ಗರಿಗರಿ ರವೆ ದೋಸೆ

0
519

ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು:
ಚಿರೋಟಿ ರವೆ 2 ಕಪ್‌‌, ಅಕ್ಕಿಹಿಟ್ಟು1 ಕಪ್‌, ಮೈದಾ 1 ಕಪ್‌‌‌, ಈರುಳ್ಳಿ 3, ಮಜ್ಜಿಗೆ 1 ಕಪ್, ಹಸಿಮೆಣಸಿನಕಾಯಿ 5, ಕರಿಬೇವಿನಸೊಪ್ಪು 2 ಎಸಳು, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು1 ಕಟ್ಟು, ಶುಂಠಿ 1 ಚಿಕ್ಕ ತುಂಡು, ಎಣ್ಣೆ 1 ಕಪ್.
 
 
 
ತಯಾರಿಸುವ ವಿಧಾನ
ಮೊದಲು ಒಂದು ಬಟ್ಟಲಿಗೆ ಅಕ್ಕಿಹಿಟ್ಟು, ಚಿರೋಟಿ ರವೆ, ಮೈದಾ, ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಮೊಸರಿಗೆ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ತುರಿದ ಶುಂಠಿ ,ಸ್ವಲ್ಪ ಈರುಳ್ಳಿ ಹಾಕಿ ಮಿಕ್ಸ್‌ ಮಾಡಿ. ನಂತರ ಮೊಸರಿನ ಮಿಶ್ರಣವನ್ನು ಮೊದಲೇ ಕಲಸಿಟ್ಟುಕೊಂಡ ರವೆ ಹಿಟ್ಟಿನ ಮಿಶ್ರಣದೊಂದಿಗೆ ಬೆರೆಸಿ. ಮತ್ತಷ್ಟು ನೀರು ಬೇಕಿದ್ದರೆ ಹಾಕಿ ದೋಸೆ ಹಿಟ್ಟಿನ ಹದ ಬರುವಂತೆ ಮಿಶ್ರಣ ತಯಾರಿಸಿ 2 ಗಂಟೆಗಳ ಕಾಲ ಬಿಡಿ. ರವೆ ದೋಸೆಗೆ ಅಕ್ಕಿದೋಸೆಗಾಗಿ ತಯಾರಿಸುವ ಮಿಶ್ರಣಕ್ಕಿಂತ ಸ್ವಲ್ಪ ನೀರು ಹೆಚ್ಚಾಗಿರಬೇಕು. ಸ್ಟೌ ಮೇಲೆ ತವಾ ಇಟ್ಟು ಅದು ಕಾದ ನಂತರ ಎಣ್ಣೆ ಸವರಿ. ದೋಸೆ ಮಿಶ್ರಣವನ್ನು ಸೌಟಿನಿಂದ ತವಾ ಸುತ್ತ ಹರಡಿ ಅದರ ಮೇಲೆ ಒಂದು ಸ್ಪೂನ್‌‌ ಎಣ್ಣೆ ಹಾಕಿ. ರವೆದೋಸೆ ಮಾಡುವಾಗ ಅಕ್ಕಿದೋಸೆಯಂತೆ ಸೌಟನ್ನು ತವಾ ಮೇಲೆ ಆಡಿಸುವ ಅಗತ್ಯವಿಲ್ಲ. ಒಂದು ಭಾಗ ಗೋಲ್ಡನ್ ಬ್ರೌನ್‌ ಬಣ್ಣಗೆ ತಿರುಗಿದಾಗ ಅದನ್ನು ತಿರುವಿ ಮತ್ತೊಂದು ಭಾಗವನ್ನು ಬೇಯಿಸಿ.

LEAVE A REPLY

Please enter your comment!
Please enter your name here