ಗಂಭೀರವಾಗುತ್ತಿದೆ ಕಾವೇರಿ ಕೂಗು…

0
236

 
ಬೆಂಗಳೂರು ಪ್ರತಿನಿಧಿ ವರದಿ
ಕಾವೇರಿ ನೀರಿಗಾಗಿ ಕನ್ನಡಿಗರು ಸಿಡಿದೆದಿದ್ದಾರೆ. ರಾಜ್ಯಾದ್ಯಂತ ಕಾವೇರಿಗಾಗಿ ಕೂಗು ಹೆಚ್ಚಾಗಿದೆ. ಮಂಡ್ಯದ ಸಂಜಯ್ ಸರ್ಕಲ್ ನಲ್ಲಿ ಸಾವಿರಾರು ಜನ ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾವಿರಾರು ಜನರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದೆ.
ಬೆಂಗಳೂರಿನಲ್ಲೂ ಕಾವೇರಿಗಾಗಿ ಜನಸಾಗರ ಸೇರಿದೆ. ಟೌನ್ ಹಾಲ್ ನಿಂದ ಫ್ರೀಡಂಪಾರ್ಕ್ ಗೆ ಪ್ರತಿಭಟನಾ ಮೆರವಣಿಗೆ ನಡೆದಿದೆ.
 
 
 
ಕಾವೇರಿ ಹೋರಾಟಕ್ಕಾಗಿ ಸ್ಯಾಂಡಲ್ ವುಡ್ ಕೂಡ ಪ್ರತಿಭಟನೆ ನಡೆಸುತ್ತಿದೆ. ಫಿಲಂ ಛೇಂಬರ್ ಬಳಿ ಸಿನಿ ತಾರೆಯರು ಧರಣಿ ನಡೆಸುತ್ತಿದ್ದಾರೆ. ಶಿವಣ್ಣ, ಪುನೀತ್, ದರ್ಶನ, ಗಣೇಶ, ಉಪೇಂದ್ರ, ಭಾರತಿ ವಿಷ್ಣುವರ್ಧನ್, ಅಮೂಲ್ಯ ಹರಿಪ್ರಿಯಾ, ಮಾನ್ವಿತಾ, ರಶ್ಮಿ, ಲೀಲಾವತಿ, ವಿನೋದ್ ರಾಜ್, ಅನಿರುದ್ಧ್, ತಾರಾ, ಮಯೂರಿ ಸುಧಾರಾಣಿ, ಲಹರಿ ಮೇಲು, ಹಂಸಲೇಖ, ಶೃತಿ, ಓಂಸಾಯಿ ಪ್ರಕಾಶ್, ರಾಗಿಣಿ, ಶ್ರೀಮುರಳಿ, ವಿಜಯರಾಘವೇಂದ್ರ, ದೇವರಾಜ್, ಪ್ರಜ್ವಲ್, ಶಿವರಾಂ, ಜಗ್ಗೇಶ್, ಬಿಸಿ ಪಾಟೀಲ್, ರಂಗಾಯಣ ರಘು, ಹರಿಪ್ರಿಯಾ, ಪದ್ಮವಸಂತಿ ಸೇರಿ ಹಲವು ತಾರೆಯರು ಉಪಸ್ಥಿತರಿದ್ದಾರೆ.
 
ಆತ್ಮಹತ್ಯೆಗೆ ಯತ್ನ
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ರಾಜ್ಯದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಕೆಆರ್ ಎಸ್ ಬಳಿ ನದಿಗೆ ಹಾರಿ ರೈತ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಂದ್ರೇಗ್ರಾಮದ ರೈತ ರಾಮೇಗೌಡ(58) ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನದಿಗೆ ಹಾರಿ ಗಿಡಗಂಟೆಗಳ ನಡುವೆ ಸಿಲುಕಿದ್ದ ರೈತನನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ. ಮೋಟಾರ್ ರಬ್ಬರ್ ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ. ಬಳಿಕ ಪೊಲೀಸರು ಆ್ಯಂಬುಲೆನ್ಸ್ ನಲ್ಲಿ ರೈತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

LEAVE A REPLY

Please enter your comment!
Please enter your name here