ಗಸ್ತಿಗಾಗಿ ಹೆಚ್ಚುವರಿ ಹೊಯ್ಸಳ ವಾಹನ

0
280

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಕಾಮುಕರ ಅಟ್ಟಹಾಸ ಬಳಿಕ ಪೊಲೀಸರಿಗೆ ಜ್ಞಾನೋದಯವಾಗಿದ್ದು, ನಗರದಲ್ಲಿ ಇನ್ಮುಂದೆ ಹೈಟೆಕ್ ಸೆಕ್ಯೂರಿಟಿ ಇರಲಿದೆ. ಆಗಲಿದೆ. ಗಸ್ತಿಗಾಗಿ ಹೆಚ್ಚುವರಿ ಹೊಯ್ಸಳ ವಾಹನಗಳ ನಿಯೋಜನೆ ಮಾಡಲಾಗಿದೆ.
 
 
ಇದರಿಂದ ಬೆಂಗಳೂರಿನಲ್ಲಿ ಮಾಫ್ತಿಗಾಗಿ ಹೆಚ್ಚುವರಿ ಪೊಲೀಸರು ಗಸ್ತು ತಿರುಗಲಿದ್ದಾರೆ. ಹೀಗಾಗಿ ರಾತ್ರಿ ಅನಾವಶ್ಯಕವಾಗಿ ಸುತ್ತುವವವರಿಗೆ ಬ್ರೇಕ್ ಬೀಳಲಿದೆ. ರಾತ್ರಿ ಪಾಳಿಯಲ್ಲಿ ಹಿರಿಯ ಅಧಿಕಾರಿಗಳೇ ಹೊಯ್ಸಳ ವಾಹನಗಳ ಮೇಲ್ವಿಚಾರಣೆ ವಹಿಸಲಿದ್ದಾರೆ. ನಗರದಲ್ಲಿ ಹೆಚ್ಚುವರಿ 550 ಸಿಸಿಟಿವಿಗಳ ಅವಳವಡಿಕೆಗೆ ನಿರ್ಧರಿಸಲಾಗಿದೆ.
 
 
ಗೃಹಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಭೆಯಲ್ಲಿ ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಸುಭಾಷ್ ಚಂದ್ರ, ಗುಪ್ತಚರ ಐಜಿ ದಯಾನಂದ, ಡಿಜಿಪಿ ಓಂ ಪ್ರಕಾಶ್, ಬೆಂಗಳೂರು ಕಮೀಷನರ್ ಪ್ರವೀದ್ ಸೂದ್ ಸೇರಿ ಪ್ರಮುಖ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here