ಗಡಿಯಲ್ಲಿ ಉದ್ವಗ್ನ ಪರಿಸ್ಥಿತಿ

0
322

ರಾಷ್ಟ್ರೀಯ ಪ್ರತಿನಿಧಿ ವರದಿ
ಕಾಶ್ಮೀರದ ಮಚ್ಚಲ್ ಸೆಕ್ಟರ್‍ನಲ್ಲಿ ಮೂವರು ಯೋಧರನ್ನು ಹತ್ಯೆಗೈದು ಸೈನಿಕನೊಬ್ಬನ ಅಂಗಚ್ಛೇದನ ಮಾಡಿ ಪೈಶಾಚಿಕ ಕೃತ್ಯ ಎಸಗಿರುವ ಪಾಕಿಸ್ತಾನಿ ಪಡೆಗಳಿಗೆ ತಕ್ಕ ಪಾಠ ಕಲಿಸಲು ಭಾರತೀಯ ಸೇನೆ ಕಾರ್ಯಾಚರಣೆಗೆ ಇಳಿದಿರುವುದರಿಂದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯೊಂದಿಗೆ ಸಮರ ಸದೃಶ ವಾತಾವರಣ ನೆಲೆಗೊಂಡಿದೆ. ಇದೇ ವೇಳೆ, ಮತ್ತೆ ಉದ್ಧಟತನ ತೋರಿರುವ ಪಾಕಿಸ್ತಾನ ಪೂಂಚ್ ಜಿಲ್ಲೆಯ ಬಾಲಕೋಟ್ ಸೆಕ್ಟರ್‍ನಲ್ಲಿ ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ದಾಳಿ ಮುಂದುವರಿಸಿದ್ದು, ಭಾರತೀಯ ಯೋಧರೂ ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ.
 
 
 
ನಿನ್ನೆ ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರ ಅಟ್ಟಹಾಸ ಮತ್ತೆ ಮುಂದುವರಿದಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ರಾಕ್ಷಸತನ ಪ್ರದರ್ಶನವಾಗಿದ್ದು, ಪಾಕ್ ಸೇನೆ ಭಾರತೀಯ ಯೋಧನನ್ನು ಹತ್ಯೆಗೈದು ದೇಹವನ್ನು ತುಂಡರಿಸಿದ್ದಾರೆ.
 
 
 
ಜಮ್ಮು-ಕಾಶ್ಮೀರದ ಮಚ್ಚಲ್ ಸೆಕ್ಟರ್ ನಲ್ಲಿ ಪಾಕ್ ಸೇನೆ ಈ ದುಷ್ಕೃತ್ಯ ನಡೆಸಿದೆ.ಪಾಕ್ ಸೇನಯಿಂದ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಮೂವರು ಯೋಧರಲ್ಲಿ ಓರ್ವ ಯೋಧನ ದೇಹವನ್ನು ಪಾಕ್ ಸೇನೆ ತುಂಡರಿಸಿದೆ.
 
 
ಕಳೆದ 1 ತಿಂಗಳಿಂದೀಚೆಗೆ ಪಾಕ್ ಉಗ್ರರು 2ನೇ ಬಾರಿ ಈ ರೀತಿ ದೇಹ ತುಂಡರಿಸಿದ್ದಾರೆ. ಕಳೆದ ಅಕ್ಟೋಬರ್ ನಲ್ಲಿ ಯೋಧ ಮಂದೀಪ್ ಸಿಂಗ್ ಹತ್ಯೆ ಮಾಡಿ, ದೇಹವನ್ನು ತುಂಡರಿಸಿದ್ದರು. ಈಗ ಮತ್ತೊಮ್ಮೆ ಪಾಕ್ ಸೇನೆ ರಾಕ್ಷಸತನ ಪ್ರದರ್ಶಿಸಿದ್ದಾರೆ.
 
 
 
ಇದಕ್ಕೆ ಭಾರತ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರದ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ಸೇನೆ ತನ್ನ ದುಷ್ಕೃತ್ಯಕ್ಕೆ ತಕ್ಕ ಬೆಲೆ ತೆರಲೇಬೇಕು. ಪಾಕ್ ಸೇನೆ ಬಗ್ಗೆ ನಾವು ಯಾವುದೇ ಕರುಣೆ ಇಟ್ಟುಕೊಳ್ಳಲ್ಲ. ಭಾರತೀಯ ಯೋಧರ ಸಾವಿಗೆ ನಾವು ಉತ್ತರ ನೀಡುತ್ತೇವೆ ಎಂದು ಭಾರತೀಯ ಸೇನೆ ಪಾಕ್ ಸೇನೆಗೆ ನೇರ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here