ಗವಿಗಂಗಾಧರೇಶ್ವರ ದೇಗುಲದಲ್ಲಿ ಸಂಕ್ರಾಂತಿ ಸಂಭ್ರಮ

0
738

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನ ಇತಿಹಾಸ ಪ್ರಸಿದ್ಧ ಗವಿಗಂಗಾಧರೇಶ್ವರ ದೇಗುಲದಲ್ಲಿ ಸಂಕ್ರಾಂತಿ ಸಡಗರ ಮುಗಿಲುಮುಟ್ಟಿದೆ. ಶಿವಲಿಂಗನ ಮೇಲೆ ಸೂರ್ಯ ರಶ್ಮಿ ಹಾದುಹೋಗಲಿದೆ. ಸಂಜೆ 5ರಿಂದ 5.17ರೊಳಗೆ ಸೂರ್ಯ ರಶ್ಮಿ ಹಾದು ಹೋಗಲಿದೆ. ಈ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತರು ದೇಗುಲಕ್ಕೆ ಆಗಮಿಸಿದ್ದಾರೆ.
 
 
ವಿದೇಶಿಯರಿಂದ ಪೊಂಗಲ್ ಆಚರಣೆ
ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿಯನ್ನು ಪೊಂಗಲ್ ಹಬ್ಬವಾಗಿ ಆಚರಿಸುತ್ತಾರೆ. ತಮಿಳುನಾಡಿನಲ್ಲಿ ಪೊಂಗಲ್ ಹಬ್ಬ ಸಂಭ್ರಮವೇರಿದ್ದು, ಪೊಂಗಲ್ ಆಚರಣೆಯಲ್ಲಿ 20ಕ್ಕೂ ಹೆಚ್ಚು ವಿದೇಶ ಪ್ರವಾಸಿಗರಿ ಭಾಗವಹಿಸಿದ್ದಾರೆ. ತಂಜಾವೂರಿನಲ್ಲಿ ವಿದೇಶಿ ಪ್ರಜೆಗಳ ಪೊಂಗಲ್ ಆಚರಿಸಿಕೊಂಡಿದ್ದಾರೆ.
 
 
 
ಬಿಎಸ್ ಎಫ್ ಯೋಧರಿಗೆ ಸಂಕ್ರಾಂತಿ ಆಚರಣೆ
ದೇಶದೆಲ್ಲೆಡೆ ಮಕರ ಸಂಕ್ರಾತಿ ಹಬ್ಬದ ಸಡಗರವೇರಿದೆ. ಜಮ್ಮುವಿನಲ್ಲಿ ಬಿಎಸ್ ಎಫ್ ಯೋಧರು ಕುಣಿದು ಸಂಭ್ರಮಿಸಿದ್ದಾರೆ. ಲೂಧಿಯಾನಾ, ಚಂಢೀಗಡದಲ್ಲೂ ಲೋಹ್ರಿ ಹಬ್ಬದ ಸಡಗರ ಕಂಡುಬಂದಿದೆ.

LEAVE A REPLY

Please enter your comment!
Please enter your name here