನಿದಶ೯ನ-ಪ್ರದಶ೯ನ-ಅದೇಸಂವಧ೯ನ-ಅದಕ್ಕೆ ವಿಪರೀತಕ್ಕೆಲ್ಲ ಪರಮ ಸಂಮಧ೯ನ
“ಧಮ೯ ಸಂವರ್ಧಿನಿ-ದಾನವ ಸಂಮಧಿ೯ನಿ”-ಎಂಬ ಒಂದು ಸಂಗೀತದ ಕೃತಿಯ ನೆನಪು ನಮಗೆ ಬರುತ್ತದೆ.
ಅಲ್ಲಿಗೆ ಯಾವುದು ಧಮ೯-ಏತಕ್ಕೆ ಧಮ೯-ವಿರೋಧಗಳ-ವಿವಾದಕ್ಕೆ ಏಕೆಬೇಡವಿರಾಮ-ಎಲ್ಲಕ್ಕೂ-ಉತ್ತರವಾದ-“ಈ ರಾಮಬಾಣ!”-
ಭಾಷಣ-ಭೂಷಣ-ಎಲ್ಲವನ್ನೂ ಈಗ ಮಾಡದೇ ಭಣ-ಭಣ?
ಹಾಗಾದರೆ ಯಾವುದು ಆಭರಣ-ಯಾವುದು ರಣ-ಎಲ್ಲಿದೆ ಋಣ-ಏಕೆ ಕರುಣ-ಯಾರಿಗೆ ಮರಣ-ಎಲ್ಲ ಸ್ಪಟಿಕದಂತೆ-ನಿಮ೯ಳ-ಝಳ ಝಳ.
ಮೊದಲೇ ಸತ್ಯ-ಈಗ ಚಿನ್ನಕ್ಕೆ ಪುಟವಿಟ್ತಂತೆ-ಫಳ ಫಳ-ಅಲ್ಲಿಗೆ ಪ್ರಾಪ್ತಿ ಅಯೋಗ್ಯಕ್ಕೆ-ಅನ್ಯಾಯಕ್ಕೆ-ಕಪಾಳಮೋಕ್ಷ.
ಗ್ರಹಣ ಮೋಖ್ಶ-ಸವ೯ರಕ್ಷ-ಇಲ್ಲಿದೆ ಪರಮ ಲಕ್ಶ್ಯ.
ಇದಲ್ಲವೇ ಲಕ್ಷ ಲಕ್ಷಣ?
ಮಹಾತ್ಮ ಗಾಂಧಿ ಕಸ್ತುರ್ಬ ನಿಧನಕ್ಕೆ ಸೋತು-ಸಪ್ಪಗೆ ಆಗಿ ಒಂದುಮೂಲೆಗೆ ಸರಿದು ಅಲ್ಲೇ ಮುದುಡಿ ಕಾಲಕಳೆಯುತ್ತಾ ಹೇಳಿದರು-
“ಕೇವಲ ಕಸ್ತುರ್ಬಾ ಳಿಂದ ಮಾತ್ರ ತಾನುಮಹಾತ್ಮನಾದೆ!”-ಎಂತ.
ಗಾಂಧಿ ಸತ್ಯ-ಸತ್ವ-ತತ್ವ-ಇಲ್ಲಿಲ್ಲವೇ?
ಈ ಗಾಂಧಿವಾದವನ್ನು ಏಕೆ ಪರಮ ಗಾಂಧಿವಾದಿಗಳು-ಅನುಯಾಯಿಗಳು-ಹೀಯಾಳಿಸಬೇಕು-ಅಳಿಸಿಹಾಕಬೇಕು-ವಿರೋಧಿಗಳನ್ನು ಅಳಿಸಬೇಕು-ಅವಮಾನಿಸಬೇಕು?
ಎಲ್ಲಿದೆ ಉತ್ತರ-ಕಾರಣ-
ಮಹಾತ್ಮರನ್ನು ಮಾಡಿದವರೂ ಮತ್ತು ಮಹಾತ್ಮ ಇಬ್ಬರೂ ಈಗ ಕಣ್ಮರೆ!
ಆದ್ದರಿಂದಲೆ ಈ ಎಲ್ಲ ಕಣ್ನಮುಚ್ಚಾಲೆ!
ಇದೊಂದು ಆಟವೇ ವಿನಹ ಪಾಠವಲ್ಲ.
ಪಾಠವಲ್ಲದಮೇಲೆ ಏನಿದೆ ಕಲಿಯಲು-ಕಲಿಸಲು?
ಈಗೆಲ್ಲ ಕಲಿಕೆ ಅಷ್ಟಕ್ಕಷ್ಟೆ-ಗಳಿಕೆ ಮೇಲು-ಅದೇ “ಗೋಲು”-ತಪ್ಪಿದರೆ “ಗೋಳು”
ಇಡೆ ಈಗ ಬಾಳು-ಬಾಳಿನ ತಿರುಳು.
ಅದಕ್ಕೆ ಕೊರಳು-ಒಕ್ಕೊರಲಿನ ಎತ್ತರಿಸಿದ ಧನಿ-ಅದೇ ಧಣಿ-ಗಣಿ-ಗುಣಿ.
ಬಾಲ್ಯ-ಬಾಲಮುಸುರಿಕೊಂಡಿತು-ಬಲ ಮೆಚ್ಚಿಕೊಂಡಿತು.
ಮಹಾತ್ಮರು ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಂತೆ-
“ನಿಬ೯ಲ್ ಕಿ ಬಲ್ ರಾಮ್!”
ಆ”ರಾಮ್”-ಉದ್ಗಾರವೇ ಅವರ ಪರಿಚಯ-“ಪೆಹಚಾನ್!”
ಆಳುವ ದೊರೆಗಳು-ದೊರೆಸಾನಿಗಳು ನೂರಾರು ಅಪ್ರಾಪ್ತಗಳನ್ನು-ಪ್ರಾಪ್ತಗೊಳಿಸಿ ಊಜಿ೯ತಮಾಡಿದವಿಲ್ಲವೇ?
ಶಾಸ್ತ್ರದಲ್ಲಿ ಕೂಡಾ-ಪಂಚಾಂಗರೀತ್ಯಾ ಪ್ರಾಪ್ತವಲ್ಲವಕ್ಕೆ ಪರಿಹರ ಉಂಟು-ಅವು ಚಾಲ್ತಿಯಲ್ಲೂ ಉಂಟು.
ವಿದ್ಯಾಭ್ಯಾಸಗಳಲ್ಲಿ,ವೃತ್ತಿಗಳಲ್ಲಿ,ಅಧಿಕಾರದ ಪದವಿಗಳಲ್ಲಿ ಅಪ್ರಾಪ್ತಗಳಿಗೆ ಪ್ರಾಯಸ್ಚಿತ್ತ-ಪರಿಹಾರ ಸದಾ ಸಿದ್ಧ-ಅವು ಸಾಧು-ಸಿಂಧು-ಸಾಧ್ಯ.
ಅಲ್ಲಿಗೆ-ಬಾಲ್ಯ-“ಕಿಡ್ಡಿಯಿಂಗ್”-ಕಿಡಿ ನಂದಿ-ನೆಮ್ಮದಿ-ಸಮ್ಮತಿ-ಸಹಮತಿ ಇವೇ ನೀತಿ-ಮತಿ-ಪ್ರೀತಿ.
ಹೀಗಿದ್ದರೂ ನಾವು ನಮ್ಮ ಕಾರಣಿಕವಾದ-ವಾದ-ಸಂವಾದ-ಚಿಂತನ-ಮಂಥನವನ್ನು ಓದುಗ ಚೇತನಗಳ-
ಅಡ್ದ ಪರೀಕ್ಷೆ-ಆಢ್ಯಪರೀಕ್ಷೆಗಳಿಗೆ ಬಿಟ್ಟು ಅವರ ತೀಮಾ೯ನವನ್ನು/ಗಳನ್ನು-ಕಾತುರದಿಂದ-ಕುತೂಹಲದಿಂದ ಎದುರು ನೋಡುತ್ತೇವೆ.
ಕಾರಣ ನಮ್ಮ ಏಕೈಕ ನಂಬಿಕೆ-
ಆರ್.ಎಂ.ಶಮ೯
[email protected]

LEAVE A REPLY

Please enter your comment!
Please enter your name here