ಗಣಿದಣಿ ಪುತ್ರಿ ಮದುವೆಗೆ ವಿಡಿಯೋ ಆಮಂತ್ರಣ

0
402

ರಾಷ್ಟ್ರೀಯ ಪ್ರತಿನಿಧಿ ವರದಿ
ಅಕ್ರಮ ಗಣಿಗಾರಿಕೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಲುಕಿ ತವರೂರಿಗೂ ಹೋಗಲು ಹೆಣಗಾಡುತ್ತಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಣಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ಅದ್ಧೂರಿಯಾಗಿ ರೂಪಿಸಲಾಗಿದೆ.
 
 
ಹೈದರಾಬಾದ್ ಮೂಲದ ಉದ್ಯಮಿ ರಾಜೀವರೆಡ್ಡಿ ಜೊತೆ ನವೆಂಬರ್ 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿ ಮದುವೆ ನಡೆಯಲಿದೆ. ಈ ಮದುವೆಗೆ ಸಿದ್ಧವಾಗಿರುವ ಆಮಂತ್ರಣ ವಿಡಿಯೋದಲ್ಲಿ ಸಿನಿಮಾ ಸ್ಟೈಲ್‍ನಲ್ಲಿ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದಾರೆ.
 
ಆಮಂತ್ರಣ ಪತ್ರಿಕೆಯನ್ನು ಗಿಫ್ಟ್ ಬಾಕ್ಸ್ ನಂತೆ ರೂಪಿಸಿದ್ದು,ಬಾಕ್ಸ್ ಓಪನ್ ಮಾಡಿದಾಗ ಎಚ್ ಡಿ ಎಲ್‌ ಸಿಡಿ ಪರದೆ ಕಾಣಿಸುತ್ತದೆ. ಆ ಸಿಡಿ ಪರದೆಯಲ್ಲಿ ಮದುವೆ ಆಮಂತ್ರಣ ಇರುವ ವಿಡಿಯೋ ಪ್ಲೇ ಆಗುತ್ತದೆ. ಒಂದು ಲಗ್ನಪತ್ರಿಕೆಗೆ ಬರೋಬ್ಬರಿ ಎರಡೂವರೆ ಲಕ್ಷ ರುಪಾಯಿ ಖರ್ಚು ಮಾಡಿದ್ದಾರೆ. ಈ ಆಮಂತ್ರಣ ಪತ್ರಿಕೆಯನ್ನು ನಟ, ನಿರ್ದೇಶಕ ಸಾಯಿ ಕುಮಾರ್‌ ನೇತೃತ್ವದಲ್ಲಿ ಸಿದ್ಧಪಡಿಸಲಾಗಿದೆಯಂತೆ. ತೆಲುಗು ಚಿತ್ರರಂಗದ ತಂತ್ರಜ್ಞರು ರೂಪಿಸಿದ್ದಾರೆ ಎನ್ನಲಾಗಿದೆ.
 
ಬಾಕ್ಸ್ ನಂತಿರುವ ಆಹ್ವಾನ ಪತ್ರಿಕೆ ವಿವಿಐಪಿಗಳಿಗೆ ಮಾತ್ರ. ಮದುವೆಗೆ ದೇಶದ ಪ್ರಮುಖ ರಾಜಕಾರಣಿಗಳು ಸೇರಿದಂತೆ ಬಾಲಿವುಡ್, ಹಾಲಿವುಡ್, ಸ್ಯಾಂಡಲವುಡ್‍ನ ಗಣ್ಯಾತಿಗಣ್ಯರಿಗೆ ಆಹ್ವಾನ ನೀಡಲಾಗಿದೆ. ರೆಡ್ಡಿ ಕುಟುಂಬ ವಿಶಿಷ್ಟ ಆಹ್ವಾನ ಪತ್ರಿಕೆ ಕಮ್ ವಿಡಿಯೋ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

LEAVE A REPLY

Please enter your comment!
Please enter your name here