ಪ್ರಮುಖ ಸುದ್ದಿರಾಜ್ಯವಾರ್ತೆ

ಗವರ್ನರ್ ಅಸಮಾಧಾನ

 
ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯ ಸರ್ಕಾರದ ವಿರುದ್ಧ ಮತ್ತೆ ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಕ್ಫ್ ಮಂಡಳಿ ಆಸ್ತಿ ವರದಿ ಕುರಿತು ಮುಖ್ಯಮಂತ್ರಿಗಳ ಉತ್ತರಕ್ಕೆ ರಾಜ್ಯಪಾಲರು ಅತೃಪ್ತಿಗೊಂಡಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉತ್ತರಕ್ಕೆ ಗವರ್ನರ್ ವಜೂಭಾಯ್ ವಾಲಾ ಬೇಸರಗೊಂಡಿದ್ದಾರೆ. ಗವರ್ನರ್ ರಾಜ್ಯ ಸರ್ಕಾರಕ್ಕೆ 8 ಪುಟಗಳ ಪತ್ರದ ಸಾರಾಂಶ ರವಾನಿಸಿದ್ದಾರೆ.
 
ಅಲ್ಲದೆ ಸರ್ಕಾರದ ವಿರುದ್ಧ ಪರಿಷತ್ ಸಭಾಪತಿ ದೂರು ನೀಡಿದ್ದಾರೆ. ರಾಜ್ಯ ಸರ್ಕಾರ ನನ್ನ ಆದೇಶ ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ. ಪರಿಷತ್ ನಂತಹ ಸಂವಿಧಾನಿಕ ಸಂಸ್ಥೆ ನಡೆಸುವುದು ಕಷ್ಟವಾಗಿದೆ ಸಭಾಪತಿ ಡಿ ಹೆಚ್ ಶಂಕರಮೂರ್ತಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ನೀವು ನೀಡಿದ ಉತ್ತರ ಸಮಾಧಾನ ತಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉತ್ತರಕ್ಕೆ ರಾಜ್ಯಪಾಲ ಅಸಮಾಧಾನಗೊಂಡಿದ್ದಾರೆ. ಅನ್ವರ್ ಮಾಣಿಪ್ಪಾಡಿ ವರದಿ ಕುರಿತು ವಿಶ್ಲೇಷಣೆ ಮಾಡಲ್ಲ. ಸದನದ ನಡವಳಿಕೆಯಲ್ಲೂ ಸಹ ನಾನು ಮಧ್ಯ ಪ್ರವೇಶಿಸಲ್ಲ. ಆದರೆ ಹೈಕೋರ್ಟ್ ವರದಿ ಮಂಡಿಸುವುದಾಗಿ ಹೇಳಿದ್ದಾರೆ.
 
 
ವರದಿ ಮಂಡನೆ ಬಗ್ಗೆ ನಿಮ್ಮ ಉತ್ತರದಲ್ಲಿ ವಿವರ ನೀಡಿದ್ದೀರಿ. ಪರಿಷತ್ ನಲ್ಲಿ ವರದಿ ಮಂಡಸಲು ಸಭಾಪತಿ ಆದೇಶಿಸಿದ್ದಾರೆ. ಮೊದಲು ನಿಮ್ಮ ಸರ್ಕಾರ ನುಡಿದಂತೆ ನಡೀಬೇಕು. ಕಾನೂನಿನ ಚೌಕಟ್ಟಿನೊಳಗೆ ನಿಮ್ಮ ಕರ್ತವ್ಯ ಪಾಲಿಸಬೇಕು. ಇಲ್ಲದಿದ್ದರೆ ಸಾಂವಿಧಾನಿಕ ರೀತಿ ಬಿಕ್ಕಟ್ಟು ಎದುರಾಗಬಹುದು ಎಂದು ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ಎಚ್ಚರಿಕೆ ನೀಡಿದ್ದಾರೆ.
ಸಿ ಎಂ ವಿಶ್ರಾಂತಿ ಪ್ರವಾಸ ದಿಢೀರ್ ರದ್ದು:
ಮೂರು ದಿನಗಳ ಕಾಲ ಸಿಂ ವಿಶ್ರಾಂತಿಗೆ ತೆರಳಲು ನಿರ್ಧರಿಸಿದ್ದರು. ರಾಜ್ಯಪಾಲರ ಪತ್ರ ಹಿನ್ನೆಲೆಯಲ್ಲಿ ಸಿಎಂ ವಿಶ್ರಾಂತಿ ಪ್ರವಾಸ ರದ್ದಾಗಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here