ಗಂಗಾಧರ ಬೆಳ್ಳಾರೆ ಇನ್ನಿಲ್ಲ

0
429

ನಮ್ಮ ಪ್ರತಿನಿಧಿ ವರದಿ
ಪುತ್ತೂರು. ಸಾಹಿತಿ, ಅಂಕಣಕಾರ,ವಿಮರ್ಶಕ ಗಂಗಾಧರ ಬೆಳ್ಳಾರೆ(51)ಶನಿವಾರ ವಿಧಿವಶರಾಗಿದ್ದಾರೆ. ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಳ್ಳಾರೆ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.
 
 
ಮೂಲತಃ ಸುಳ್ಯ ತಾಲೂಕಿನ ಬೆಳ್ಳಾರೆಯವರಾದ ಗಂಗಾಧರ್, ಪ್ರಸ್ತುತ ಪುತ್ತೂರಿನಲ್ಲಿ ವಾಸವಾಗಿದ್ದರು. ವಿಜಯವಾಣಿಯಲ್ಲಿ ಮನೋವಿಶ್ಲೇಷಣಾ ಅಂಕಣ ಬರೆಯುತ್ತಿದ್ದರು. ಪುತ್ತೂರಿನಲ್ಲಿ ಕೌನ್ಸೆಲಿಂಗ್ ಕೇಂದ್ರ ನಡೆಸುತ್ತಿದ್ದರು. ಮನೋವಿಶ್ಲೇಷಣಾ ಕೃತಿಗಳನ್ನು ರಚಿಸಿದ್ದಾರೆ.
 
 
 
ನಾಟಕಕಾರರಾಗಿದ್ದ ಅವರು ಯಕ್ಷಗಾನ ಅರ್ಥಧಾರಿಯಾಗಿಯೂ ಹೆಸರು ಪಡೆದಿದ್ದರು. ಸಿನಿಮಾ, ಟಿವಿ ಕ್ಷೇತ್ರಗಳಲ್ಲೂ ಆಸಕ್ತಿ ಹೊಂದಿದ್ದರು.  ಇವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here