ಗಣರಾಜ್ಯೋತ್ಸವ ಪರೇಡ್​ ನಲ್ಲಿ 'ಜೋಗಯ್ಯ'

0
540

ರಾಷ್ಟ್ರೀಯ ಪ್ರತಿನಿಧಿ ವರದಿ
ನಾಳೆ(ಜ.26ರಂದು) ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್​’ನಲ್ಲಿ ಆಕರ್ಷಕ ವೇಷಭೂಷಣ ಧರಿಸುವ ಕಿನ್ನರ ಜೋಗಿಗಳು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಇದರಿಂದ ಜೋಗಿಗಳ ಸಮುದಾಯದಲ್ಲಿ ಸಂಭ್ರಮ ಹೆಚ್ಚಾಗಿದ್ದು, ನಮ್ಮ ಜನಪದ ಶೈಲಿ ದೇಶದ ಮುಂದೆ ಅನಾವರಣಗೊಳ್ಳಲಿದೆ.
 
 
ಭಾಗವಹಿಸಲಿರುವ ಈ ಕಿನ್ನರ ಜೋಗಿಗಳು ಕನ್ನಡಿಗರ ಕಲೆಯನ್ನು ಪ್ರದರ್ಶಿಸಲಿದ್ದಾರೆ. ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಎನ್ ದೇವರಹಳ್ಳಿಯಲ್ಲಿ ವಾಸವಾಗಿರುವ ಈ ಕಿನ್ನರ ಜೋಗಿಗಳ ಸಮುದಾಯದಲ್ಲಿ ಈಗ ಸಂಭ್ರಮ ಮನೆ ಮಾಡಿದೆ.
 
 
 
ಆಕರ್ಷಕ ವೇಷ ಭೂಷಣ ಧರಿಸಿಕೊಂಡು, ತಂಬೂರಿ ಹಿಡಿದುಕೊಂಡು ಅಲೆಮಾರಿಗಳಂತೆ ಬದುಕುವ ಇವರು ಮನೆ ಮನೆಗೂ ಬಂದು ಮಹಾಭಾರತದ ಕಥೆಗಳನ್ನು ಹೇಳುತ್ತಾ ಭೀಕ್ಷೆ ಬೇಡುತ್ತಿದ್ದ ಕಿನ್ನರ ಜೋಗಿಗಳು, ಕರ್ನಾಟಕದ ಜನಪದ ಶೈಲಿಯನ್ನು ನಾಳೆ ಇಡೀ ದೇಶಕ್ಕೇ ಪರಿಚಯಿಸಲಿದ್ದಾರೆ.

LEAVE A REPLY

Please enter your comment!
Please enter your name here