ಖಾಸಗಿ ಆಸ್ಪತ್ರೆಗಳ ಕಡಿವಾಣ!

0
413

ಬೆಂಗಳೂರು ಪ್ರತಿನಿಧಿ ವರದಿ
ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಶೀಘ್ರವೇ ಹೊಸ ಶಾಸನ ಜಾರಿಗೆ ತರಲಾಗುತ್ತದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.
 
 
ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಖಾಸಗಿ ಆಸ್ಪತ್ರೆಗಳ ದುಬಾರಿತನಕ್ಕೆ ಬ್ರೇಕ್ ಹಾಸಲು ಶಾಸನ ರೂಪಿಸಲಾಗುತ್ತದೆ. ಕಾಯಿದೆಯನ್ನು ತಿದ್ದುಪಡಿ ತರಲು ತಜ್ಞರ ಸಮಿತಿ ರಚಿಸಲಾಗಿದೆ. ನ್ಯಾ.ವಿಕ್ರಮ್ ಜಿತ್ ಸೇನ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆಯಾಗಿದೆ. ಈ ಸಮಿತಿ ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳ ದುಬಾರಿತನದ ಕುರಿತು ಪರಿಶೀಲನೆ ನಡೆಸಿ 8 ವಾರಗಳಲ್ಲಿ ತನ್ನ ವರದಿ ಸಲ್ಲಿಸಲಿದೆ. ವೈದ್ಯಕೀಯ ಸೇವೆಗೆ ದರ ನಿಗದಿ ಸೇರಿದಂತೆ ಹಲವು ಶಿಫಾರಸ್ಸುಗಳನ್ನು ಸಮಿತಿ ನೀಡಲಿದೆ ಎಂದಿದ್ದಾರೆ.
 
 
ಸಚಿವನಾದಾಗಿನಿಂದ ಹಲವು ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಆಸ್ಪತ್ರೆಗಳಲ್ಲಿ ಪರಿಶೀಲನೆ ವೇಳೆ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದೇನೆ. ಈ ವೇಳೆ ಸಾಕಷ್ಟು ನೊಂದ ಜನರ ಆಸ್ಪತ್ರೆಗಳ ದುಬಾರಿತನದ ಕುರಿತು ದೂರಿದ್ದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗಲ್ಲ ಎನ್ನುವ ಆರೋಪವಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ದುಬಾರಿತನಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಶಾಸನವನ್ನು ಜಾರಿಗೆ ತರುವುದಾಗಿ ರಮೇಶ್ ಕುಮಾರ್ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here