ಗಡಿನಾಡ ಕಣ್ಮಣಿಯ 102ನೇ ಜನ್ಮದಿನ

0
516

 
ಶೀಘ್ರ ಕಯ್ಯಾರ ಸ್ಮಾರಕ ಯೋಜನೆ ಅನುಷ್ಠಾನಕ್ಕೆ ಕಯ್ಯಾರಾಭಿಮಾನಿಗಳ ಒತ್ತಾಯ
ನೇಗಿಲು ಹಿಡಿದ ಕೈ ಲೇಖನಿಯಲ್ಲೂ ಸೈ. ಇವೆರಡರಲ್ಲೀ ಕಯ್ಯಾರರಿಗೆ ಅಪಾರ ಜೀವನ ಶ್ರದ್ಧೆ. ಕನ್ನಡಕ್ಕಾಗಿ ಹೋರಾಡುವ ಕಟ್ಟಾ ಕನ್ನಡಾಭಿಮಾನಿ. ಬೌತಿಕದಷ್ಟೇ, ಬೌದ್ಧಿಕ ಶ್ರೀಮಂತಿಕೆಯೂ ಇವರಲ್ಲಿದೆ.ಮೊನ್ನೆಯಷ್ಟೇ ಏಕೀಕರಣ ಪ್ರಶಸ್ತಿ ಸ್ವೀಕರಿಸಿದ ಇವರುದ್ದು 92ರ ಹರೆಯದಲ್ಲೂ, ಯೌವನದ ಹುಮ್ಮಸ್ಸು. ಇದು ಕಾಸರಗೋಡಿನ ಕನ್ನಡಿಗ ಕಯ್ಯಾರರ ವೈಶಿಷ್ಟ್ಯ. ಇಂದು ಕಯ್ಯಾರರ ಜನ್ಮದಿನಾಚರಣೆ. 102ನೇ ಜನ್ಮದಿನಾಚರಣೆಯ ಈ ಸಂದರ್ಭದಲ್ಲಿ ಕಯ್ಯಾರರ ಸ್ಮಾರಕ ಕೇಂದ್ರ ಶೀಘ್ರ ಸ್ಥಾಪನೆಯಾಗಬೇಕೆಂಬ ಬೇಡಿಕೆ ಕಯ್ಯಾರರ ಅಭಿಮಾನಿಗಳದ್ದಾಗಿದೆ. ಡಾ.ಕಯ್ಯಾರರ ಸ್ಮರಣಾರ್ಥ ಸಾಂಸ್ಕೃತಿಕ ಸಂಶೋಧನಾ ಕೇಂದ್ರ ಸ್ಥಾಪಿಸಲು ಕಾಸರಗೋಡು ಜಿಲ್ಲಾ ಪಂಚಾಯತ್ ಯೋಜನೆ ರೂಪಿಸಿದೆ. ಇದಕ್ಕಾಗಿ ಸ್ಥಳ ಒದಗಿಸಿಕೊಡಲು ಡಾ.ಕಯ್ಯಾರರ ಕುಟುಂಬಸ್ಥರೂ ಮುಂದೆ ಬಂದಿದ್ದಾರೆ.
 
 
 
`ಕಾಸರಗೋಡು ಕರ್ನಾಟಕ್ಕೆ ಸೇರಲಿ’ ಮಾತು ಮುಗಿಸುವುದರೊಳಗೆ ಕೈಯಾರರ ಬಾಯಿಂದ ಈ ವಾಕ್ಯ ಹೊರಬೀಳದ ದಿನಗಳೇ ಇರದು. ಈ ಗುಡುಗು ಎಲ್ಲಿ ಹೋದರೂ ನಿಲ್ಲುವುದಿಲ್ಲ…ಕೇಳದಿರುವುದೂ ಇಲ್ಲ. ಕಯ್ಯಾರರೇ ಹೀಗೆ. ತಮ್ಮ ಬದುಕಿನುದ್ದಕ್ಕೂ ಹೋರಾಡಿದ್ದಾರೆ. ಕನ್ನಡಕ್ಕಾಗಿ ಬದುಕನ್ನೇ ಸವೆಸಿದ್ದಾರೆ. ಕ್ರಾಂತಿಕಾರಿ ಕಿಡಿಗಳ ಮೂಲಕ ಹಲವರ ಕೆಂಗಣ್ಣಿಗೂ ಪಾತ್ರರಾಗಿದ್ದಾರೆ. ಆದರೂ ಬಿಟ್ಟಿಲ್ಲ ಕನ್ನಡದ ಛಲ, ಕನ್ನಡದ ಪ್ರೇಮ ಇದು ಕಯ್ಯಾರರ ವೈಶಿಷ್ಟ್ಯ.
ಗಡಿನಾಡು, ಕನ್ನಡ, ಸಾಹಿತ್ಯ, ಶಿಕ್ಷಣ ಹೀಗೆ ಹಲವು ಕ್ಷೇತ್ರಗಳಲ್ಲಿ ದುಡಿದವರು ಇವರು.
 
 
66ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿ. ಕವಿಯಾಗಿ, ಕೃಷಿಕರಾಗಿ, ಓರ್ವ ಹೋರಾಟಗಾರರಾಗಿ ಗುರುತಿಸಿಕೊಂಡವರು. `ಬೆಂಕಿ ಬಿದ್ದಿದೆ ಮನಗೆ ಓ ಬೇಗ ಬನ್ನಿ’ ಎಂದವರು. ಕಾಸರಗೋಡು ಕರ್ನಾಟಕ್ಕೆ ಸೇರಬೇಂಬ ಮಹದಾಸೆ ಹೊಂದಿದವರು. ಅದಕ್ಕಾಗಿ ಕನ್ನಡ ಧ್ವಜ ಕೈಯಲ್ಲಿ ಹಿಡಿದು ಕಾತರದಿಂದ ಕಾಯುವವರು ಈ ಕೈಯಾರರು.
 
 
ಯಕ್ಷಗಾನ, ರಾಮಾಯಣ, ಮಹಾಭಾರತಗಳ ಪಾರಾಯಣ ದಿನಂಪ್ರತಿ ಕೈಯಾರರ ಮನೆಯಲ್ಲಿ ನಡೆಯುತ್ತಿತ್ತು. ಸುಸಂಸ್ಕೃತ ಮನೆತನದ ಮಗನಾಗಿ ಬೆಳೆದು ಬಂದವರು. ಅಧ್ಯಾಪನ ವೃತ್ತಿ ಇವರ ದೀರ್ಘಕಾಲಿಕ ವೃತ್ತಿ. ಪೆರಡಾಲದ ನವಜೀವನ ಹೈಸ್ಕೂಲ್ ನಲ್ಲಿ 32ವರ್ಷ ಸೇವೆಗೈದವರು. ಕೈಯಾರರ ಇಡೀ ಸಾಧನೆಯ ಅಡಿಯಲ್ಲಿ ಗಟ್ಟಿಯಾಗಿ ನಿಲ್ಲುವಂತಹುದು ಅವರ ಕಾವ್ಯ. ಓರ್ವ ಪ್ರತ್ರಕರ್ತರಾಗಿ ಮಾದರಿಯಾಗಿದ್ದಾರೆ. ಪ್ರಭಾತ, ಸ್ವದೇಶಾಭಿಮಾನಿಗಳಲ್ಲಿ ಉಪಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. `ಕಯ್ಯಾರ’ ಕನ್ನಡ, ಕಾಸರಗೋಡಿನ ಪಾಲಿಗಂತೂ ಒಂದು ಗುಡುಗು. ಅಷ್ಟೇ ಅನಘ್ರ್ಯ ರತ್ನವೂ ಹೌದು.
* ಹರೀಶ್ ಕೆ.ಆದೂರು
ಕಯ್ಯಾರ
ಬ್ರೀಫ್ ಬಯೋಡಾಟಾ
ಡಾ.ಕಯ್ಯಾರ ಕಿಞ್ಞಣ್ಣ ರೈ, ಡಿ.ಲಿಟ್
ಕವಿ, ಗ್ರಂಥಕರ್ತ, ಸ್ವಾತಂತ್ರ್ಯ ಯೋಧ, ರಾಷ್ಟ್ರಪ್ರಶಸ್ತಿ ವಿಜೇತ
ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಕರ್ನಾಟಕ ಏಕೀಕರಣ ಹೋರಾಟಗಾರ
ಜನ್ಮದಿನ: 8ನೇ ಜೂನ್ 1915
ತಾಯಿ: ದೆಯ್ಯಕ್ಕೆ
ತಂದೆ: ದುಗ್ಗಪ್ಪ ರೈ
ಪತ್ನಿ : ಉಞ್ಞಕ್ಕೆ
ಮಕ್ಕಳು:ಎಂಟು ಮಂದಿ
ವಿದ್ಯಾರ್ಹತೆ: ಬಿ.ಎ ಪದವಿ(ಪ್ರಥಮ ಶ್ರೇಣಿ)
ಎಂ.ಎ ಪದವಿ(ದ್ವಿತೀಯ ಶ್ರೇಣಿ)
ವಿದ್ವಾನ್ ಸಂಸ್ಕೃತ-ಕನ್ನಡ(ದ್ವಿತೀಯ ಶ್ರೇಣಿ)
ಅಧ್ಯಾಪಕ ತರಬೇತಿ ಪದವಿ (ಪ್ರಥಮ ಶ್ರೇಣಿ)
ಸಾಹಿತ್ಯ ಕೃತಿಗಳು:
1 ಪದ್ಯಕೃತಿಗಳು:
ಶ್ರೀಮುಖ
ಐಕ್ಯಗಾನ
ಪುನರ್ನವ
ಮಕ್ಕಳ ಪದ್ಯಮಂಜರಿ, ಭಾಗ1, ಭಾಗ2
ಚೇತನ
ಪಂಚಮೀ-ಉಪನಿಷತ್ತುಗಳ ಕನ್ನಡಾನುವಾದ
ಕೊರಗ ಮತ್ತು ಕೆಲವು ಕವನಗಳು
ಶತಮಾನದ ಗಾನ(111 ಕವನಗಳು)
ಪ್ರತಿಭಾಪಯಸ್ವಿನೀ(ಸ್ವ-ಕವನಗಳ ಬೃಹತ್ ಸಂಪುಟ)
ಗಂಧವತೀ
ಆಶಾನರ ಖಂಡ ಕಾವ್ಯಗಳು (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಾಶಿತ)
ಎನ್ನಪ್ಪೆ ತುಳುವಪ್ಪೆ(ತುಳು ಭಾಷೆಯ ಸ್ವಂತ ಕವನಗಳು)
2 ಗದ್ಯ ಕೃತಿಗಳು
ರತ್ನರಾಶಿ- ರಾಷ್ಟ್ರಧುರೀಣರ ಜೀವನ ಚಿತ್ರಣಗಳು
ಲಕ್ಷ್ಮೀಶನ ಲಲಿತ ಕಥೆಗಳು-ಜೈಮಿನಿ ಭಾರತದ ಕಥೆಗಳು ಗದ್ಯರೂಪದಲ್ಲಿ
ಅನ್ನದೇವರು ಮತ್ತು ಇತರ ಕಥೆಗಳು -ಸ್ವತಂತ್ರ ಸಣ್ಣ ಕಥೆಗಳ ಸಂಗ್ರಹ
ಪರಶುರಾಮ- ಪುರಾಣ ಮಹಾಪುರುಷರ ಜೀವನ ಚಿತ್ರಣ
ಎ.ಬಿ ಶೆಟ್ಟಿ – ಉಭಯ ರಾಜ್ಯಗಳಲ್ಲಿ ಮಂತ್ರಿಗಳಾಗಿದ್ದ ಖ್ಯಾತ ಸಮಾಜ ಸೇವಕ ಅತ್ತಾವರ ಬಾಲಕೃಷ್ಣ ಶೆಟ್ಟಿಯವರ ಜೀವನ ಚಿತ್ರಣ
ಕನ್ನಡ ಶಕ್ತಿ-ಜೀವನ ಚರಿತ್ರೆ
ಕಾರ್ನಾಡು ಸದಾಶಿವ ರಾವ್- ಹಿರಿಯ ಸ್ವಾತಂತ್ರ್ಯ ಯೋಧರ ಜೀವನ ಚರಿತ್ರೆ
ನಾರಾಯಣ ಕಿಲ್ಲೆ- ದೇಶಭಕ್ತ, ವಾಗ್ಮಿ, ಎನ್.ಎಸ್ ಕಿಲ್ಲೆ ಜೀವನ ಚರಿತ್ರೆ
ಇವಲ್ಲದೆ 6 ಸಾಹಿತ್ಯ ಸಾಧನೆ ಮತ್ತು ಸಾಹಿತ್ಯ ವಿಮರ್ಶೆ, 4 ವ್ಯಾಕರಣ ಮತ್ತು ಪ್ರಬಂಧ, 8ವಿದ್ಯಾರ್ಥಿಗಳ ಕನ್ನಡ ಪಾಠಮಾಲೆ, ನಾಟಕ, ದುಡಿತವೇ ನನ್ನ ದೇವರು ಆತ್ಮಕಥನ.
1969-70ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸಂಸ್ಥೆಯ ಗೌರವ ಫೆಲೋಶಿಪ್, ರಾಷ್ಟ್ರಪತಿ ವಿ.ವಿ ಗಿರಿಯವರಿಂದ 1969ರಲ್ಲಿ ಶ್ರೇಷ್ಠ ಅಧ್ಯಾಪಕ ರಾಷ್ಟ್ರ ಪಶಸ್ತಿಯೂ ಸೇರಿದಂತೆ 120ರಷ್ಟು ಪ್ರಶಸ್ತಿ, ಗೌರವ ಸನ್ಮಾನಗಳು ಇವರಿಗೆ ಸಂದಿದೆ.
ಕಯ್ಯಾರ ಸಾಹಿತ್ಯ ಮಹಾಪ್ರಬಂಧಗಳಿಗೆ ಡಾಕ್ಟರೇಟ್ :
ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಪ್ರಾಚಾರ್ಯ ಹರಶಿವ ಮೂರ್ತಿಯವರು ಕಯ್ಯಾರರ ಸಮಗ್ರ ಸಾಹಿತ್ಯ ವಿಷಯದ ಮಹಾಪ್ರಬಂಧ ರಚಿಸಿ ಮೈಸೂರು ವಿ.ವಿಯಿಂದ ಡಾಕ್ಟರೇಟ್ ಪಡೆದಿದ್ದಾರೆ.
ಉಜಿರೆ ಶ್ರೀ ಮಂಜುನಾಥೇಶ್ವರ ಕಾಲೇಜಿನ ಪ್ರಾಚಾರ್ಯ ಶ್ರೀನಾಥ್, ಮುಂಬಯಿ ವಿ.ವಿ ಯಿಂದ ಕಯ್ಯಾರ ಸಮಗ್ರ ಸಾಹಿತ್ಯ ಜೀವನ ಕುರಿತು ಮಹಾಪ್ರಬಂಧ ರಚಸಿ ಡಾಕ್ಟರೇಟ್ ಪಡೆದಿದ್ದಾರೆ.
ಕೆನರಾ ಕಾಲೇಜಿನ ಪ್ರಾಧ್ಯಾಪಿಕೆ ವಾಣಿ ಕಯ್ಯಾರ ಸಾಹಿತ್ಯದ ಕುರಿತು ರಚಿಸಿದ ಮಹಾಪ್ರಬಂಧಕ್ಕೆ ಕಲ್ಲಿಕ್ಕೋಟೆ ವಿ.ವಿ ಎಂ.ಫಿಲ್ ಪದವಿ ನೀಡಿದೆ.

LEAVE A REPLY

Please enter your comment!
Please enter your name here