ಗಡಿಯೊಳಗೆ ನುಸುಳಲು ಯತ್ನಿಸಿದ್ದ ಉಗ್ರರನ್ನು ಹಿಮ್ಮೆಟ್ಟಿಸಿದ ಸೇನೆ

0
489

ರಾಷ್ಟ್ರೀಯ ಪ್ರತಿನಿಧಿ ವರದಿ
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಭಾರತದ ಒಳನುಸುಳಲು ಯತ್ನ ನಡೆಸುತ್ತಿದ್ದ ಉಗ್ರರ ಗುಂಪನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ.
ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಪಾಕಿಸ್ತಾನದ ಗಡಿ ಭಾಗದಿಂದ ಬಂದಿರುವ 4-6 ಉಗ್ರರ ಗುಂಪು ಸಾಂಬಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಭಾರತ ಒಳಗೆ ನುಸುಳಲು ಯತ್ನ ನಡೆಸಿದ್ದರು ಎಂದು ಬಿಎಸ್ಎಫ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
 
ಉಗ್ರರು ಒಳನುಸುಳುವುದನ್ನು ಕಂಡ ಭಾರತೀಯ ಸೇನೆ ಸ್ವಯಂ ಚಾಲಿತ ಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆಸಿತ್ತು. ಸೇನೆಯ ಪರಿಣಾಮಕಾರಿ ದಾಳಿಯಿಂದಾಗಿ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದರು.
 
 
 
ಭಾರೀ ಪ್ರಮಾಣ ಶಸ್ತ್ರಾಸ್ತ್ರಗಳನ್ನು ವಶ
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿದ್ದ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ್ದು, ಭಾರೀ ಪ್ರಮಾಣ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದೆ.
 
 
 
ಜಮ್ಮು ಮತ್ತು ಕಾಶ್ಮೀರದ ರಜೌರಿ, ಸುರಾನ್ಕೋಟ್, ಮಂಧಾನ್, ಮಂಡಿ ಮತ್ತು ಠಾಣಾ ಮಂಡಿ ಸೇರಿದಂತೆ ಇನ್ನಿತರೆ ಬೆಟ್ಟ ಮತ್ತು ಅರಣ್ಯ ಪ್ರದೇಶಗಳಲ್ಲಿದ್ದ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ್ದು, 4-5 ದಿನಗಳ ಕಾಲ ನಡೆಸಿದ ಈ ಕಾರ್ಯಾಚರಣೆಯಲ್ಲಿ ಪೂಂಚ್ ಜಿಲ್ಲೆಯ ಸುರಾನ್ಕೋಟ್ ನ ಛಾರ್ಮಾರ್ ಪ್ರದೇಶದಲ್ಲಿ ಉಗ್ರರು ಅಡಗಿಸಿಟ್ಟಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
 
 
 
2 ಎಕೆ 56 ರೈಫಲ್, 2 ಆರ್’ಪಿಜಿಗಳು, 2 9 ಎಂಎಂ ಪಿಸ್ತೂಲ್ ಗಳು, 302 ಸುತ್ತಿನ ಗುಂಡುಗಳು, 10 ನಿಯತಕಾಲಿಕೆಗಳು, ಚೀನಾ ಮೂಲದ ಗ್ರೆನೇಡ್ ಗಳು, 9 ಎಂಎಂ ಪಿಸ್ತೂಲಿನೊಂದಿಗೆ ಮೂರು ಸುತ್ತಿನ ಗುಂಡುಗಳು, 88 ಸುತ್ತಿನ ಮಷಿನ್ ಗನ್ ಗಳು, 12 ಸುತ್ತಿನ ಸ್ನಿಪರ್ ರೈಫಲ್, ಆ್ಯಂಟಿ ಟ್ಯಾಂಕ್ ರೈಫಲ್ ಗ್ರೆನೇಡ್ ಮತ್ತು ಮಾರ್ಟರ್ ಶೆಲ್ ಗಳನ್ನು ಸೇನೆ ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.

LEAVE A REPLY

Please enter your comment!
Please enter your name here