ಖಾಸಗೀ ಶಾಲೆಗಳ ಫೀಸ್‌ ಮಾಫಿಯಾ!

0
1228
ಖಾಸಗೀ ಶಾಲೆಯೊಂದರ ಮುಖ್ಯೋಪಾಧ್ಯಾಯರ ಮೆಸೇಜ್‌ ಇದು!

ಖಾಸಗೀ ಶಾಲೆಗಳ ಫೀಸ್‌ ಮಾಫಿಯಾ! : ಕೊರೊನಾದಿಂದ ಅನೇಕ ಪ್ರಾಥಮಿಕ,ಪೂರ್ವ ಪ್ರಾಥಮಿಕ ತರಗತಿಗಳು ಆರಂಭವಾಗಿಲ್ಲ. ಆನ್‌ ಲೈನ್‌ ಎಂಬ ಹೆಸರಿನಲ್ಲಿ ಕೆಲವು ತರಗತಿಗಳು ನಡೆದಿವೆ. ಇನ್ನನೇಕ ಕಡೆಗಳಲ್ಲಿ ವಾಟ್ಸ್‌ ಆಪ್‌ ಮೂಲಕ ತರಗತಿಗಳ ಮಾಹಿತಿಗಳನ್ನು ನೀಡುವ ಕಾರ್ಯ ನಡೆದಿದೆ. ಹೀಗಿದ್ದರೂ ಶಾಲಾ ಫೀಸ್‌ ಮಾತ್ರ ಪೂರ್ತಿ ಕಟ್ಟಲೇ ಬೇಕೆಂಬ ತಾಕೀತು ಖಾಸಗೀ ಶಾಲೆಗಳಿಂದ ಬರಲಾರಂಭಿಸಿದೆ.ಖಾಸಗೀ ಶಾಲೆಗಳ ಹಣದಾಹ ಅತಿಯಾಗಿದೆ. ಈಗಾಗಲೇ ಮೂಡುಬಿದಿರೆ ವ್ಯಾಪ್ತಿಯ ಹಲವು ಶಾಲೆಗಳು ಪೋಷಕರಲ್ಲಿ ಶಾಲಾ ಫೀಸ್‌ ಬರಿಸುವಂತೆ ವಿನಂತಿಸಿದ್ದು ಹಲವು ಪೋಷಕರು ಅರ್ಧಾಂಶ ಫೀಸು ಕಟ್ಟಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ ಒಂದೇ ಒಂದು ತರಗತಿಯೂ ನಡೆದಿಲ್ಲ. ಹೆಸರಿಗಷ್ಟೇ ಆನ್‌ ಲೈನ್‌ ಕ್ಲಾಸ್‌ ನಡೆದಿದೆ. ಹೀಗಿದ್ದರೂ ಪೂರ್ಣ ಫೀಸ್‌ ಪಾವತಿಮಾಡಬೇಕೆಂಬ ಒತ್ತಾಯದ , ಬೆದರಿಕೆಯ ಮೆಸೇಜ್‌ಗಳು ಖಾಸಗೀ ಶಾಲೆಯ ಮುಖ್ಯೋಪಾಧ್ಯಾಯರಿಂದ ಪೋಷಕರಿಗೆ ಬರಲಾರಂಭಿಸಿದೆ.
ಸರಕಾರಕ್ಕೆ ಮನವಿ: ಖಾಸಗೀ ಶಾಲೆಗಳ ಫೀಸ್‌ ಮಾಫಿಯಾದ ಬಗ್ಗೆ ಪೋಷಕರು ಎಚ್ಚರಗೊಂಡಿದ್ದಾರೆ. ಈಗಾಗಲೇ ಸರಕಾರಕ್ಕೆ ಈ ಬಗ್ಗೆ ಮಾಹಿತಿ ನೀಡುವ ಲಿಖಿತ ದೂರು ನೀಡುವ ಕಾರ್ಯ ಮಾಡಿದ್ದಾರೆ. ಕೊರೊನಾದಿಂದ ವ್ಯವಹಾರಗಳೆಲ್ಲವೂ ನೆಲಕ್ಕಚ್ಚಿದ ಸಂದರ್ಭ , ಈ ರೀತಿ ಫೀಸ್‌ ನೀಡುವಂತೆ ಕಿರಿಕಿರಿ ಮಾಡುತ್ತಿರುವ ಶಾಲಾ ಉಸ್ತುವಾರಿಗಳ ಬಗ್ಗೆ ಪೋಷಕರು ಕಿಡಿ ಕಾರುತ್ತಿದ್ದಾರೆ.

ಈ ರೀತಿಯ ಮಾಹಿತಿಗಳು ನಿಮ್ಮಲ್ಲಿದ್ದರೆ ನಮಗೆ ಕಳುಹಿಸಿ…

LEAVE A REPLY

Please enter your comment!
Please enter your name here