ಖ್ಯಾತ ಅರ್ಥಶಾಸ್ತ್ರಜ್ಞ ಶೆಲ್ಲಿಂಗ್ ನಿಧನ

0
607

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಖ್ಯಾತ ಅರ್ಥಶಾಸ್ತ್ರಜ್ಞ ಥಾಮಸ್ ಶೆಲ್ಲಿಂಗ್(95) ಅವರು ಮಂಗಳವಾರ ಮೇರಿಲ್ಯಾಂಡ್ ನಲ್ಲಿರುವ ಸ್ವನಿವಾಸದಲ್ಲಿ ನಿಧನರಾಗಿದ್ದಾರೆ. ಇವರು ವಯೋ ಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು.
 
 
2005ರಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ರಾಬರ್ಟ್ ಔಮನ್ನ್ ರೊಂದಿಗೆ ಜಂಟಿ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದರು. ಹಾರ್ವರ್ಡ್ ವಿಶ್ವವಿದ್ಯಾಲಯ ಹಾಗೂ ಮೆರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಪ್ರೊಫೆಸರ್ ಆಗಿದ್ದ ಥಾಮಸ್ ಶೆಲ್ಲಿಂಗ್ ಅವರು, ಪರಮಾಣು ತಂತ್ರಗಾರಿಕೆಯನ್ನು ಗೇಮ್ ಥಿಯರಿ ಮೂಲಕ ವಿವರಿಸಿದ್ದರು. ಥಾಮಸ್ ಶೆಲ್ಲಿಂಗ್ ಅವರ ಗೇಮ್ ಥಿಯರಿ ಗಣಿತಶಾಸ್ತ್ರದ ಅಧ್ಯಯನವಾಗಿದ್ದು, ಸ್ಪರ್ಧಾತ್ಮಕ ಸಂದರ್ಭಗಳ ತಂತ್ರಗಾರಿಕೆಯಾಗಿವೆ. ಇವರ ಸಾಧನೆಯನ್ನು ಪುರಸ್ಕರಿಸಿ ಅವರಿಗೆ 2005ರಲ್ಲಿ ನೊಬೆಲ್ ಪಾರಿತೋಷಕ ನೀಡಲಾಗಿತ್ತು.

LEAVE A REPLY

Please enter your comment!
Please enter your name here