ಗತಕಾಲ ವೈಭವವನ್ನು ನೆನಪಿಸುವ ಹಬ್ಬ ಅಷ್ಟಮಿ – ಕೆ.ಎನ್. ಕೃಷ್ಣ ಭಟ್

0
213

ಬಾಂಜತ್ತಡ್ಕ ಭಗತ್ ಸಿಂಗ್ ಕ್ಲಬ್ಬಿನ ವಾರ್ಷಿಕೋತ್ಸವ
ವರದಿ :ಶ್ಯಾಮಪ್ರಸಾದ್ ಸರಳಿ
ಭಗವಂತನ ಲೀಲೆಗಳು ಅಪಾರ, ಆತನ ಆಟೋಟಗಳನ್ನು ನೆನಪಿಸುವ ಹಬ್ಬ ಅಷ್ಟಮಿ. ಅಷ್ಟಮಿ ಆಚರಣೆ ಇಂದಿನ ಮಕ್ಕಳಿಗೊಂದು ಪಾಠವಾಗಲಿದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಪುರಾಣದ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಲಭಿಸುತ್ತದೆ ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ನುಡಿದರು.
ಅವರು ಆದಿತ್ಯವಾರ ಬೆಳಗ್ಗೆ ಉದಯಗಿರಿ ಬಾಂಜತ್ತಡ್ಕ ಭಗತ್ ಸಿಂಗ್ ಆರ್ಟ್ಸ್  ಮತ್ತು ಸ್ಪೋರ್ಟ್ಸ್  ಕ್ಲಬ್ಬಿನ 16ನೇ ವಾರ್ಷಿಕೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉದಯಗಿರಿ ಶಾಲಾ ಮುಖ್ಯೋಪಾಧ್ಯಾಯಿನಿ ಅಂಬಿಕಾ ಸರಸ್ವತಿ ಶುಭಾಶಂಸನೆಗೈದು ಮಾತನಾಡುತ್ತಾ ಸತ್ಯಧರ್ಮದಿ ನಡೆದವನಿಗೆ ಜಯ ಸಿಗುವುದು, ಅನ್ಯಾಯವನ್ನು ಮಾಡಿದವನಿಗೆ ಏಳಿಗೆಯಿಲ್ಲ, ಒಳ್ಳೆಯ ಕೆಲಸಗಳನ್ನು ಮಾಡಿದರೆ ಪರಮಾತ್ಮನ ಅನುಗ್ರಹ ಲಭಿಸುವುದು ಎಂದರು.
ಬದಿಯಡ್ಕದ ಸನ್ ಲೈಟ್ ಮತ್ತು ಸೌಂಡ್ನ ರಜನಿ ಪ್ರಾಯೋಜಕತ್ವದಲ್ಲಿ ಕ್ಲಬ್ಬಿನ ಸದಸ್ಯರಿಗೆ ಕೊಡಮಾಡಿದ ಟೀಶರ್ಟ್ ಗಳನ್ನು ಪುರುಷೋತ್ತಮ ಭಟ್ ಮಿಂಚಿನಡ್ಕ ಕ್ಲಬ್ಬಿನ ಸದಸ್ಯರಿಗೆ ನೀಡುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರವಿ ಕೈಲಂಜಕೆ, ಕ್ಲಬ್ಬಿನ ಅಧ್ಯಕ್ಷ ಸೀತಾರಾಮ ಬಾಂಜತ್ತಡ್ಕ, ಕಾರ್ಯದರ್ಶಿ ಉದಯ ಬಾಂಜತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಏ ಗಳನ್ನು ಆಯೋಜಿಸಲಾಗಿತ್ತು. ಮೊಸರು ಕುಡಿಕೆ, ಮಡಕೆ ಒಡೆಯುವುದು, ಲಿಂಬೆ ಚಮಚ ಓಟ, ಸೂಜಿಗೆ ನೂಲು ಹಾಕುವುದು ಮುಂತಾದ ಅನೇಕ ಸ್ಪರ್ಧೆ ಗಳಲ್ಲಿ ಊರವರು ಭಾಗವಹಿಸಿ ಆನಂದವನ್ನನುಭವಿಸಿದರು.
ಚಿತ್ರ : ಅಶ್ವಿನಿ ಸ್ಟುಡಿಯೋ ಬದಿಯಡ್ಕ

LEAVE A REPLY

Please enter your comment!
Please enter your name here