ಖಾಕಿ ಮೇಲೆ ದಾಳಿಗೆ ಪಾತಕಿಗಳ ಸ್ಕೆಚ್

0
569

ಬೆಂಗಳೂರು ಪ್ರತಿನಿಧಿ ವರದಿ
ಖಾಕಿಪಡೆಯ ಮೇಲೆ ದಾಳಿ ನಡೆಸಲು ಪಾತಕಿಗಳು ಸ್ಕೆಚ್ ಹಾಕಿದ್ದಾರೆಂಬ ಭಯಾನಕ ವಿಚಾರವೊಂದು ಬೆಳಕಿಗೆ ಬಂದಿದೆ. ಬೆಂಗಳೂರು ಪೊಲೀಸರ ಮೇಲೆ ದಾಳಿಗೆ ಪಾತಕಿಗಳು ಪ್ಲ್ಯಾನ್ ಮಾಡಿದ್ದಾರೆ.
 
 
ದಾಳಿ ನಡೆಸಲು ಭೂಗತ ಪಾತಕಿಗಳು, ರೌಡಿಗಳು ಚಿಂತನೆ ನಡೆಸಿದ್ದಾರೆ. ಇದರಿಂದ ಬೆಂಗಳೂರು ನಗರದಲ್ಲಿ ಶಾಂತಿ ಕದಡಲು ರೌಡಿಗಳು ಪ್ಲ್ಯಾನ್ ಮಾಡಿದ್ದಾರೆ ಎಂದು ಪೊಲೀಸ್ ಇಲಾಖೆಗಳ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
 
 
ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ರೌಡಿಗಳು ಸಭೆ ಸೇರಿದ್ದರು. ಸಭೆಯಲ್ಲಿ ದೊಡ್ಡದೊಡ್ಡ ರೌಡಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
 
 
 
ರೌಡಿಶೀರ್ ಅಗ್ನಿಶ್ರೀಧರ್, ಬಚ್ಚನ್, ಸೈಲೆಂಟ್ ಸುನೀಲ್ ಮತ್ತು ಒಂಟೆ ರೋಹಿತ್ ಸೇರಿದಂತೆ ಹಲವರ ಬಂಧನವಾದ ಹಿನ್ನೆಲೆಯಲ್ಲಿ ಪೊಲೀಸರನ್ನು ಟಾರ್ಗೆಟ್ ಮಾಡಿ ಅಪರಾಧ ಕೃತ್ಯಕ್ಕೆ ಪ್ಲ್ಯಾನ್ ಮಾಡಿದ್ದಾರೆ.
 
 
ವಿಷಯ ತಿಳಿದ ಪೊಲೀಸರು ನಿನ್ನೆ ತಡರಾತ್ರಿ ದಾಳಿ ನಡೆಸಿದ್ದಾರೆ. ಪೊಲೀಸರ ತಂಡ ಸಂಚು ರೂಪಿಸುತ್ತಿದ್ದ ನಾಲ್ವರು ರೌಡಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಹಿರಿಯ ಅಧಿಕಾರಿಗಳು ನಕಾರ ಮಾಡಿದ್ದಾರೆ.

LEAVE A REPLY

Please enter your comment!
Please enter your name here