ಗಡಿಯಲ್ಲಿ ಗುಂಡಿನ ಕಾಳಗ

0
247

 
ರಾಷ್ಟ್ರೀಯ ಪ್ರತಿನಿಧಿ ವರದಿ
ಜಮ್ಮುಕಾಶ್ಮೀರದ ಗಡಿಯಲ್ಲಿ ಗುಂಡಿನ ಕಾಳಗ ಸಂಭವಿಸಿದೆ. ಶ್ರೀನಗರದ ಕುಪ್ವಾರ ಜಿಲ್ಲೆಯ ಮಚಿಲ್‌ ಸೆಕ್ಟರ್‌ನಲ್ಲಿ ಉಗ್ರಗಾಮಿಗಳು ಮತ್ತು ಯೋಧರ ನಡುವೆ ಬುಧವಾರ ಬೆಳಗ್ಗೆ ಭಾರೀ ಗುಂಡಿನ ಕಾಳಗ ನಡೆದಿದೆ.
 
ಗಡಿ ನಿಯಂತ್ರಣ ರೇಖೆ ಬಳಿ ಗಡಿ ನುಸುಳಲು ಯತ್ನಿಸುತ್ತಿದ್ದ ಉಗ್ರರ ಮೇಲೆ ದಾಳಿ ನಡೆದಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಅಲ್ಲದೆ ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದು, ಐವರು ಯೋಧರು ಗಾಯಗೊಂಡಿದ್ದರು.
 
 
ಗಾಯಾಳುಗಳ ಪೈಕಿ ಇಬ್ಬರು ಯೋಧರ ಸ್ಥಿತಿ ಚಿಂತಾಜನಕವಾಗಿದ್ದು ಅವರಿಗೆ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಇನ್ನೂ ದಾಳಿ ಮುಂದುವರಿಯುತ್ತಿದೆ.

LEAVE A REPLY

Please enter your comment!
Please enter your name here