ಖಾದ್ಯ-ಕಾಯಿ ಕಡುಬು

0
412

 
ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು:
1 ಕಪ್ ಅಕ್ಕಿ, 1/2 ಕಪ್ ಗೋದಿ ಹಿಟ್ಟು, 1 ಕಪ್ ಕಾಯಿ ತುರಿ, 1/2 ಬೆಲ್ಲ-೧/೨ ಕಪ್, 4 ಚ. ತುಪ್ಪ, ಏಲಕ್ಕಿ ಪುಡಿ, ಉಪ್ಪು.
 
 
ತಯಾರಿಸುವ ವಿಧಾನ:
ಅಕ್ಕಿಯನ್ನು ನಾಲ್ಕು ತಾಸು ನೀರಲ್ಲಿ ನೆನೆಸಿ ನುಣ್ಣಗೆ ರುಬ್ಬ ಬೇಕು. ರುಬ್ಬಿದ ಹಿಟ್ಟಿಗೆ ಗೋದಿ ಹಿಟ್ಟು ಮತ್ತು ಉಪ್ಪನ್ನು ಸೇರಿಸಬೇಕು. ತಯಾರಿಸಿದ ಹಿಟ್ಟು ದೋಸೆ ಹಿಟ್ಟಿಗಿಂತ ಸ್ವಲ್ಪ ನೀರಾಗಿರಬೇಕು. ಹಿಟ್ಟನ್ನು ಒಂದು ಬಾಣಲಿಗೆ ಹಾಕಿ ತುಪ್ಪವನ್ನು ಸೇರಿಸಿ ಒಲೆಯ ಮೇಲಿಟ್ಟು ಗಟ್ಟಿಯಾಗುವವರೆಗೆ ಮಗುಚಬೇಕು. ಉಂಡೆ ಕಟ್ಟುವ ಹದಕ್ಕೆ ಬಂದಾಗ ಒಲೆಯಿಂದ ಇಳಿಸಿ. ಕೈಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು ಉಂಡೆ ಮಾಡಿ ಬಟ್ಟಲಿನ ಆಕಾರ ಮಾಡಿ ಕಾಯಿ-ಬೆಲ್ಲದ ಹೂರಣವನ್ನು ಒಳಗಿಟ್ಟು ಮಡಿಚಿ ಸುತ್ತಲೂ ಸೇರಿಸಬೇಕು. ನಂತರ ಉಗಿಯ ಮೇಲೆ ಹತ್ತು ನಿಮಿಷ ಬೇಯಿಸಬೇಕು.

LEAVE A REPLY

Please enter your comment!
Please enter your name here